ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟೆಸ್ಟ್ ಆಟಗಾರರನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್! ಆಪ್ತ ಗೆಳೆಯ ಕೊಹ್ಲಿಗಿಲ್ಲ ಸ್ಥಾನ

Published : Sep 01, 2025, 09:47 PM IST

ಬೆಂಗಳೂರು: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸಾರ್ವಕಾಲಿಕ ಸೂಪರ್‌ ಸ್ಟಾರ್ 5 ಟೆಸ್ಟ್ ಆಟಗಾರರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎನ್ನುವಂತೆ ಆಪ್ತಗೆಳೆಯ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. 

PREV
17

ಹರಿಣಗಳ ಪಡೆಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ 5 ಸೂಪರ್‌ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಭಾರತದ ರನ್ ಮಷೀನ್, ಚೇಸ್ ಮಾಸ್ಟರ್ ಎಂದೇ ಕರಿಸಿಕೊಳ್ಳುವ ತಮ್ಮ ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

27

ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ಐವರು ಆಟಗಾರರ ಪಟ್ಟಿಯಲ್ಲಿ ಓರ್ವ ಭಾರತೀಯ ಕ್ರಿಕೆಟಿಗನಿಗೆ ಸ್ಥಾನ ನೀಡಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೇ ಫಿಕ್ಸಿಂಗ್ ಆರೋಪದಡಿ ಬ್ಯಾನ್ ಆಗಿದ್ದ ಪಾಕಿಸ್ತಾನದ ಆಟಗಾರನಿಗೂ ಎಬಿಡಿ ಟಾಪ್ 5 ಸೂಪರ್‌ ಸ್ಟಾರ್ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ.

37

ಬಿಯರ್ಡ್‌ ಬಿಫೋರ್ ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿರುವ ಎಬಿ ಡಿವಿಲಿಯರ್ಸ್, ಟೆಸ್ಟ್‌ ಕ್ರಿಕೆಟ್‌ನ 5 ಸೂಪರ್ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

47

ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲಿಸ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಆಸಿಫ್ ಅವರಿಗೆ ಟಾಪ್ 5 ಸೂಪರ್ ಸ್ಟಾರ್ ಆಟಗಾರರ ಪೈಕಿ ಎಬಿಡಿ ಸ್ಥಾನ ನೀಡಿದ್ದಾರೆ.

57

ದಕ್ಷಿಣ ಆಫ್ರಿಕಾ ಪರ ಕಾಲಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಒಂದು ದಶಕಗಳ ಕಾಲ ಆಪತ್ಬಾಂದವನಾಗಿ ಗುರುತಿಸಿಕೊಂಡಿದ್ದರು.

67

ಇನ್ನು ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್‌ಗೆ ಕೂಡಾ ಎಬಿಡಿ ಸ್ಥಾನ ನೀಡಿದ್ದಾರೆ. ಫ್ಲಿಂಟಾಫ್ ಒಂದೊಳ್ಳೆಯ ಮ್ಯಾಚ್ ವಿನ್ನರ್ ಆಗಿದ್ದರು. ಎಜ್‌ಬಾಸ್ಟನ್‌ನಲ್ಲಿ ಕಾಲಿಸ್‌ಗೆ ಫ್ಲಿಂಟಾಫ್ ಎಸೆದ ಯಾರ್ಕರ್‌ ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಎಬಿಡಿ ಹೇಳಿದ್ದಾರೆ.

77

ಇನ್ನು ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಹಾಗೂ ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೂ ಟೆಸ್ಟ್ ಸೂಪರ್ ಸ್ಟಾರ್ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ.

Read more Photos on
click me!

Recommended Stories