ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ ಶಾರೂಖ್ ಖಾನ್ ಪುತ್ರಿ

First Published | Aug 18, 2021, 10:10 AM IST
  • ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಸುಹಾನಾ ಖಾನ್
  • ಝೋಯಾ ಮುಂದಿನ ಪ್ರಾಜೆಕ್ಟ್‌ನಲ್ಲಿ ಶಾರೂಖ್ ಖಾನ್-ಗೌರಿ ಪುತ್ರಿ
shahrukh khan suhana khan

ಶಾರುಖ್ ಖಾನ್ ಯಾವಾಗಲೂ ತನ್ನ ಮಗಳು ಸುಹಾನಾ ಹೇಗೆ ನಟಿಯಾಗಬೇಕೆಂದು ಬಯಸುತ್ತಾರೆ, ಮಗ ಆರ್ಯನ್ ಚಲನಚಿತ್ರ ನಿರ್ಮಾಪಕನಾಗಲು ಬಯಸುತ್ತಾನೆ ಎಂಬುದನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ. ಸುಹಾನಾ ಶೀಘ್ರದಲ್ಲೇ ನಟಿಯಾಗಿ ಲಾಂಚ್ ಆಗಲಿದ್ದಾರೆ. 

ಆರ್ಚೀ ಕಾಮಿಕ್ಸ್ ಆಧರಿಸಿ ತನ್ನ ಮುಂಬರುವ ತನ್ನ ಪ್ರಾಜೆಕ್ಟ್‌ನಲ್ಲಿ ಸುಹಾನಾರನ್ನು ಪ್ರಮುಖ ಪಾತ್ರದಲ್ಲಿ ತೋರಿಸಲು ನಿರ್ದೇಶಕಿ ಜೋಯಾ ಅಖ್ತರ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸ್ಟಾರ್ ಕಿಡ್‌ಗಳ ಡಿಬಟ್ ಅಂದ್ರೆ ಸುಮ್ನೇನಾ ?

Tap to resize

Suhana

ವಿಶೇಷವಾಗಿ ಕಿಂಗ್ ಖಾನ್ ಶಾರೂಖ್ ಪುತ್ರಿ ಅಂದ ಮೇಲೆ ಹೇಳಬೇಕಾ ? ಅದಕ್ಕಾಗಿಯೇ ಈ ಪ್ರಾಜೆಕ್ಟ್ ಸಖತ್ ವಿಶೇಷವಾಗಿರಲಿದೆ. ಜೋಯಾ ಇಂಟರ್‌ನ್ಯಾಷನಲ್ ಕಾಮಿಕ್ ಪುಸ್ತಕ ಆರ್ಚಿಯ ಭಾರತೀಯ ರೂಪಾಂತರದಲ್ಲಿ ಡಿಜಿಟಲ್ ಟಾಪರ್ ನೆಟ್‌ಫ್ಲಿಕ್ಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ.

ಇದು ಹದಿಹರೆಯದ ಕಥೆ ಮತ್ತು ಸ್ನೇಹಿತರ ಗುಂಪನ್ನು ನಿರ್ವಹಿಸಲು ಅನೇಕ ಯುವ ನಟರನ್ನು ನಿರ್ದೇಶಕಿ ಹುಡುಕುತ್ತಿದ್ದರು. ಶಾರುಖ್ ಖಾನ್ ಅವರ ಮಗಳು ಸುಹಾನಾದಲ್ಲಿ ಆಕೆ ತನ್ನ ಒಂದು ಪ್ರಮುಖ ಪಾತ್ರವನ್ನು ಕಂಡುಕೊಂಡಿದ್ದಾರೆ.

ಸುಹಾನಾ ಈ ಮೊದಲು ಒಂದೆರಡು ಕಿರುಚಿತ್ರಗಳನ್ನು ಮಾಡಿದ್ದರೆ, ಆರ್ಚಿಯ ಮೂಲಕ ತನ್ನ ಅಧಿಕೃತ ಪ್ರದರ್ಶನವನ್ನು ಬಣ್ಣದ ಲೋಕಕ್ಕೆ ನೀಡಿದ್ದಾರೆ. ಇದು ಸದ್ಯಕ್ಕೆ ಆರಂಭಿಕ ಹಂತದಲ್ಲಿದೆ. ಸುಹಾನಾ ಮತ್ತು ಆಕೆಯ ತಂದೆ ಶಾರೂಖ್ ಖಾನ್ ಅವರು ಬಿಡುಗಡೆಗೆ ಬದ್ಧವಾದ ಸ್ಕ್ರಿಪ್ಟ್ ಅನ್ನು ಸರಿಪಡಿಸಿದ ನಂತರ ಅಂತಿಮ ಪೇಪರ್ ವರ್ಕ್ ಮಾಡಲಾಗುತ್ತದೆ ಎನ್ನಲಾಗಿದೆ.

ಸುಹಾನಾ ಇತ್ತೀಚೆಗೆ ತನ್ನ ಕಿರುಚಿತ್ರ ದ ಗ್ರೇ ಪಾರ್ಟ್ ಆಫ್ ಬ್ಲೂ ನಲ್ಲಿ ಕಾಣಿಸಿಕೊಂಡಿದ್ದರು. ಆಕೆಯ ಮ್ಯಾಗ್ನೆಟಿಕ್ ಸ್ಕ್ರೀನ್ ಇರುವಿಕೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದ್ದರು.
10 ನಿಮಿಷದ ಕಿರುಚಿತ್ರವನ್ನು ಥಿಯೋಡರ್ ಗಿಮೆನೊ ನಿರ್ದೇಶಿಸಿದ್ದಾರೆ. ರಾಬಿನ್ ಗೊನೆಲ್ಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಾರುಖ್ ಖಾನ್ ಪ್ರಸ್ತುತ ಮುಂಬೈನಲ್ಲಿರುವ ಯಶ್ ರಾಜ್ ಸ್ಟುಡಿಯೋದಲ್ಲಿ ತನ್ನ ಆಕ್ಷನ್ ಥ್ರಿಲ್ಲರ್ ಪಠಾಣ್ ಅನ್ನು ಮುಗಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ಅವರು ಗೂಢಾಚಾರಿಗಳಾಗಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ದೀಪಿಕಾ ಪಡುಕೋಣೆ ಜೊತೆಗೆ ಜಾನ್ ಅಬ್ರಹಾಂ ನಟಿಸುತ್ತಿದ್ದಾರೆ.

ಪಠಾಣ್ ನಂತರ, ಅವರು ಅಟ್ಲೀ ನಿರ್ದೇಶನಕ್ಕೆ ತೆರಳುತ್ತಾರೆ. ಇದು ಪ್ಯಾನ್-ಇಂಡಿಯಾ ಸಿನಿಮಾ ಆಗಿದ್ದು, ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ನಟ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅಕ್ಟೋಬರ್ 2021 ರ ವೇಳೆಗೆ ಶೂಟಿಂಗ್ ಆರಂಭಗೊಳ್ಳುವ ನಿರೀಕ್ಷೆಯಿದೆ.

ಶಾರೂಖ್ ಪತ್ನಿ ಇಂಟೀರಿಯರ್ ಡಿಸೈನರ್ ಆಗಿದ್ದು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮೂರನೇ ಮಗ ಅಬ್‌ರಾಮ್ ಸುಹಾನಾರ ಪ್ರೀತಿಯ ತಮ್ಮ

Latest Videos

click me!