ಅಹಮದಾಬಾದ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇನ್ನಿಂಗ್ಸ್ ಹಾಗೂ 140 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರ ಜತೆಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ.
ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಮೊದಲ ಪಂದ್ಯವನ್ನು ಕೇವಲ ಮೂರೇ ದಿನದಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.
26
ಹೊಸ ಮೈಲಿಗಲ್ಲು ನೆಟ್ಟ ಭಾರತ
ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ ಅಂತಾರಾಷ್ಟ್ರೀಯ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು 921ಕ್ಕೆ ಹೆಚ್ಚಿಸಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಪಂದ್ಯ ಗೆದ್ದ ತಂಡಗಳ ಪೈಕಿ ಜಂಟಿ 2ನೇ ಸ್ಥಾನಕ್ಕೇರಿದೆ.
36
1915ರಿಂದ ಟೆಸ್ಟ್ ಆಡುತ್ತಿರುವ ಭಾರತ
1932ರಿಂದಲೇ ಭಾರತ ಟೆಸ್ಟ್ ಆಡುತ್ತಿದ್ದರೂ ಮೊದಲ ಗೆಲುವು ಸಿಕ್ಕಿದ್ದು 20 ವರ್ಷಗಳ ಬಳಿಕ, ಅಂದರೆ 1952ರಲ್ಲಿ, ಈ ತನಕ ಭಾರತ 1915 ಪಂದ್ಯಗಳನ್ನಾಡಿವೆ. ಈ ಪೈಕಿ 702ರಲ್ಲಿ ಸೋತಿದ್ದರೆ, 50 ಪಂದ್ಯಗಳು ರದ್ದುಗೊಂಡಿವೆ.
ಭಾರತಕ್ಕಿಂತ 55 ವರ್ಷ ಮೊದಲೇ, ಅಂದರೆ 1877ರಿಂದಲೇ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ಕೂಡಾ 921 ಗೆಲುವು ಸಾಧಿಸಿದೆ. ಆದರೆ ತಂಡ ಭಾರತಕ್ಕಿಂತ 102 ಹೆಚ್ಚು (ಒಟ್ಟು 2117) ಪಂದ್ಯಗಳನ್ನು ಆಡಿದೆ.
56
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾಗೆ ಸಿಕ್ಕಿದೆ ಅತಿಹೆಚ್ಚು ಗೆಲುವು
ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಆಸ್ಟ್ರೇಲಿಯಾ ತಂಡಕ್ಕಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳು ಸೇರಿದಂತೆ ಒಟ್ಟಾರೆ 2107 ಪಂದ್ಯಗಳಲ್ಲಿ 1157ರಲ್ಲಿ ಗೆದ್ದಿದೆ.
66
ಭಾರತಕ್ಕೆ ಟೆಸ್ಟ್ ಗೆಲುವಿನಲ್ಲಿ ಐದನೇ ಸ್ಥಾನ
ಇನ್ನು, ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 422, ಇಂಗ್ಲೆಂಡ್ 403, ದ.ಆಫ್ರಿಕಾ 188, ವೆಸ್ಟ್ಇಂಡೀಸ್ 185, ಭಾರತ 183 ಪಂದ್ಯಗಳಲ್ಲಿ ಗೆದ್ದಿವೆ.