ಕೇವಲ ಎರಡೇ ವರ್ಷದಲ್ಲಿ ಧೋನಿ ಹಿಂದಿಕ್ಕಲು ಸಜ್ಜಾದ ಅಭಿಷೇಕ್ ಶರ್ಮಾ, ದಾಖಲೆಗೆ ಕೇವಲ 29 ರನ್ ಬೇಕು

Published : Jul 05, 2026, 10:10 PM IST

ಅಭಿಷೇಕ್ ಶರ್ಮಾ ಡೆಬ್ಯೂ ಮಾಡಿ 2 ವರ್ಷವಾಗಿದೆ. ಇದೀಗ ಎಂಎಸ್ ಧೋನಿ ಹಿಂದಿಕ್ಕಿಲು ಸಜ್ಜಾಗಿದ್ದಾರೆ. ಧೋನಿ ದಾಖಲೆ ಮುರಿಯಲು ಶರ್ಮಾಗೆ ಕೇವಲ 29 ರನ್ ಮಾತ್ರ ಬೇಕಿದೆ. ಏನಿದು ಅಭಿಷೇಕ್ ಶರ್ಮಾ ಸಾಧನೆ?

PREV
16
ದಾಖಲೆ ಬರೆಯಲು ಸಜ್ಜಾದ ಅಭಿಷೇಕ್ ಶರ್ಮಾ

ಟೀಂ ಇಂಡಿಯಾ ಬ್ಯಾಟರ್ ಅಭಿಷೇಕ್ ಶರ್ಮಾ 2024ರಲ್ಲಿ ಪದಾರ್ಪಣೆ ಮಾಡಿದ್ದಾರೆ. ಆರಂಭಿಕನಾಗಿ, ಸ್ಫೋಟಕ ಬ್ಯಾಟರ್ ಆಗಿ ಅಭಿಷೇಕ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಎರಡೇ ವರ್ಷದಲ್ಲಿ ಇದೀಗ ಎಂಎಸ್ ದೋನಿ ದಾಖಲೆ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.

26
ಧೋನಿ ಸಾಧನೆಗೆ ಹಿಂದಿಕ್ಕಲು 29 ರನ್ ಬೇಕು

ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ 50 ಪಂದ್ಯ ಆಡಿದ್ದಾರೆ. ಈ ಮೂಲಕ 1589 ರನ್ ಸಿಡಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಷೇಕ್ ಶರ್ಮಾ ರನ್ ಕಲೆ ಹಾಕಿದ್ದಾರೆ. ಟಿ20ಯಲ್ಲಿ ಧೋನಿ ಒಟ್ಟು ರನ್ ಹಿಂದಿಕ್ಕಿಲು ಕೇವಲ 29 ರನ್ ಮಾತ್ರ ಬೇಕಿದೆ. ಧೋನಿ 98 ಟಿ20 ಪಂದ್ಯಗಳಿಂದ 1617ರನ್ ಸಿಡಿಸಿದ್ದಾರೆ.

36
49 ಇನ್ನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ ಸಾಧನೆ

ಅಭಿಷೇಕ್ ಶರ್ಮಾ ಆರಂಭಿಕ ಬ್ಯಾಟರ್ ಆಗಿರುವ ಕಾರಣ 50 ಪಂದ್ಯಗಳಲ್ಲಿ 49 ಇನ್ನಿಂಗ್ಸ್ ಆಡಿದ್ದಾರೆ. ಆದರೆ ಎಂಎಸ್ ಧೋನಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಫಿನೀಶರ್ ಜವಾಬ್ದಾರಿ ನಿರ್ವಹಿಸುತ್ತಿದ್ದ ಧೋನಿ 98 ಪಂದ್ಯದಲ್ಲಿ 85 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದಾರೆ.

46
2 ಸೆಂಚುರಿ ಹಾಗೂ 11 ಹಾಫ್ ಸೆಂಚುರಿ

2026ರ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ವಿರುದ್ದ 21 ಎಸೆತದಲ್ಲಿ 52 ರನ್ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡಿದ್ದರು. ಟಿ20 ಕರಿಯರ್‌ನಲ್ಲಿ ಅಭಿಷೇಕ್ ಶರ್ಮಾ 2 ಶತಕ ಹಾಗೂ 11 ಹಾಫ್ ಸೆಂಚುರಿ ಸಿಡಿಸಿದ್ದಾರೆ. ಚುಟುಕು ಫಾರ್ಮ್ಯಾಟ್‌ನಲ್ಲಿ ಅಭಿಷೇಕ್ ಶರ್ಮಾ ಸ್ಟ್ರೈಕ್ ರೇಟ್ 192.83.

56
ಟಿ20 ಗರಿಷ್ಠ ರನ್‌ನಲ್ಲಿ ರೋಹಿತ್‌ಗೆ ಮೊದಲ ಸ್ಥಾನ

ಭಾರತದ ಪರ ಟಿ20ಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದ್ದಾರೆ. ರೋಹಿತ್ ಶರ್ಮಾ 159 ಪಂದ್ಯಗಳಿಂದ 4231 ರನ್ ಸಿಡಿಸಿದ್ದಾರೆ. ರೋಹಿತ್ ಶರ್ಮಾ 5 ಶತಕ ಹಾಗೂ 32 ಅರ್ಧಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ 2024ರಲ್ಲಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

66
2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ

ಭಾರತದ ಪರ ಟಿ20 ಮಾದರಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. 117 ಇನ್ನಿಂಗ್ಸ್‌ಗಳಿಂದ ಕೊಹ್ಲಿ 4188 ರನ್ ಸಿಡಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ 107 ಇನ್ನಿಂಗ್ಸ್‌ಗಳಿಂದ 3272 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories