ಒಂದು ಕಿಸ್ಸಿಂಗ್ ಸೀನ್‌ಗೆ 47 ಟೇಕ್‌, ಹಿರೋಯಿನ್ ತಾಯಿ ಮುಂದೆ 3 ದಿನ ಶೂಟಿಂಗ್

First Published | Nov 14, 2024, 11:26 AM IST

ಬಾಲಿವುಡ್‌ ಸಿನಿಮಾಗಳಲ್ಲಿ ಲಿಪ್‌ಲಾಕ್ ಸೀನ್‌ ಸಂಸ್ಕೃತಿ ಬಹಳ ಹಿಂದೆಯೇ ಆರಂಭವಾಗಿದೆ. ಆದರೆ ನಾಯಕಿ ಜೊತೆಗಿನ ಒಂದು ಲಿಪ್‌ಲಾಕ್‌ ಸೀನ್‌ಗಾಗಿ ಬಾಲಿವುಡ್‌ ನಟರೊಬ್ಬರು 47 ಟೇಕ್‌ಗಳನ್ನು ತೆಗೆದುಕೊಂಡಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?
 

90ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಲಿಪ್‌ಲಾಕ್ ದೃಶ್ಯ ಎಂದರೆ ಒಂದು ಕ್ರೇಜಿ ವಿಷಯ. ಈಗಲೂ ಭಾರತೀಯ ಪ್ರೇಕ್ಷಕರು ಇದನ್ನು ಬೋಲ್ಡ್ ಪ್ರಯತ್ನ ಎಂದೇ ನೋಡುತ್ತಾರೆ. ಬಾಲಿವುಡ್‌ನಲ್ಲಿ ಈ ಟ್ರೆಂಡ್ ಬಹಳ ಹಿಂದೆಯೇ ಆರಂಭವಾದರೆ, ದಕ್ಷಿಣ ಭಾರತದ ಚಿತ್ರಗಳಲ್ಲೂ ಈಗ ಲಿಪ್‌ಲಾಕ್ ದೃಶ್ಯಗಳು ಸಾಮಾನ್ಯವಾಗಿವೆ. ಆಗ ಸಿನಿಮಾವೊಂದಕ್ಕಾಗಿ ಒಂದು ಲಿಪ್‌ಲಾಕ್ ದೃಶ್ಯವನ್ನು ಮೂರು ದಿನಗಳ ಕಾಲ ಚಿತ್ರೀಕರಿಸಲಾಗಿತ್ತು ಎಂಬ ವಿಚಾರ ನಿಮಗೆ ಗೊತ್ತಾ?

ಬಾಲಿವುಡ್ ನಟ ಆಮೀರ್ ಖಾನ್‌ ಲಿಪ್‌ಲಾಕ್ ಸೀನ್‌ಗೂ ಎಣ್ಣೆ ಸೀಗೆಯ ಸಂಬಂಧ. ಆಮೀರ್ ಖಾನ್ ಜೊತೆ ಕಿಸ್ಸಿಂಗ್ ದೃಶ್ಯ ಕಠಿಣವಾಗಿತ್ತು ಎಂದು ಕರಿಷ್ಮಾ ಕಪೂರ್ ಹೇಳಿದ್ದಾರೆ. ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಈ ಜೋಡಿ ಪರಸ್ಪರ ಮುತ್ತಿಡುವ ಸೀನ್‌ನಲ್ಲಿ ನಟಿಸಿದ್ದರು. ಅಮೀರ್-ಕರಿಷ್ಮಾ ನಡುವಿನ ಈ ಕಿಸ್ಸಿಂಗ್ ದೃಶ್ಯವನ್ನು ಚಿತ್ರೀಕರಿಸಲು ಬರೋಬ್ಬರಿ 3 ದಿನಗಳನ್ನು ತೆಗೆದುಕೊಂಡಿದ್ದಾರಂತೆ. ರಾಜಾ ಹಿಂದೂಸ್ತಾನಿ ಸಿನಿಮಾವನ್ನು ಧರ್ಮೇಶ್ ದರ್ಶನ್ ನಿರ್ದೇಶನ ಮಾಡಿದ್ದರು. 3 ದಶಕಗಳ ವೃತ್ತಿಜೀವನದಲ್ಲಿ ಈ ನಿರ್ದೇಶಕರು ಕೇವಲ7 ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದಾರೆ.

Tap to resize

ಧರ್ಮೇಶ್ ದರ್ಶನ್ ಅವರು ಒಂದು ಸೀನ್‌ನ ಪರಿಪೂರ್ಣತೆಗಾಗಿ ನಟರಿಗೆ ಚುಕ್ಕೆಗಳನ್ನು ತೋರಿಸುತ್ತಿದ್ದರಂತೆ. ಎಷ್ಟೇ ದೊಡ್ಡ ತಾರೆಯಾಗಿದ್ದರೂ, ತಾನು ಅಂದುಕೊಂಡಂತೆ ದೃಶ್ಯ ಬರುವವರೆಗೂ ಟೇಕ್‌ಗಳನ್ನು ತೆಗೆಸುತ್ತಲೇ ಇರುತ್ತಿದ್ದರಂತೆ. ಧರ್ಮೇಶ್ ದರ್ಶನ್ ಅವರ ಎರಡನೇ ಚಿತ್ರ ರಾಜಾ ಹಿಂದೂಸ್ತಾನಿಯಲ್ಲಿ ಅಮೀರ್ ಖಾನ್-ಕರಿಷ್ಮಾ ಕಪೂರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಅಮೀರ್ ಖಾನ್-ಕರಿಷ್ಮಾ ಕಪೂರ್ ನಡುವೆ ಒಂದು ಲಿಪ್‌ಲಾಕ್ ದೃಶ್ಯವಿದೆ. ಈ ರೋಮ್ಯಾಂಟಿಕ್ ದೃಶ್ಯದ ಚಿತ್ರೀಕರಣ ಒಂದು ಹಂತದಲ್ಲಿ ಮುಗಿಯಲೇ ಇಲ್ಲವಂತೆ.

ಈ ಲಿಪ್‌ಲಾಕ್ ದೃಶ್ಯದ ಚಿತ್ರೀಕರಣಕ್ಕಾಗಿ ಅಮೀರ್ ಖಾನ್ ಬರೋಬ್ಬರಿ 47 ಟೇಕ್‌ಗಳನ್ನು ತೆಗೆದುಕೊಂಡಿದ್ದಾರಂತೆ. ಮೂರು ದಿನಗಳ ಕಾಲ ಚಿತ್ರೀಕರಣ ಮಾಡಬೇಕಾಯಿತಂತೆ. ಕರಿಷ್ಮಾ ಕಪೂರ್ ಅವರ ತಾಯಿ ಕೂಡ ಆ ಸೆಟ್‌ನಲ್ಲಿದ್ದರಂತೆ. ಈ ಕಿಸ್ಸಿಂಗ್ ದೃಶ್ಯದ ಬಗ್ಗೆ ನಂತರ ಕರಿಷ್ಮಾ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಅದು ಕಹಿ ಅನುಭವ ಎಂದು ಅವರು ಹೇಳಿದ್ದಾರೆ. ಆ ದೃಶ್ಯವನ್ನು ಚಿತ್ರೀಕರಿಸಿದ ದಿನಗಳು ಬೇಸರದಿಂದ ಕೂಡಿದ್ದವು ಎಂದು ಅವರು ಹೇಳಿದ್ದಾರೆ.
 

ಕರಿಷ್ಮಾ ಕಪೂರ್ ರಂತೆ ಹಲವಾರು ನಟರು ತಮ್ಮ ಸಹನಟರೊಂದಿಗಿನ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರ್ಡರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಸರಣಿ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸಿ ಕಿಸ್ಸಿಂಗ್ ಸೀನ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಎಂದು ಕರೆಸಿಕೊಂಡಿದ್ದ ಇಮ್ರಾನ್ ಹಶ್ಮಿ, ನಾಯಕಿ ಮಲ್ಲಿಕಾ ಶೆರಾವತ್ ಜೊತೆಗಿನ ಆನ್‌ಸ್ಕ್ರೀನ್ ಕಿಸ್ಸಿಂಗ್‌ ಅತ್ಯಂತ ಕೆಟ್ಟ ಅನುಭವ ಎಂದಿದ್ದಾರೆ.

ರಂಗೂನ್ ಚಿತ್ರದಲ್ಲಿ ಶಾಹಿದ್ ಕಪೂರ್-ಕಂಗನಾ ರನೌತ್ ಜೋಡಿಯಾಗಿ ನಟಿಸಿದ್ದರು. ಆ ಸಿನಿಮಾದಲ್ಲೂ ಇವರಿಬ್ಬರ ಲಿಪ್‌ಲಾಕ್ ದೃಶ್ಯವಿದೆ. ಶಾಹಿದ್ ಜೊತೆ ಆ ದೃಶ್ಯವನ್ನು ಮಾಡುವುದು ಬಹಳ ಅಸಹ್ಯವೆನಿಸಿತು ಎಂದು ಕಂಗನಾ ರನೌತ್ ಹೇಳಿದ್ದಾರೆ. ಲವ್ ಅಗೈನ್ ಚಿತ್ರದಲ್ಲಿ ಪತಿ ನಿಕ್ ಜೋನಾಸ್‌ಗೆ ಪ್ರಿಯಾಂಕಾ ಚೋಪ್ರಾ ಮುತ್ತಿಟ್ಟಿದ್ದಾರೆ. ಆದರೆ ನಿಕ್ ಜೋನಾಸ್ ಅವರಿಗೆ ಆನ್‌ಸ್ಕ್ರೀನ್ ಮುತ್ತಿಡುವುದು ತುಂಬಾ ಮುಜುಗರದ ಸಂಗತಿ ಆಗಿತ್ತು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ನಾಯಕಿ ಮಾಧುರಿ ದೀಕ್ಷಿತ್ ದಯಾವನ್ ಚಿತ್ರದಲ್ಲಿ ನಾಯಕ ವಿನೋದ್ ಖನ್ನಾ ಜೊತೆ ಕಿಸ್ಸಿಂಗ್ ದೃಶ್ಯ ಮಾಡಿದ್ದರು. ಆ ಕಿಸ್ಸಿಂಗ್‌ನಿಂದ ತುಂಬಾ ಬೇಸರಪಟ್ಟಿದ್ದಾಗಿ ಒಂದು ಸಂದರ್ಭದಲ್ಲಿ ಹೇಳಿಕೊಂಡಿದ್ದರು.. ಬ್ರೇಕ್ ಕೆ ಬಾದ್‌ ಚಿತ್ರದಲ್ಲಿ ಇಮ್ರಾನ್ ಖಾನ್-ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಮುತ್ತು ದೃಶ್ಯ ಮಾಡಲು ತುಂಬಾ ಮುಜುಗರವಾಯಿತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಕೆಲಕಾಲ  ಪರಸ್ಪರ ಡೇಟಿಂಗ್ ಮಾಡ್ತಿದ್ದ ರಣಬೀರ್ ಕಪೂರ್-ಕತ್ರಿನಾ ಕೈಫ್ ಕೂಡ ಜೊತೆಯಾಗಿ ಜಗ್ಗಾ ಜಾಸೂಸ್ ಎಂಬ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಜೊತೆ ಲಿಪ್‌ಲಾಕ್ ದೃಶ್ಯ ಇದ್ದರೂ, ರಣಬೀರ್ ಕಪೂರ್ ಕೆನ್ನೆಗೆ ಮುತ್ತಿಟ್ಟು ಸರಿದೂಗಿಸಿದ್ದಾರಂತೆ. ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಆಲಿಯಾ ಭಟ್ ಜೋಡಿಯಾಗಿದ್ದಾರೆ. ಆಲಿಯಾ ಜೊತೆಗಿನ ಲಿಪ್‌ಲಾಕ್ ಅನುಭವ ಭಯಾನಕ ಎಂದು ಸಿದ್ಧಾರ್ಥ್ ಮಲ್ಹೋತ್ರಾ ಅಚ್ಚರಿಯ ಹೇಳಿಕೆ ನೀಡಿದ್ದರು. 

Latest Videos

click me!