ಕ್ರಿಕೆಟ್ ಬಳಿಕ ಪೃಥ್ವಿ ಶಾ ವೈಯುಕ್ತಿಕ ಬದುಕಿನಲ್ಲೂ ಕೋಲಾಹಲ, ಮೋಸ ಹೋದೆ ಎಂದ ಗರ್ಲ್‌ಫ್ರೆಂಡ್ ಆಕೃತಿ

Published : Jul 05, 2026, 04:36 PM IST

ಕ್ರಿಕೆಟಿಗ ಪೃಥ್ವಿ ಶಾ ಕ್ರಿಕೆಟ್ ಕರಿಯರ್ ಬೆನ್ನಲ್ಲೇ ಇದೀಗ ವೈಯುಕ್ತಿಕ ಬದುಕಿನಲ್ಲಿ ಕೋಲಾಹಲ ಎದ್ದಿದೆ. ಕೆಲ ತಿಂಗಳ ಹಿಂದೆ ಶಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಬಹುಕಾಲದ ಗೆಳತಿ ಇದೀಗ ನಾನು ಮೋಸ ಹೋದೆ ಎಂದಿದ್ದಾರೆ.

PREV
16
ಕೆಲ ತಿಂಗಳ ಹಿಂದೆ ಎಂಗೇಜ್ಮೆಂಟ್‌ನಲ್ಲಿ ಈಗ ಬಿರುಕು?

ಕ್ರಿಕೆಟಿಗ ಪೃಥ್ವಿ ಶಾ ತಮ್ಮ ಕ್ರಿಕೆಟ್ ಕರಿಯರ್‌ನಲ್ಲಿ ಮಾಡಿದ ಕೆಲ ಎಡವಟ್ಟುಗಳು ಕರಿಯರ್‌ನ್ನೇ ಕಸಿದುಕೊಂಡಿತು. ಸಚಿನ್ ತೆಂಡೂಲ್ಕರ್ ಜೊತೆ ಹೋಲಿಕೆ ಮಾಡುತ್ತಿದ್ದ ಕ್ರಿಕೆಟಿಗ ಪೃಥ್ವಿ ಶಾ ಇದೀಗ ತಮ್ಮ ವೈಯುಕ್ತಿಕ ಬದುಕಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಹುಕಾಲದ ಗೆಳತಿ ಆಕೃತಿ ಆಗರ್ವಾಲ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಇದೀಗ ಈ ಸಂಬಂಧ ಮುರಿದು ಬಿದ್ದ ಸೂಚನೆಗಳು ಲಭ್ಯವಾಗಿದೆ.

26
ರೂಮರ್ ನಿಜ ಎಂದ ಪೃಥ್ವಿ ಶಾ ಗೆಳತಿ

ಕಳೆದ ಕೆಲ ದಿನಗಳಿಂದ ಪೃಥ್ವಿ ಶಾ ಹಾಗೂ ಗೆಳತಿ ಆಕೃತಿ ಅಗರ್ವಾಲ್ ನಡುವೆ ಸಂಬಂಧ ಸರಿಯಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಆಕೃತಿ ಅಗರ್ವಾಲ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನೀವು ಕೆಲ ದಿನಗಳಿಂದ ಕೇಳುತ್ತಿರುವ ರೂಮರ್ ನಿಜ. ನಾನು ಹಲವು ಬಾರಿ ಮೋಸ ಹೋದೆ ಎಂದಿದ್ದಾರೆ.

36
ಪೃಥ್ವಿ ಶಾ ಗೆಳತಿ ಆಕೃತಿ ಅಗರ್ವಾಲ್ ಹೇಳಿದ್ದೇನು?

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆಕೃತಿ ಅಗರ್ವಾಲ್, ನಾನು ಹಲವು ಬಾರಿ ಮೋಸ ಹೋದೆ. ಆದರೂ ಒಂದು ಮಾತು ಹೇಳಿರಲಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋದ ಬಳಿಕ ಈಗಲೂ ನನಗೆ ನಂಬಲಾಗುತ್ತಿಲ್ಲ. ನೀವು ಆತನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿರುವ ರೂಮರ್ ನಿಜ ಎಂದು ಆಕೃತಿ ಆಗರ್ವಾಲ್ ಹೇಳಿದ್ದಾರೆ.

46
ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಆಕೃತಿ

ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಪೋಸ್ಟ್ ಮಾಡಿದ ಆಕೃತಿ ಅಗರ್ವಾಲ್ ಅಷ್ಟೇ ಬೇಗನೆ ಡಿಲೀಟ್ ಮಾಡಿದ್ದಾರೆ. ಇನ್ನು ಪೃಥ್ವಿ ಶಾ ಜೊತೆಗಿನ ಹಲವು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಎಂಗೇಜ್‌ಮೆಂಟ್ ಫೋಟೋ ಹಾಗೇ ಉಳಿಸಿಕೊಂಡಿದ್ದಾರೆ. ಇತ್ತ ಪೃಥ್ವಿ ಶಾ ಖಾತೆಯಲ್ಲಿ ಆಕೃತಿ ಜೊತೆಗಿನ ಹಲವು ಫೋಟೋಗಳು ಲಭ್ಯವಿದೆ.

56
ಐಪಿಎಲ್ 2026ಗೂ ಮೊದಲು ನಿಶ್ಚಿತಾರ್ಥ

ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್ ಮಾರ್ಚ್ 2026ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಎಂಟ್ರಿಕೊಡಲು ಪೃಥ್ವಿ ಶಾ ರೆಡಿಯಾಗಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪೃಥ್ವಿ ಶಾಗೆ ಅವಕಾಶವೇ ಸಿಗಲಿಲ್ಲ. ಇದರಿಂದ ಶಾ ಮತ್ತಷ್ಟು ಆಕ್ರೋಶಗೊಂಡಿದ್ದರು. ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

66
ವಿವಾದಗಳಿಂದ ಹಾಳಾಯ್ತು ಜೀವನ

ಫಿಟ್ನೆಸ್, ಫಾರ್ಮ್ ಹಾಗೂ ಆಫ್ ದಿ ಫೀಲ್ಡ್ ವಿವಾದಗಳಿಂದ ಪೃಥ್ವಿ ಶಾ ಕ್ರಿಕೆಟ್ ಕರಿಯರ್ ದೇಸಿ ಮಟ್ಟಕ್ಕೆ ಸೀಮಿತಗೊಳ್ಳುತ್ತಿದೆ. ಇದರ ಬೆನ್ನಲ್ಲೇ ವೈಯುಕ್ತಿಕ ಬದಕು ಕೂಡ ತಾಳ ತಪ್ಪುವ ಸೂಚನೆಗಳು ಲಭ್ಯವಾಗಿದೆ. ಅಧಿಕೃತವಾಗಿ ಇವರಿಬ್ಬರ ಸಂಬಂಧ ಕುರಿತು ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಕೆಲ ಸೂಚನೆಗಳು, ಪೋಸ್ಟ್ ಇದೀಗ ಸಂಬಂಧ ಹಳಸಿರುವುದನ್ನು ಸ್ಪಷ್ಟಪಡಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories