ಬಾಲಿವುಡ್ ಪಾರ್ಟಿ ಸಹವಾಸವೇ ಬೇಡವೆಂದು ಕೃಷಿ ಮಾಡಲು ಹೊರಟಿದ್ದ ಉಲ್ಲಾಸ ಉತ್ಸಾಹ ನಟಿ

Published : Feb 21, 2023, 04:52 PM ISTUpdated : Feb 21, 2023, 04:53 PM IST

ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ ಒಬ್ಬರು ಯಾಮಿ ಗೌತಮ್‌ (Yami Gautam). ಆದರೆ ಯಾಮಿ ತಮ್ಮ ನಟನಾ ಕೆರಿಯರ್‌ ಶುರು ಮಾಡಿದ್ದು ಕನ್ನಡ ಸಿನಿಮಾಗಳ ಮೂಲಕ ಎಂದು ತಿಳಿದಿರುವುದು ಕಡಿಮೆ. ಪ್ರಬುದ್ಧ ಅಭಿನಯದ ಮತ್ತು ಪಾತ್ರಗಳ ಆಯ್ಕೆಗಳ ಕಾರಣದಿಂದ ಇಂದು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಯಾಮಿ ಹಿಂದೊಮ್ಮೆ ಸಿನಿಮಾ ಬಿಟ್ಟು ಕೃಷಿ ಮಾಡಲು ಯೋಚಿಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಶಾಕ್‌ ಆಗುತ್ತೀರಿ. ಅಷ್ಟಕ್ಕೂಯಾಮಿ ನಿರ್ಧಾರದ ಹಿಂದಿನ  ಕಾರಣವೇನು ನೋಡಿ.  

PREV
19
ಬಾಲಿವುಡ್ ಪಾರ್ಟಿ ಸಹವಾಸವೇ ಬೇಡವೆಂದು ಕೃಷಿ ಮಾಡಲು ಹೊರಟಿದ್ದ ಉಲ್ಲಾಸ ಉತ್ಸಾಹ ನಟಿ

ನಟಿ ಯಾಮಿ ಗೌತಮ್ 2008 ರಲ್ಲಿ ಟಿವಿಯೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ ಮೊದಲು ನಾಯಕಿ ನಟಿಯಾಗಿ ಆವಕಾಶ ಪಡೆದಿದ್ದು ಕನ್ನಡ ಸಿನಿಮಾದಲ್ಲಿ.
 

29

ಯಾಮಿ ಗೌತಮ್‌ 2010ರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಉಲ್ಲಾಸ ಉತ್ಸಾಹ  ಕನ್ನಡ ಸಿನಿಮಾದ ಮೂಲಕ ಚಲನಚಿತ್ರ ಪಾದಾರ್ಪಣೆ ಮಾಡಿದರು.ಸಿನಿಮಾ ನೆಲ ಕಚ್ಚಿದರೂ ಯಾಮಿ ಅಭಿನಯ ಗಮನ ಸೆಳೆಯಿತು.

39

ನಂತರ ಪಂಜಾಬಿ ಚಲನಚಿತ್ರದಲ್ಲಿ, 011 ರಲ್ಲಿ ತೆಲುಗು ಚಲನಚಿತ್ರದಲ್ಲಿ ಕಾಣಿಸಿಕೊಂಡ ಯಾಮಿ ವಿಕ್ಕಿ ಡೋನರ್‌ ಮೂಲಕ  ಹಿಂದಿ ಚಲನಚಿತ್ರಗಳಲ್ಲಿ ತೊಡಗಿಸಿಕೊಂಡರು ಮತ್ತು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ  ಜನಪ್ರಿಯರಾದರು.

49

ಇತ್ತೀಚಿನ ಸಂದರ್ಶನವೊಂದರಲ್ಲಿ, ಚಲನಚಿತ್ರಗಳನ್ನು ತ್ಯಜಿಸಲು ಮತ್ತು ಕೃಷಿಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸಿದ್ದಾಗಿ ಯಾಮಿ ಬಹಿರಂಗಪಡಿಸಿದ್ದಾರೆ. 

59

ಯಾವಾಗಲೂ ಪ್ರಚಾರದಿಂದ ದೂರವುಳಿಯಲು ಬಯಸುವ ಯಾಮಿ ಬಾಲಿವುಡ್ ಪಾರ್ಟಿಗಳಲ್ಲಿ ಬೆರೆಯುವ ಮತ್ತು ನೆಟ್‌ವರ್ಕ್ ಮಾಡುವ ಬಗ್ಗೆ ಹೇಳಲಾಗದ ಒತ್ತಡವಿದೆ ಎಂದು ಅವರು ಭಾವಿಸಿತ್ತಾರೆ.


 

69

'ಈ ನಗರ ನಿಮ್ಮನ್ನು ಪರೀಕ್ಷಿಸುತ್ತದೆ ಮತ್ತು ನಿಮ್ಮನ್ನು ಒಡೆಯುತ್ತದೆ.  ನನ್ನ ಜೀವನದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು.- ಹಿಮಾಚಲ ಪ್ರದೇಶದಲ್ಲಿ ನನಗೆ ಒಂದು ತುಂಡು ಭೂಮಿ ಇದೆ, ಮತ್ತು ಈ ಚಿತ್ರವು ಯಶಸ್ವಿ ಆಗದಿದ್ದರೆ ನಾನು ಕೃಷಿ ಮಾಡುತ್ತೇನೆಂದು ಕೊಂಡಿದ್ದ,' ಎಂದು ಯಾಮಿ ಗೌತಮ್ ಮನರಂಜನಾ ಪೋರ್ಟಲ್‌ಗೆ ನೀಡಿದ  ಸಂದರ್ಶನದಲ್ಲಿ ಹೇಳಿದ್ದಾರೆ.

79

'ಮೊದಲ ಚಿತ್ರ ಕೆಲಸ ಮಾಡದಿದ್ದರೆ ತಾನು ಹಿಂತಿರುಗುತ್ತೇನೆ ಎಂದು ನನ್ನ ತಾಯಿಗೆ ಹೇಳಿದೆ. ನಾನು ನಟನೆ ಮತ್ತು ಪಾತ್ರಗಳಲ್ಲಿ ಸಂತೋಷವಾಗಿದ್ದೇನೆ, ಆದರೆ ಪ್ರಕ್ರಿಯೆಯು ನಿಮ್ಮನ್ನು ಪರೀಕ್ಷಿಸುತ್ತದೆ' ಎಂದು ಅವರು ಹೇಳಿದರು.

89

'ನೀನು ಒಳ್ಳೆಯ ನಟಿ ಎಂದು ಜನರಿಗೆ ಏಕೆ ಹೇಳಬೇಕು? ಆದರೆ ಬಹಳ ಸಮಯದಿಂದ ನನಗೆ ನೆಟ್‌ವರ್ಕ್ ಮಾಡಲು ಮತ್ತು ಬೆರೆಯಲು ಹೇಳಲಾಗಿದೆ. ಇದು ಕೆಟ್ಟದ್ದಲ್ಲ, ಆದರೆ ಇದು ಕಂಫರ್ಟಬಲ್‌ ಅಲ್ಲ ಅನ್ನಿಸುವ ನನ್ನಂತಹ ಜನರೂ ಇದ್ದಾರೆ.. ಕೇವಲ ಕೆಲಸ ಪಡೆಯಲು ಪಾರ್ಟಿಗೆ ನಾನು ಯಾಕೆ ಹೋಗಬೇಕು?    ನಿಮಗೆ ಇಷ್ಟವಿದ್ದರೆ, ಮುಂದುವರಿಯಿರಿ.ನಾನು ಜಡ್ಜ್‌ ಮಾಡುತ್ತಿಲ್ಲ' ಎಂದು ಯಾಮಿ ಹೇಳಿದರು

99

'ತನ್ನ ಸಮಕಾಲೀನರಲ್ಲಿ ಅನೇಕರು ಅದೇ ಪಾರ್ಟಿಗಳು ಮತ್ತು ಉದ್ಯಮದಲ್ಲಿ ನೆಟ್‌ವರ್ಕಿಂಗ್ ಒತ್ತಡದ ಬಗ್ಗೆ ದೂರು ನೀಡುತ್ತಾರೆ .ಆದರೆ ಅವರು ಇನ್ನೂ ಅದೇ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಾರೆ' ಎಂದು ನಟಿ ಬಹಿರಂಗಪಡಿಸಿದ್ದಾರೆ.

Read more Photos on
click me!

Recommended Stories