Taraka Ratna; ತಾರಕ ರತ್ನ ಅಂತಿಮ ದರ್ಶನ ಪಡೆದ ತೆಲುಗು ಸ್ಟಾರ್ಸ್, ಜೂ.ಎನ್ ಟಿ ಆರ್ ಭಾವುಕ

Published : Feb 20, 2023, 06:01 PM IST

ಅಲ್ಲು ಅರ್ಜುನ್, ಕಲ್ಯಾಣ್ ರಾಮ್ ಸೇರಿದಂತೆ ಅನೇಕ ತೆಲುಗು ಸ್ಟಾರ್ಸ್ ತಾರಕ ರತ್ನ ಅಂತಿಮ ದರ್ಶ ಪಡೆದಿದ್ದಾರೆ. ಅಂತಿಮ ದರ್ಶನ ವೇಳೆ ಜೂ ಎನ್ ಟಿ ಆರ್ ಭಾವುಕರಾಗಿದ್ದಾರೆ. 

PREV
16
Taraka Ratna; ತಾರಕ ರತ್ನ ಅಂತಿಮ ದರ್ಶನ ಪಡೆದ ತೆಲುಗು ಸ್ಟಾರ್ಸ್, ಜೂ.ಎನ್ ಟಿ ಆರ್ ಭಾವುಕ

ತೆಲುಗು ನಟ, ರಾಜಕಾರಣಿ, ತಾರಕ ರತ್ನ ಫೆಬ್ರವರಿ 18 ರಂದು ಕೊನೆಯುಸಿರೆಳೆದರು. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಾರಕ ರತ್ನ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆಯೇ ತಾರಕ್ ರತ್ನ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ತಾರಕ ರತ್ನ ಕೊನೆಗೂ ಬದುಕಿಬರಲಿಲ್ಲ. ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. 

26

ಇಂದು (ಫೆಬ್ರವರಿ 20) ಹೈದರಾಬಾದ್ ನಲ್ಲಿ ತಾರಕ ರತ್ನ ಅವರ ಅಂತಿಮ ಸಂಸ್ಕಾರ ನೆರವೇರಿತು. ಟಾಲಿವುಡ್ ನ ಅನೇಕ ಗಣ್ಯರು ತಾರಕ ರತ್ನ ಅವರ ಅಂತಿಮ ದರ್ಶನ ಪಡೆದರು. ಅಲ್ಲು ಅರ್ಜುನ್, ಬಾಲಕೃಷ್ಣ, ಜೂ.ಎನ್ ಟಿ ಆರ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

36

ತಾರಕ ರತ್ನ ಅವರ ಸೋದರ ಸಂಬಂಧಿ ಜೂ.ಎನ್ ಟಿ ಆರ್ ಕೂಡ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನದ ವೇಳೆ ಜೂ.ಎನ್ ಟಿ ಆರ್ ಭಾವುಕರಾಗಿದ್ದಾರೆ. 

46

ಜೂ.ಎನ್ ಟಿ ಆರ್ ಅಂತಿಮ ದರ್ಶನ ಪಡೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂ ಎನ್ ಟಿ ಆರ್ ಪತ್ನಿ ಮತ್ತು ತಾಯಿ ಜೊತೆ ಆಗಮಿಸಿ ಅಂತಿಮ ದರ್ಶನ ಪಡೆದರು. ಅಭಿಮಾನಿಗಳು ಕಾಮೆಂಟ್ ಮಾಡಿ ಧೈರ್ಯ ತಂದುಕೊಳ್ಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.   
 

56

ತಾರಕ ರತ್ನ ಸಾವು ಅವರ ಕುಟುಂಬಕ್ಕೆ ದೊಡ್ಡ ಆಘಾತನೀಡಿದೆ. ಅವರ ಸಾವಿನ ಸುದ್ದಿ ತಿಳಿದ ಪತ್ನಿ ಅಲೇಖ್ಯಾ ರೆಡ್ಡಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

66

ತಾರಕ ರತ್ನ ಪ್ರಸಿದ್ಧ ಚಲನಚಿತ್ರ ನಟ ಮತ್ತು ಮಾಜಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ ಮೊಮ್ಮಗ ಮತ್ತು ನಂದಮೂರಿ ಮೋಹನ್ ಕೃಷ್ಣ ಅವರ ಮಗ. ಅವರು ಪತ್ನಿ ಅಲೇಖ್ಯ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read more Photos on
click me!

Recommended Stories