ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ಎದುರು ಭರ್ಜರಿ ಅರ್ಧಶತಕ ಸಿಡಿಸಿದ ಸ್ಮೃತಿ ಮಂಧನಾ, ಒಂದೇ ಪಂದ್ಯದಲ್ಲಿ ಐದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ ಕಣಕ್ಕಿಳಿದಾಗ, ಒಂದು ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರೈಸಲು ಅವರಿಗೆ ಕೇವಲ 17 ರನ್‌ಗಳ ಅಗತ್ಯವಿತ್ತು. ಮಂಧನಾ ಸಿಕ್ಸರ್ ಬಾರಿಸುವ ಮೂಲಕ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ವಿಶ್ವದಾಖಲೆ ನಿರ್ಮಿಸಿದರು.
26
2- ಸ್ಮೃತಿ ಮಂಧನಾ 28 ವರ್ಷಗಳ ಹಳೆಯ ದಾಖಲೆ ಬ್ರೇಕ್
ಸ್ಮೃತಿ ಮಂಧನಾಗಿಂತ ಮೊದಲು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಆಸ್ಟ್ರೇಲಿಯಾದ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿತ್ತು. ಬೆಲಿಂಡಾ 1997 ರಲ್ಲಿ 970 ರನ್ ಬಾರಿಸಿದ್ದರು.
36
3- ಸ್ಮೃತಿ ಮಂಧನಾ ಏಕದಿನದಲ್ಲಿ 5000 ರನ್ ಪೂರ್ಣ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧನಾ ತಮ್ಮ 5000 ರನ್‌ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ ವಿಶ್ವದ 5ನೇ ಹಾಗೂ ಭಾರತದ 2ನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು. ಅವರಿಗಿಂತ ಮೊದಲು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದರು.
ಸ್ಮೃತಿ ಮಂಧನಾ ಆಸ್ಟ್ರೇಲಿಯಾ ತಂಡದ ವಿರುದ್ಧ ಸತತ 5ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮಹಿಳಾ ಬ್ಯಾಟರ್ ಇವರಾಗಿದ್ದಾರೆ. ಇದಕ್ಕೂ ಮುನ್ನ ಅವರು ಕಾಂಗರೂಗಳ ವಿರುದ್ಧ 125, 117, 58 ಮತ್ತು 105 ರನ್ ಗಳಿಸಿದ್ದರು.
56
5- ಸ್ಮೃತಿ ಮಂಧನಾ-ಪ್ರತಿಕಾ ರಾವಲ್ ಜೋಡಿಯಿಂದ ಇತಿಹಾಸ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ ಮತ್ತು ಪ್ರತಿಕಾ ರಾವಲ್ ಮತ್ತೊಂದು ಹೊಸ ದಾಖಲೆ ನಿರ್ಮಿಸಿದರು. ಇಬ್ಬರೂ 155 ರನ್‌ಗಳ ಜೊತೆಯಾಟವಾಡಿದರು. ಇದು ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜತೆಯಾಟವಾಗಿದೆ. ಈ ಪಂದ್ಯದಲ್ಲಿ ಮಂಧಾನ 80 ಮತ್ತು ಪ್ರತಿಕಾ 75 ರನ್ ಗಳಿಸಿದರು.
66
ಶತಕ ಗಳಿಕೆಯಲ್ಲಿ ಸ್ಮೃತಿ ಮಂಧಾನ ಎರಡನೇ ಸ್ಥಾನ
ಭಾರತದ ಸ್ಮೃತಿ ಮಂಧನಾ ಏಕದಿನ ಪಂದ್ಯಗಳಲ್ಲಿ 13 ಶತಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಹೆಚ್ಚು ಶತಕಗಳನ್ನು ಆಸ್ಟ್ರೇಲಿಯಾದ ಬೆತ್ ಮೂನಿ (15) ಗಳಿಸಿದ್ದಾರೆ.