ವೈಭವ್ ಸೂರ್ಯವಂಶಿ(Vaibhav sooryavamshi) ಅವರು ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಮಾಡದ ದಾಖಲೆ ಸೃಷ್ಟಿಸುತ್ತಿದ್ದಾರೆ. ಐಪಿಎಲ್‌ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ದಾಖಲೆಗಳ ಸರದಾರ ಎನಿಸಿದ್ದಾರೆ. ಸೂರ್ಯವಂಶಿಯ ಈ 6 ದಾಖಲೆಗಳು ಯಾರಿಂದಲೂ ಮುರಿಯಲು ಅಸಾಧ್ಯ!
ವೈಭವ್ ಸೂರ್ಯವಂಶಿ(Vaibhav sooryavamshi) ಅವರು ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಮಾಡದ ದಾಖಲೆ ಸೃಷ್ಟಿಸುತ್ತಿದ್ದಾರೆ. ವೈಭವ್ ಆಡುವ ಪ್ರತಿ ಮ್ಯಾಚ್, ಪ್ರತಿ ಸರಣಿಯಲ್ಲೂ ದಾಖಲೆ ಸೃಷ್ಟಿಸುತ್ತಲೇ ಇದ್ದಾರೆ. ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಚಿಕ್ಕ ವಯಸ್ಸು, ಚಿಕ್ಕ ಅವಧಿಯಲ್ಲೂ ಯಾರೂ ಮುರಿಯಲಾಗದ ದಾಖಲೆ ಸೃಷ್ಟಿಸಿದ್ದಾರೆ.
25
Vaibhav Suryavanshi : ಕೇವಲ 13 ವಯಸ್ಸಿನಲ್ಲೇ ಹಲವು ಸಾಧನೆ
ವೈಭವ್ ಸೂರ್ಯವಂಶಿ ಕೇವಲ 13 ವರ್ಷ ವಯಸ್ಸಿನ ಬಾಲಕನಾಗಿದ್ದಾಗಲೇ ವಿಶ್ವದ ಅತಿದೊಡ್ಡ ಲೀಗ್ ಐಪಿಎಲ್‌ಗೆ ಮಾರಾಟವಾದರು. ಮೊದಲಿಗೆ ಐಪಿಎಲ್‌ಗೆ ಕಾಲಿಟ್ಟಾಗಲೇ ಹಲವು ಐಪಿಎಲ್ ದಾಖಲೆಗಳನ್ನ ಸೃಷ್ಟಿಸಿದಾಗ ಕ್ರಿಕೆಟ್ ದಿಗ್ಗಜರು ಬೆಕ್ಕಸಬೆರಗಾದರು, ಕೇವಲ ಹದಿಮೂರು ವರ್ಷದ ಹುಡುಗನ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ವಿಶ್ವಶ್ರೇಷ್ಠ ಬೌಲರ್‌ಗಳು ನಡುಗಿಹೋದರು. ಸೂರ್ಯವಂಶಿ ಬ್ಯಾಟಿಂಗ್ ಮಾಡುವಾಗ ಯಾವುದೇ ಬೌಲರ್‌ಗಳು ಹೆದರುತ್ತಾರೆ. ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ವೇಗದ ಭಾರತೀಯ ಬ್ಯಾಟ್ಸ್‌ಮನ್ ಯಾರು ಅಂದ್ರೆ ಅದು ವೈಭವ್ ಸೂರ್ಯವಂಶಿಯೇ!
35
ದುಲೀಪ್ ಟ್ರೋಫಿಯಲ್ಲೂ ಸೂರ್ಯವಂಶಿ ಬ್ಯಾಟಿಂಗ್ ವೈಭವ!
ವೈಭವ್ ಸೂರ್ಯವಂಶಿ ಸಾಧನೆ ಕೇವಲ ಐಪಿಎಲ್‌ನಲ್ಲಿ ಮಾತ್ರವಲ್ಲ; ಭಾರತ ಎ, ಮತ್ತು ಅಂಡರ್-19 ವಿಶ್ವಕಪ್ ನಂತರ ವೈಭವ್ ಸೂರ್ಯವಂಶಿ ಕೆಂಪು-ಚೆಂಡಿನ ಆಟದಲ್ಲೂ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ವೈಭವ್ ದುಲೀಪ್ ಟ್ರೋಫಿಯಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಅವರು. ಕೇವಲ 15 ವರ್ಷ ಮತ್ತು 157 ದಿನಗಳಲ್ಲಿ, ಅವರು ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ದಾಖಲೆಯನ್ನು ಹೊಂದಿದ್ದಾರೆ. ಅವರು 42 ಎಸೆತಗಳಲ್ಲಿ ಅರ್ಧಶತಕ ತಲುಪಿದರು, 57 ವರ್ಷಗಳ ಹಳೆಯ ದಾಖಲೆಯನ್ನು ಮೀರಿಸಿದರು.
1. ಟಿ20ಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ - 14 ವರ್ಷ 32 ದಿನಗಳು.
2. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ - 14 ವರ್ಷ 272 ದಿನಗಳು.
3. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ - 11 ಎಸೆತಗಳು
4- ಭಾರತಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ - 15 ವರ್ಷ 99 ದಿನಗಳು
5- ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ.
6- ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ.
55
ದಾಖಲೆಗಳ ಸರದಾರ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಬಗ್ಗೆ ಒಂದು ಕುತೂಹಲಕರ ವಿಷಯವೆಂದರೆ ಈ ದಾಖಲೆಗಳಿಗಾಗಿ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸೂರ್ಯವಂಶಿ ಐಪಿಎಲ್‌ನಿಂದ ಹಿಡಿದು ಅಂತರರಾಷ್ಟ್ರೀಯ, ದೇಶೀಯ ಕ್ರಿಕೆಟ್‌ವರೆಗೆ ಎಲ್ಲದರಲ್ಲೂ ದಾಖಲೆ ಬರೆದಿದ್ದಾರೆ! ಈಗಿನ್ನೂ ಪ್ರಾರಂಭ ಇಡೀ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅದೆಷ್ಟು ದಾಖಲೆಗಳು ಸೃಷ್ಟಿಸಬಹುದು! ಊಹಿಸಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.