14 ವರ್ಷದ ವೈಭವ್ ಸೂರ್ಯವಂಶಿ ಈ ರಣಜಿ ತಂಡಕ್ಕೆ ವೈಸ್-ಕ್ಯಾಪ್ಟನ್!

Published : Oct 13, 2025, 01:13 PM IST

ಪಾಟ್ನಾ: ಐಪಿಎಲ್‌ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

PREV
17
ವೈಭವ್ ಸೂರ್ಯವಂಶಿಗೆ ಉಪನಾಯಕ ಪಟ್ಟ

ಅ.15ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿಗೆ ಬಿಹಾರ ತಂಡ ಪ್ರಕಟಗೊಂಡಿದ್ದು, 14 ವರ್ಷದ ವೈಭವ ಸೂರ್ಯವಂಶಿ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

27
ಅರುಣಾಚಲ ಪ್ರದೇಶ ಎದುರು ಬಿಹಾರ ಮೊದಲ ಪೈಟ್

ಅಕ್ಟೋಬರ್ 15ರಿಂದ ಆರಂಭವಾಗಲಿರುವ ರಣಜಿ ಪ್ಲೇಟ್ ಲೀಗ್ ಸೀಸನ್‌ನಲ್ಲಿ ಅರಣಾಚಲ ಪ್ರದೇಶ ವಿರುದ್ದ ಬಿಹಾರ ತಂಡವು ಮೊದಲ ಪಂದ್ಯವನ್ನಾಡಲಿದೆ.

37
12ನೇ ವಯಸ್ಸಿಗೆ ರಣಜಿಗೆ ಪಾದಾರ್ಪಣೆ

ವೈಭವ್ ಸೂರ್ಯವಂಶಿ ತಮ್ಮ 12ನೇ ವಯಸ್ಸಿಗೆ ರಣಜಿ ಟ್ರೋಫಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದರು. 2023-24ರ ಸೀಸನ್‌ನಲ್ಲಿ ವೈಭವ್ ಬಿಹಾರ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದರು.

47
5 ಪ್ರಥಮ ದರ್ಜೆ ಪಂದ್ಯವನ್ನಾಡಿರುವ ವೈಭವ್

ವೈಭವ್ ಸೂರ್ಯವಂಶಿ ಇದುವರೆಗೂ 5 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 10 ಇನ್ನಿಂಗ್ಸ್‌ಗಳಿಂದ ಕೇವಲ 100 ರನ್ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೈಭವ್ ಗರಿಷ್ಠ ವೈಯುಕ್ತಿಕ ಸ್ಕೋರ್ 41 ರನ್ ಗಳಾಗಿವೆ.

57
2025ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ

ಇನ್ನು 2025ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಕೇವಲ 7 ಪಂದ್ಯಗಳನ್ನಾಡಿ 206.55ರ ಸ್ಟ್ರೈಕ್‌ರೇಟ್‌ನಲ್ಲಿ ಒಂದು ಶತಕ ಸಹಿತ 252 ರನ್ ಸಿಡಿಸಿ ಗಮನ ಸೆಳೆದಿದ್ದರು.

67
ಐಪಿಎಲ್‌ನಲ್ಲಿ ಅಪರೂಪದ ದಾಖಲೆ

ವೈಭವ್ ಸೂರ್ಯವಂಶಿ ತಮ್ಮ 13ನೇ ವಯಸ್ಸಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೂಲಕ, ಇಂಡಿಯನ್ ಪ್ರೀಮಿಯರ್ ಲೀಗ್‌ ಆಡಿದ ಅತಿಕಿರಿಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡಿದ್ದರು.

77
ಭಾರತ ಯೂಥ್ ತಂಡದಲ್ಲಿ ವೈಭವ್ ಶೈನಿಂಗ್

ಇದಾದ ಬಳಿಕ ವೈಭವ್ ಸೂರ್ಯವಂಶಿ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ವೈಭವ್ ಸೂರ್ಯವಂಶಿ ಭಾರತ ಪರ ಯೂಥ್ ಟೆಸ್ಟ್, ಯೂಥ್ ಒನ್‌ಡೇ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

Read more Photos on
click me!

Recommended Stories