ಗಂಡ ದುಡಿಯೋದೆಲ್ಲಾ ನಿಮ್ಮ ಬಟ್ಟೆ-ಬ್ಯಾಗ್‌ಗೆ ಸಾಲಲ್ಲ; ರೋಹಿಟ್‌ ಶರ್ಮಾ ಪತ್ನಿ ಟ್ರೋಲ್

Published : Jul 08, 2024, 05:02 PM ISTUpdated : Jul 08, 2024, 05:18 PM IST

ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಪುತ್ರಿ ರಿತಿಕಾ ಸಜ್ದೇ ಒಂದು ವಿಚಾರಕ್ಕೆ ಫುಲ್ ಟ್ರೋಲ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

PREV
18
ಗಂಡ ದುಡಿಯೋದೆಲ್ಲಾ ನಿಮ್ಮ ಬಟ್ಟೆ-ಬ್ಯಾಗ್‌ಗೆ ಸಾಲಲ್ಲ; ರೋಹಿಟ್‌ ಶರ್ಮಾ ಪತ್ನಿ ಟ್ರೋಲ್

ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿದ್ದ ಭಾರತ ತಂಡವು, ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

28

2013ರ ಬಳಿಕ ಪದೇ ಪದೇ ಐಸಿಸಿ ಟ್ರೋಫಿ ಗೆಲುವಿನ ಹೊಸ್ತಿಲಲ್ಲಿ ಎಡವುತ್ತಲೇ ಬಂದಿದ್ದ ಟೀಂ ಇಂಡಿಯಾ, ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಬಗ್ಗುಬಡಿದು ಐಸಿಸಿ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು.

38

ಇದೀಗ ರೋಹಿತ್ ಶರ್ಮಾ, ಧೋನಿ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಆಟಗಾರನಾಗಿ ಹಾಗೂ ನಾಯಕನಾಗಿ ಟಿ20 ವಿಶ್ವಕಪ್ ಗೆದ್ದ ಭಾರತದ ಏಕೈಕ ಕ್ರಿಕೆಟಿಗ ಎನ್ನುವ ಹಿರಿಮೆಯೂ ಹಿಟ್‌ಮ್ಯಾನ್ ಪಾಲಾಗಿದೆ.

48

ಇನ್ನು ರೋಹಿತ್ ಶರ್ಮಾ ಏಳುಬೀಳಿನಲ್ಲಿ ಸದಾ ಜತೆಯಾಗಿಯೇ ನಿಂತಿರುವ ಪತ್ನಿ ರಿತಿಕಾ ಸಜ್ದೇ, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೈದಾನಕ್ಕೆ ಬಂದು ಪತಿ ಮತ್ತು ಟೀಂ ಇಂಡಿಯಾವನ್ನು ಹುರಿದುಂಬಿಸಿದ್ದರು.

58

ಆದರೆ ಇದೀಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹೌದು, ಸಾಕಷ್ಟು ಸ್ಟೈಲೀಷ್ ಆಗಿ ಕಾಣಿಸಿಕೊಳ್ಳುವ ರಿತಿಕಾ, ಇದೀಗ ತಾವು ಧರಿಸುವ ಡ್ರೆಸ್ ಮೂಲಕವೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

68

ಹೌದು ರಿತಿಕಾ ಸಜ್ದೇ ಫಾರ್ಮ್‌ ರಿಯೊ ಮ್ಯಾಕೌ ಪುಫ್ ಸ್ಲೀವ್ ರೊಂಪರ್ ಎನ್ನುವ ಡ್ರೆಸ್‌ ತೊಟ್ಟಿರುವ ಫೋಟೋವೊಂದು ವೈರಲ್ ಆಗಿದ್ದು, ಇದರ ಬೆಲೆ ಬರೋಬ್ಬರಿ 21,706.04 ರುಪಾಯಿಗಳು.

78

ಇನ್ನು ಇದೇ ಡ್ರೆಸ್ ಜತೆಗೆ ನೀಲಿ ಬಣ್ಣದ ಸಣ್ಣ ಸಿ'ಸೆಸ್ಟ್ ಡಿಯೊರ್ ಒಬ್ಲಿಕ್ ಜಾಕಾರ್ಡ್‌ ಎನ್ನುವ ಸೈಡ್‌ ಬ್ಯಾಗ್‌ನ ಬೆಲೆ ಬರೋಬ್ಬರಿ 4,05,932 ರುಪಾಯಿಗಳು. ಇದು ಕೆಲವರ ಒಂದು ವರ್ಷದ ಸಂಪಾದನೆ.

88

ಒಟ್ಟಿನಲ್ಲಿ ರೋಹಿತ್ ಶರ್ಮಾ ದುಡಿಯುವ ಹಣವೆಲ್ಲಾ ಪತ್ನಿ ರಿತಿಕಾ ಬಟ್ಟೆಬರೆಗೆ ಸಾಲೊಲ್ಲ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories