ವೈಭವ್ ಸೂರ್ಯವಂಶಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಚಿನ್ 16ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಸಿಡಿಸಿದ ಸ್ಕೋರ್ ಹಾಗೂ ವೈಭವ್ ಡೆಬ್ಯೂ ಸ್ಕೋರ್ ಅಲ್‌ಮೋಸ್ಟ್ ಸೇಮ್.
ವೈಭವ್ ಸೂರ್ಯವಂಶಿ 15ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅತೀ ಕಿರಿಯ ಅನ್ನೋ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸಚಿನ್ ರೀತಿಯಲ್ಲಿ ಅತೀ ಕಿರಿಯ ವಯಸ್ಸಿಗೆ ದಾಖಲೆ ಸರದಾರನಾಗುತ್ತಿರುವ ವೈಭವ್ ಸೂರ್ಯವಂಶಿ, ಪದಾರ್ಪಣಾ ಪಂದ್ಯದಲ್ಲೂ ಸಚಿನ್ ಮಾರ್ಗದಲ್ಲಿ ಸಾಗಿದ್ದಾರೆ.
26
ವೈಭವ್ ಡೆಬ್ಯೂ ಸ್ಕೂರ್
ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 2 ಸಿಕ್ಸರ್ ಮೂಲಕ 14 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಔಟಾಗಿದ್ದರು. ಕೇವಲ 10 ಎಸೆತ ಎದುರಿಸಿದ್ದರು. ವಿಲ್ ಜ್ಯಾಕ್ಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ವಿಕೆಟ್ ಕೈಚೆಲ್ಲಿದ್ದರು.
36
ಸಚಿನ್ ತೆಂಡೂಲ್ಕರ್ ಡೆಬ್ಯೂ ಸ್ಕೂರ್
ಸಚಿನ್ ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ದ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 15 ರನ್ ಸಿಡಿಸಿ ಔಟಾಗಿದ್ದರು. ಅಂದು ಸಚಿನ್ ಮೇಲೆ ಬಾರಿ ನೀರೀಕ್ಷೆ ಇತ್ತು. ಮೊದಲ ಪಂದ್ಯದಲ್ಲಿ ಮಾರಕ ಪಾಕಿಸ್ತಾನ ಬೌಲರ್ ಮುಂದೆ 15 ರನ್ ಸಿಡಿಸಿ ವಕಾರ್ ಯೂನಿಸ್ ಎಸೆತದಲ್ಲಿ ಬೋಲ್ಡ್ ಆಗಿದ್ದರು. ಸಚಿನ್ ಹಾಗೂ ವೈಭವ್ ಡೆಬ್ಯೂ ಪಂದ್ಯದ ಸ್ಕೋರ್‌ನಲ್ಲಿ ಕೇವಲ 1 ರನ್ ವ್ಯತ್ಯಾಸ
1989ರಲ್ಲಿ ಸಚಿನ್ ತೆಂಡೂಲ್ಕರ್ ಡೆಬ್ಯೂ ಮಾಡಿದ್ದು ಪಾಕಿಸ್ತಾನ ವಿರುದ್ದ ಪಾಕಿಸ್ತಾನದಲ್ಲಿ. ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಪದಾರ್ಪಣೆ ಮಾಡಿದ್ದರು. ಇದೀಗ ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ್ದು ವಿದೇಶದಲ್ಲಿ. ಇಂಗ್ಲೆಂಡ್ ವಿರುದ್ದ ಇಂಗ್ಲೆಡ್‌ನ ಮ್ಯಾಂಚೆಸ್ಟರ್‌ನಲ್ಲಿ ಡೆಬ್ಯೂ ಮಾಡಿದ್ದಾರೆ.
56
ಅಂತಾರಾಷ್ಟ್ಪೀಯ ಪಂದ್ಯದ ಮೆಚ್ಯೂರಿಟಿ
ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಡೆಬ್ಯೂ ಮೊದಲು ಮುಂಬೈ ಕ್ಲಬ್, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಪಂದ್ಯ, ಇಂಟರ್ ಸ್ಕೂಲ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ್ದು ಮಾತ್ರವಲ್ಲ ಹಿರಿಯರ ಮೆಚ್ಯೂರಿಟಿ ತೋರಿಸಿದ್ದರು. ಇದೀಗ ವೈಭವ್ ಸೂರ್ಯವಂಶಿ ಅಂಡರ್ 19, ಐಪಿಎಲ್ ಟೂರ್ನಿಯಲ್ಲಿ ವಿಶ್ವ ದರ್ಜೆ ಬೌಲರ್ ವಿರುದ್ದ ಹೋರಾಟ ನೀಡಿದ ಇದೀಗ ಡೆಬ್ಯೂ ಪಂದ್ಯದಲ್ಲೂ ಹಿರಿಯರ ಮೆಚ್ಯೂರಿಟಿ ತೋರಿಸಿದ್ದಾರೆ ಎಂದು ಮಾಜಿ ನಾಯಕ ದಿಲೀಪ್ ವೆಂಗರ್ಸಕರ್ ಹೇಳಿದ್ದಾರೆ.
66
ಸ್ಫೋಟಕ ಬ್ಯಾಟಿಂಗ್ ಖಚಿತ
ವೈಭವ್ ಸೂರ್ಯವಂಶಿ ಇದೀಗ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ವಂಡರ್ ಕಿಡ್ ಎಂದೇ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಕ್ಕರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.