ಜೀನತ್‌ ಅಮನ್‌ಗೆ ಹೊಡೆದು ದವಡೆ ಮುರಿದಿದ್ದರು ಈ ನಟ!

First Published | Nov 19, 2020, 5:40 PM IST

ಬಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರಾದ ಜೀನತ್ ಅಮನ್ ಅವರಿಗೆ 69 ವರ್ಷದ ಸಂಭ್ರಮ. ನವೆಂಬರ್ 19, 1951 ರಂದು ಮುಂಬೈನಲ್ಲಿ ಜನಿಸಿದ ಜೀನತ್ 1970 ರಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಕಿರೀಟವನ್ನು ಗೆದ್ದರು. ಲಾಸ್ ಏಂಜಲೀಸ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ, ಮಾಡೆಲಿಂಗ್‌ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಜೀನತ್ 1971ರಲ್ಲಿ ಒಪಿ ರಾಲ್ಹಾನ್ ಅವರ ಹಸ್ಲ್ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಈ ನಟಿ ತಮ್ಮ ವೈಯಕ್ತಿಕ ಜೀವನದಲ್ಲಿ ಅಷ್ಟೊಂದು ಯಶಸ್ಸನ್ನು ಗಳಿಸಲಿಲ್ಲ. ಜೀನತ್‌, ನಟ ಸಂಜಯ್ ಖಾನ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಸಂಜಯ್ ಖಾನ್  1980ರಲ್ಲಿ ಪಾರ್ಟಿಯಲ್ಲಿ ಜೀನತ್ ಅವರಿಗೆ ಹೊಡೆದಿರುವುದಾಗಿ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದರು.  ಹಾಗೂ ಇದನ್ನು ಜೀವನ ಚರಿತ್ರೆ  ದಿ ಬಿಗ್ ಮಿಸ್ಟೇಕ್ಸ್ ಆಫ್ ಮೈ ಲೈಫ್‌ನಲ್ಲೂ ಬರೆದಿದ್ದಾರೆ. 

ಜೀನತ್ ಮತ್ತು ಸಂಜಯ್ ಖಾನ್ ಅವರ ಸಂಬಂಧದ ಕಥೆಗಳು ಬಿ-ಟೌನ್‌ನಲ್ಲಿ ಬಹಳ ಸದ್ದು ಮಾಡಿತ್ತು. ಅಬ್ದುಲ್ಲಾ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ರಹಸ್ಯವಾಗಿ ವಿವಾಹವಾದರು ಎಂಬ ಸುದ್ದಿ ಕೂಡ ಇತ್ತು. ತುಂಬಾ ಶಾರ್ಟ್‌ ಟೆಂಪರ್ಡ್‌ ಆಗಿದ್ದ ಸಂಜಯ್ ಖಾನ್ ಆಗಾಗ್ಗೆ ಜೀನತ್ ಅಮನ್‌ಗೆ ಹೊಡೆಯುತ್ತಿದ್ದರಂತೆ.
undefined
ನವೆಂಬರ್ 3, 1979ರಂದು, ಮುಂಬೈನ ಹೋಟೆಲ್ ತಾಜ್‌ನ ನಡೆದ ಪಾರ್ಟಿಯಲ್ಲಿ ಸಂಜಯ್ ಖಾನ್ ಸಾರ್ವಜನಿಕವಾಗಿ ನಟಿಗೆ ಹೊಡೆದ ಕಾರಣ ಅವರ ದವಡೆ ಮುರಿದುಹೋಗಿತ್ತು. ಅಪ್‌ರೇಷನ್‌ ನಂತರ, ಜಾ ಲೈನ್‌ ಸರಿಪಡಿಸಲಾಗಿದೆ ಆದರೆ ಬಲಗಣ್ಣಿನ ಮೇಲಿನ ಗುರುತು ಇಂದಿಗೂ ಕಾಣಬಹುದು.
undefined
Tap to resize

