ಟಾಕ್ಸಿಕ್‌ನಲ್ಲಿ ಯಶ್‌ ಅಕ್ಕನಾಗಿರೋ ನಟಿಯ ಲೇಟೆಸ್ಟ್ ಫೋಟೋಗಳು ಸಖತ್ ವೈರಲ್

First Published | Nov 14, 2024, 3:13 PM IST

ಲೇಡಿ ಸೂಪರ್‌ಸ್ಟಾರ್ ನಯನತಾರಾ ಹೊಸ ಫೋಟೋ ಶೂಟ್‌ ವೈರಲ್ ಆಗಿದೆ. ಮಾಡ್ರನ್ ಉಡುಪಿನಲ್ಲಿ ಮಿಂಚುತ್ತಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ತಮಿಳಿನ ಅಯ್ಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಯನತಾರಾ ಇಂದು ಒಂದು ಸಿನಿಮಾಗೆ ಅತೀ ಹೆಚ್ಚು ಚಾರ್ಜ್ ಮಾಡುವ ಪ್ರಭಾವಿ ನಟಿಯರಲ್ಲಿ ಒಬ್ಬರು.

ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ ಸ್ಟಾರ್ ಆದ ನಯನತಾರಾ, ಮೊದಲು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿ, ಆಮೇಲೆ ಸ್ತ್ರೀ ಪ್ರಧಾನ ಚಿತ್ರಗಳನ್ನೇ ಆರಿಸಿ ನಟಿಸಿ ಲೇಡಿ ಸೂಪರ್‌ಸ್ಟಾರ್ ಆದರು.

Tap to resize

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿರುವ ನಯನತಾರ, ಜವಾನ್ ಸಿನಿಮಾದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ಬಾಲಿವುಡ್‌ನಲ್ಲಿ ಅವರು ನಟಿಸಿದ ಚೊಚ್ಚಲ ಸಿನಿಮಾವೂ ಹಿಟ್ ಆಯ್ತು.

ಜವಾನ್ ನಂತರ ನಯನತಾರಾಗೆ ಪ್ಯಾನ್ ಇಂಡಿಯಾ ಸಿನಿಮಾ ಆಫರ್‌ಗಳು ಬರುತ್ತಿವೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ಗೆ ಅಕ್ಕನಾಗಿ ನಟಿ ನಯನತಾರಾ ನಟಿಸುತ್ತಿದ್ದಾರೆ.

ನಯನತಾರಾ ಕೈಯಲ್ಲಿ ಪ್ರಸ್ತುತ ಟಾಕ್ಸಿಕ್ ಜೊತೆ  ಮೂರು ತಮಿಳು ಸಿನಿಮಾಗಳಿವೆ. ಮನ್ನಾಂಗಟ್ಟಿ, ಟೆಸ್ಟ್ ಮತ್ತು ಹಾಯ್ ಸಿನಿಮಾಗಳಲ್ಲಿಅವರು ನಟಿಸುತ್ತಿದ್ದಾರೆ.

40ರ ವಯಸಿನಲ್ಲೂ ಯಂಗ್ ಆಗಿ ಕಾಣುವ ನಯನತಾರಾ, ಆಭರಣಗಳಿಂದ ಮತ್ತು ಮಾಡ್ರನ್ ಉಡುಪುಗಳಲ್ಲಿ ಮಿಂಚುತ್ತಿರುವ ಫೋಟೋಗಳು ವೈರಲ್ ಆಗಿವೆ. 

Latest Videos

click me!