ಕಾಲ್ತುಳಿತಕ್ಕೆ ಪರಿಹಾರ ಬೆನ್ನಲ್ಲೇ ಭವಿಷ್ಯಕ್ಕೆ ಆರ್‌ಸಿಬಿಯಿಂದ 6 ಮಾಸ್ಟರ್‌ ಪ್ಲಾನ್!

Published : Sep 02, 2025, 08:37 AM IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ 3 ತಿಂಗಳ ಬಳಿಕ ಇತ್ತೀಚೆಗಷ್ಟೇ ಮೃತರ ಕುಟುಂಬಸ್ಥರಿಗೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ್ದ ಆರ್‌ಸಿಬಿ ಫ್ರಾಂಚೈಸಿಯು, ಈಗ ‘ಆರ್‌ಸಿಬಿ ಕೇರ್ಸ್‌’ನಡಿ ಭವಿಷ್ಯಕ್ಕೆ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದೆ.  

PREV
18

ಈ ನಿಟ್ಟಿನಲ್ಲಿ ಫ್ರಾಂಚೈಸಿಯು 6 ಸೂತ್ರಗಳನ್ನು ಪ್ರಸ್ತಾಪಿಸಿದೆ. ಆದರೆ ಸರ್ಕಾರದ ಅನುಮತಿ ಬಳಿಕವೇ ಇವುಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಫ್ರಾಂಚೈಸಿ ಮಾಹಿತಿ ಹಂಚಿಕೊಂಡಿದೆ.

28

ನಮ್ಮ ಅಭಿಮಾನಿಗಳನ್ನು ಅರ್ಥಪೂರ್ಣ ಕ್ರಿಯೆಯ ಮೂಲಕ ಬೆಂಬಲಿಸಲು, ಸಬಲೀಕರಣಗೊಳಿಸಲು ‘ಆರ್‌ಸಿಬಿ ಕೇರ್ಸ್’ ನಮ್ಮ ದೀರ್ಘಕಾಲೀನ ಬದ್ಧತೆ ಎಂದು ತಿಳಿಸಿದೆ. ಫ್ರಾಂಚೈಸಿ ಒಟ್ಟು 6 ಸೂತ್ರಗಳನ್ನು ಫ್ರಾಂಚೈಸಿ ಪಟ್ಟಿಮಾಡಿದೆ.

6 ಸೂತ್ರಗಳೇನು?

48

2. ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ ರೂಪಿಸಲು ಬಿಸಿಸಿಐ, ಕೆಎಸ್‌ಸಿಎ ಜೊತೆ ನಿರಂತರ ಕೆಲಸ

58

3. ಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದಲ್ಲಿ ಅಭಿವೃದ್ಧಿ ಕಾರ್ಯ.

68

4. ಸೇಫ್ಟಿ ಆಡಿಟ್‌ ನಡೆಸಿ ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರಕ್ರಿಯೆಯ ಕುರಿತು ಸ್ಥಳೀಯ ತಂಡಗಳಿಗೆ ತರಬೇತಿ

78

5. ಉತ್ಸಾಹಭರಿತ ಅಭಿಮಾನಿಗಳ ಕತೆ, ಹೆಸರನ್ನು ಗೌರವಿಸಲು ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳ ನಿರ್ಮಾಣ.

88

6. ಕ್ರೀಡಾಂಗಣಗಳಲ್ಲಿ ಉದ್ಯೋಗ ಸೃಷ್ಟಿಸಿ, ಸ್ಥಳೀಯ ಪ್ರತಿಭೆಗಳ ಪೋಷಿಸಿ ಮತ್ತು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಂಬಲಿಸುವುದು.

Read more Photos on
click me!

Recommended Stories