ಸಂಜಯ್ ಪತ್ನಿ ಜರೀನ್‌ಗೆ ಇಬ್ಬರ ಸಂಬಂಧದ ಬಗ್ಗೆ ತಿಳಿದಾಗ, ಸಾಕಷ್ಟು ಕೋಲಾಹಲ ಉಂಟಾಯಿತು. ಅಂತಿಮವಾಗಿ, ಇವರು ತಮ್ಮ ಸಂಬಂಧವನ್ನು ಕೊನೆಗೊಳಿಸಿದರು.
undefined
ನಂತರ ಇವರು ನಟ ಮಜಾರ್ ಖಾನ್ ಜೊತೆ ವಿವಾಹವಾದರು, ಆದರೆ ಅವರಿಬ್ಬರ ಜಗಳದ ವರದಿಗಳು ಬರಲಾರಂಭಿಸಿದವು. ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ನಂತರವೂ ಇವರ ನಡುವಿನ ಜಗಳ ಕಡಿಮೆಯಾಗಲಿಲ್ಲ.
undefined
ಈ ನಡುವೆ ಮಜಾರ್‌ಗೆ ಮೂತ್ರಪಿಂಡದ ಸೋಂಕು ತಗಲಿತು. ಅನಾರೋಗ್ಯದ ಕಾರಣ, ಸಂಬಂಧವು ಮತ್ತಷ್ಟು ಹಳಸಿತು. ನಂತರ ಜೀನತ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಆದರೆ ಮಜಾರ್ ಡಿವೋರ್ಸ್‌ ಮುಂಚಿತವಾಗಿ ಜಗತ್ತನ್ನು ತೊರೆದರು.
undefined
ಜೀನತ್‌ ಅಮನ್‌ 1971 ರಲ್ಲಿ 'ಹಸ್ಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.ಆದರೆ ಎರಡೂ ಚಿತ್ರಗಳು ಫ್ಲಾಪ್ ಆದಾಗ ಜೀನತ್ಮತ್ತೆ ಜರ್ಮನಿಗೆ ಹೋಗಲು ನಿರ್ಧರಿಸಿದರು,
undefined
ಆದರೆ ಈ ಮಧ್ಯೆ ಅವರು ದೇವ್ ಆನಂದ್ ಅವರ ಹರೇ ರಾಮ ಹರೇ ಕೃಷ್ಣ ಚಿತ್ರದಲ್ಲಿ ಕೆಲಸ ಮಾಡುವ ಅಫರ್‌ ಪಡೆದರು ಮತ್ತು ಅದು ನಟಿಯ ಜೀವನದ ಟರ್ನಿಂಗ್‌ ಪಾಯಿಂಟ್‌ ಆಯಿತು.
undefined
1978 ರಲ್ಲಿ ಸತ್ಯಂ ಶಿವಂ ಸುಂದರಂ ಸಿನಿಮಾಜೀನತ್‌ಗೆ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಬಾಕ್ಸ್‌ಅಫೀಸ್‌ ಯಶಸ್ಸು ಗಳಿಸದಿದ್ದರೂ ಜೀನತ್ ಅವರ ಲುಕ್‌ ಮತ್ತು ನಟನೆ ಸಾಕಷ್ಟು ಸದ್ದು ಮಾಡಿತು.
undefined
ನಂತರ, ಜೀನತ್ ಬಾಲಿವುಡ್‌ನ ಫೇಮಸ್‌ ಸೆಕ್ಸ್‌ ಸಿಂಬಲ್‌ ಎಂದು ಪ್ರಸಿದ್ಧರಾದರು.
undefined
70 ರ ದಶಕದಲ್ಲಿ, ಅವರ ಜನಪ್ರಿಯತೆಯು ತುಂಬಾ ಹೆಚ್ಚಾಯಿತು, ಅವರು ಪ್ರತಿಯೊಂದು ಫಿಲ್ಮಂ ಮ್ಯಾಗ್‌ಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡರು.
undefined
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಜೊತೆಗೆ ಸಹ ಜೀನಾತ್ ಅಮನ್ ಹೆಸರು ಲಿಂಕ್‌ ಆಗಿತ್ತು.
undefined
ಜೀನತ್ ಅಮನ್ ತಾರೆ ಹೀರಾ ಪನ್ನಾ , ಪ್ರೇಮ್ ಶಾಸ್ತ್ರ ವಾರಂಟ್ , ಡಾರ್ಲಿಂಗ್, ಕಲ್ಬಾಜ್ .ಡಾನ್ , ಧರಮ್ ವೀರ್ ಖಲಿಯಾ ಬಾಬು , ದಿ ಗ್ರೇಟ್ ಗ್ಯಾಂಬ್ಲರ್, ಕುರ್ಬಾನಿ , ಲಾವರಿಸ್ ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು
undefined
ಬಹಳ ಸಮಯದ ನಂತರ ಕೆಲವು ತಿಂಗಳ ಹಿಂದೆ ಅವರು ಪಾಣಿಪತ್ ಚಿತ್ರದಲ್ಲಿ ಕಾಣಿಸಿಕೊಂಡರು.
undefined

Latest Videos

click me!