Gadar - 2 ಗೂ ಮುನ್ನ ಅಮೀಷಾ ಪಟೇಲ್‌ ನೀಡಿದ್ದ ಹಿಟ್‌ ಚಿತ್ರಗಳ ವಿವರ ಹೀಗಿದೆ..

Published : Aug 20, 2023, 11:09 PM IST

ಬಾಲಿವುಡ್‌ ನಟಿ ಅಮೀಷಾ ಪಟೇಲ್‌ ಗದರ್ - 2 ಚಿತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದ್ದು ಮಾಡ್ತಿದ್ದ ನಟಿ ಅಮೀಷಾ ಪಟೇಲ್‌ ಈಗ ಮತ್ತೆ ನಟಿಯಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ನಟಿಯ ಈ ಹಿಂದಿನ ಹಿಟ್‌ ಚಿತ್ರಗಳ ವಿವರ ಹೀಗಿದೆ..  

PREV
19
 Gadar - 2 ಗೂ ಮುನ್ನ ಅಮೀಷಾ ಪಟೇಲ್‌ ನೀಡಿದ್ದ ಹಿಟ್‌ ಚಿತ್ರಗಳ ವಿವರ ಹೀಗಿದೆ..

ಗದರ್  - 2
ಸನ್ನಿ ಡಿಯೋಲ್‌ ಜತೆಗೆ ಮತ್ತೆ ನಟಿಸಿರುವ ಅಮೀಷಾ ಪಟೇಲ್ ಗದರ್ - 2 ಮೂಲಕ 2023 ರ ಬಾಲಿವುಡ್‌ನ ಅತಿದೊಡ್ಡ ಹಿಟ್‌ಗಳಲ್ಲಿಒಂದಾದ ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. 2001 ರ ಚಿತ್ರ ಗದರ್: ಏಕ್‌ ಪ್ರೇಮ್‌ ಕಥಾದ ಮುಂದುವರಿದ ಭಾಗವಾಗಿದೆ ಗದರ್ - 2 ಚಿತ್ರ. 

29

ಬಾಕ್ಸಾಫೀಸ್‌ ದೋಚ್ತಿರೋ ಚಿತ್ರ
ಬಿಡುಗಡೆಯಾಗಿ 8 ದಿನಗಳಲ್ಲೇ 300 ಕ್ಕೂ ಹೆಚ್ಚು ಕೋಟಿ ರೂ. ಗಳಿಸೋ ಮೂಲಕ ಗದರ್ - 2 ಚಿತ್ರ ಸದ್ದು ಮಾಡ್ತಿದೆ.

39

ಅಮೀಷಾ ಪಟೇಲ್‌ ನಟನೆಯ ಇತರೆ ಚಿತ್ರಗಳು
ಈ ಹಿಂದೆಯೂ ನಟಿ ಅಮೀಷಾ ಪಟೇಲ್‌ ಬಾಲಿವುಡ್‌ನಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಒಂದು ನೋಟ ಇಲ್ಲಿದೆ..

49

ಕಹೋ ನಾ ಪ್ಯಾರ್‌ ಹೈ
2000 ನೇ ಇಸವಿಯಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಕತೆಯೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಅಮೀಷಾ ಪಟೇಲ್ ಆರಂಭಿಸಿದ್ದರು. ಈ ಲವ್ ಸ್ಟೋರಿಯಲ್ಲಿ ಮೊದಲನೇ ಚಿತ್ರ ಮಾಡಿದ್ದ ಹೃತಿಕ್ ರೋಷನ್‌ ಜತೆಗೆ ನಟಿಸಿದ್ದರು.
 

59

ಗದರ್: ಏಕ್‌ ಪ್ರೇಮ್ ಕಥಾ
ಸಕೀನಾ ಹಾಗೂ ತಾರಾ ಸಿಂಗ್ ನಡುವಣ ಈ ಪ್ರೇಮ ಕತೆಯ ಚಿತ್ರ ಬಿಡುಗಡೆಯಾಗಿ 2 ದಶಕಗಳು ಕಳೆದರೂ ಇನ್ನೂ ಹಲವರ ನೆನಪಿನಲ್ಲಿ ಅಚ್ಚಾಗಿ ಉಳಿದಿದೆ. 
 

69

ಹಮ್ರಾಜ್‌
2002 ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ನಾನಾ ಟ್ವಿಸ್ಟ್‌ಗಳನ್ನು ಹೊಂದಿದ್ದು, ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಬಿ ಡಿಯೋಲ್ ಹಾಗೂ ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಅಮೀಷಾ ಪಟೇಲ್ ಜತೆ ನಟಿಸಿದ್ದರು.

79

ಹನಿಮೂನ್‌ ಟ್ರಾವೆಲ್ಸ್‌ ಪ್ರೈವೇಟ್‌ ಲಿಮಿಟೆಡ್
ಈ ಚಿತ್ರದಲ್ಲಿ 6 ಜೋಡಿಗಳಿದ್ದು, ಈ ಪೈಕಿ ಒಂದು ಪಾತ್ರದಲ್ಲಿ ಅಮೀಷಾ ಪಟೇಲ್‌ ನಟಿಸಿದ್ದರು. ಇವರ ಈ ಅಭಿನಯವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.

89

ಭೂಲ್‌ ಭುಲಯ್ಯಾ
ಸೈಕಾಲಜಿಕಲ್ ಹಾರರ್‌ ಚಲನಚಿತ್ರದಲ್ಲಿ ಹೆಚ್ಚು ಶಕ್ತಿಯುತವಾದ ಪೋಷಕ ನಟಿ ಪಾತ್ರ ಮಾಡಿದ್ದರು ಅಮೀಷಾ ಪಟೇಲ್‌.
 

99

ರೇಸ್ - 2
ಈ ಥ್ರಿಲ್ಲರ್‌ ಮೂವಿಯಲ್ಲೂ ಅಮೀಷಾ ಪಟೇಲ್ ಪೋಷಕ ನಟಿಯ ಪಾತ್ರ ಮಾಡಿದ್ದಾರೆ. ಚೆರ್ರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories