IPL ಟೂರ್ನಿಗೆ ಗುಡ್‌ಬೈ ಹೇಳಿದ ದಿಗ್ಗಜ ಆಟಗಾರನಿಗೆ ಬಿಗ್ ಶಾಕ್; ಮುಗಿಯಿತಾ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?

Published : Oct 05, 2025, 11:33 AM IST

ಬೆಂಗಳೂರು: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ ಐಪಿಎಲ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಭಾರತದ ದಿಗ್ಗಜ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್‌ಗೆ ಜಾಗತಿಕ ಮಟ್ಟದಲ್ಲಿ ನಿರಾಸೆ ಎದುರಾಗಿದ್ದು, ಅವರ ಸಂಪೂರ್ಣ ಕ್ರಿಕೆಟ್ ವೃತ್ತಿಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. 

PREV
16
ಅಶ್ವಿನ್‌ಗೆ ಜಾಗತಿಕ ಮಟ್ಟದಲ್ಲಿ ನಿರಾಸೆ

ಅಂತಾರಾಷ್ಟ್ರೀಯ ಹಾಗೂ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ಗೆ ದಿಢೀರ್ ವಿದಾಯ ಘೋಷಿಸಿರುವ ರವಿಚಂದ್ರನ್ ಅಶ್ವಿನ್‌ಗೆ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ನಿರಾಸೆ ಎದುರಾಗಿದೆ.

26
ಐಪಿಎಲ್‌ಗೆ ಗುಡ್ ಬೈ ಹೇಳಿರುವ ಅಶ್ವಿನ್

ಅಶ್ವಿನ್ ಕಳೆದ ಡಿಸೆಂಬರ್‌ನಲ್ಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕಳೆದ ಆಗಸ್ಟ್‌ನಲ್ಲಿ ಐಪಿಎಲ್‌ಗೂ ವಿದಾಯ ಘೋಷಿಸಿದ್ದರು.

36
ಅಶ್ವಿನ್‌ಗೆ ನಿರಾಸೆ

ಐಪಿಎಲ್‌ಗೆ ವಿದಾಯ ಘೋಷಿಸಿದ್ದ ಅಶ್ವಿನ್ ಜಾಗತಿಕ ಮಟ್ಟದ ಟಿ20 ಲೀಗ್‌ನಲ್ಲಿ ಕಣಕ್ಕಿಳಿಯಲು ಅಶ್ವಿನ್ ತೀರ್ಮಾನಿಸಿದ್ದರು. ಆದರೆ ಮೊದಲ ಪ್ರಯತ್ನದಲ್ಲೇ ಅಶ್ವಿನ್‌ಗೆ ಹಿನ್ನಡೆಯಾಗಿದೆ.

46
ILT20 ಲೀಗ್‌ ಟೂರ್ನಿಯ ಹರಾಜಿನಲ್ಲಿ ಅನ್‌ಸೋಲ್ಡ್

ಅಶ್ವಿನ್ ILT20 ಲೀಗ್‌ ಟೂರ್ನಿಯ ಆಟಗಾರರ ಹರಾಜಿಗೆ ತಮ್ಮ ಹೆಸರು ರಿಜಿಸ್ಟರ್ ಮಾಡಿಸಿದ್ದರು. ಆದರೆ ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ರವಿಚಂದ್ರನ್ ಅಶ್ವಿನ್ ಅನ್‌ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

56
ಅಶ್ವಿನ್ ವೃತ್ತಿಬದುಕಿಗೆ ತೆರೆ?

ಇದರೊಂದಿಗೆ ರವಿಚಂದ್ರನ್ ಸ್ಪರ್ಧಾತ್ಮಕ ಕ್ರಿಕೆಟ್ ವೃತ್ತಿಬದುಕು ಕೊನೆಗೊಂಡಿತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.

66
ಭಾರತ ಪರ ಎರಡನೇ ಅತಿಹೆಚ್ಚು ವಿಕೆಟ್ ಸರದಾರ

ಅಂದಹಾಗೆ ಅನಿಲ್ ಕುಂಬ್ಳೆ(619) ಬಳಿಕ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಹಿರಿಮೆ ರವಿಚಂದ್ರನ್ ಅಶ್ವಿನ್(537 ವಿಕೆಟ್) ಹೆಸರಿನಲ್ಲಿದೆ. ಹೀಗಿದ್ದೂ ಅಶ್ವಿನ್ ಅನ್‌ಸೋಲ್ಡ್ ಆಗಿದ್ದಾರೆ.

Read more Photos on
click me!

Recommended Stories