ತನ್ನನ್ನು ಮಿಮಿಕ್ರಿ ಮಾಡಿದ ನಟಿಗೆ ಕಂಗನಾ ಬಿಡ್ತಾರಾ ಸುಮ್ಮನೆ?

Published : Feb 21, 2023, 05:51 PM IST

 ನಟಿ ಕಂಗನಾ ರಣಾವತ್‌ (Kangana Ranaut) ಅವರು ಯಾಮಿ ಗೌತಮ್ (yami Gautam) ಅವರ ಹಳೆಯ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. 2019 ರಲ್ಲಿ, ಯಾಮಿ ಬಾಬಾ ಕಿ ಚೌಕಿ ಶೋನಲ್ಲಿ ಕಂಗನಾ ಅವರ  ಧ್ವನಿಯನ್ನು ಅನುಕರಿಸಲು ಪ್ರಯತ್ನಿಸಿದರು. ಈ ವಿಡಿಯೋಗೆ ಈಗ ಕಂಗನಾ ಉತ್ತರ ನೀಡಿದ್ದಾರೆ. ಕಂಗನಾ ಯಾಮಿಯ ಈ ಕೆಲಸಕ್ಕೆ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ನೋಡಿ.

PREV
110
ತನ್ನನ್ನು ಮಿಮಿಕ್ರಿ ಮಾಡಿದ ನಟಿಗೆ ಕಂಗನಾ ಬಿಡ್ತಾರಾ ಸುಮ್ಮನೆ?
Kangana

ವೀಡಿಯೊದಲ್ಲಿ ಯಾಮಿ ಗೌತಮ್  ಕಂಗನಾರನ್ನು ಅನುಕರಿಸಿದರು ಮತ್ತು ಅವರ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸಿದರು. ಕಂಗನಾ ಇದನ್ನು ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

210

ಈ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ನಾಟಿ ಗರ್ಲ್‌, ನಾವು ಮುಂದಿನ ಬಾರಿ ಭೇಟಿಯಾದಾಗ ನೀನು ಇದನ್ನು ನೀನು ನನ್ನ ಮುಂದೆಯೇ ಮಾಡಬೇಕು,' ಎಂದು ಬರೆದುಕೊಂಡಿದ್ದಾರೆ.

310

ಆಯುಷ್ಮಾನ್ ಖುರಾನಾ ಅವರೊಂದಿಗೆ ಬಾಲಾ ಚಿತ್ರದ ಪ್ರಚಾರದ ಸಮಯದ ಯಾಮಿ  ಗೌತಮ್‌ ಅವರ ವೀಡಿಯೋ ಇದು. ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರವು ನವೆಂಬರ್ 8, 2019 ರಂದು ಬಿಡುಗಡೆಯಾಯಿತು.

 

 

410

ಆ ಸಮಯದಲ್ಲಿ ಯಾಮಿ ಗೌತಮ್ ಕಂಗನಾರನ್ನು ಅನುಕರಿಸಿದರು ಮತ್ತು ಅವರ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

510

ಕಂಗನಾ ರಣಾವತ್ ಅವರ ಈ ಪ್ರತಿಕ್ರಿಯೆಗೆ ಯಾಮಿ ಗೌತಮ್ ತಮ್ಮ ಉತ್ತರವನ್ನು ನೀಡಿದ್ದಾರೆ. ಕಂಗನಾ ಅವರ ಈ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ, ಯಾಮಿ ಮತ್ತೊಮ್ಮೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

610

'ಹಹಾ.. ಓ ದೇವರೇ, ನಾನು ನಿಮ್ಮ ಮುಂದೆ ಇದನ್ನು ಮಾಡಬೇಕಾದರೆ, ನಾನು ಭಯ ಆಗುತ್ತೆನ್ನುವುದು ನನಗೆ ಖಾತ್ರಿಯಿದೆ. ಇದು ಕೇವಲ ಸಂಪೂರ್ಣ ಪ್ರೀತಿ ಮತ್ತು ಅಭಿಮಾನದಿಂದ' ಎಂದು ಯಾಮಿ ಬರೆದುಕೊಂಡಿದ್ದಾರೆ. 

710

ಹೀಗೆ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಹೊಗಳುವುದನ್ನು ಕಾಣಬಹುದು. ವಾಸ್ತವವಾಗಿ ಈ ಇಬ್ಬರೂ ನಟಿಯರು ಹಿಮಾಚಲ ಪ್ರದೇಶದ ಮೂಲದವರು. 

810

ಈ ನಡುವೆ  ಯಾಮಿಯ ಹೊಸ ಚಿತ್ರ ಲಾಸ್ಟ್‌ ಗಮನ ಸೆಳೆದಿದೆ ಅನಿರುದ್ಧ್ ರಾಯ್ ಚೌಧರಿ ನಿರ್ದೇಶಿಸಿದ ಈ ಚಿತ್ರದಲ್ಲಿ ಅವರು ಪತ್ರಕರ್ತೆಯಾಗಿ ನಟಿಸಿದ್ದಾರೆ. ಯಾಮಿ ಗೌತಮ್ ಅವರಲ್ಲದೆ, ಚಿತ್ರದಲ್ಲಿ ತುಷಾರ್ ಪಾಂಡೆ, ಪಂಕಜ್ ಕಪೂರ್, ನೀಲ್ ಭೂಪಾಲಂ, ರಾಹುಲ್ ಖನ್ನಾ ಮತ್ತು ಪಿಯಾ ಬಾಜ್‌ಪೈ ಕೂಡ  ನಟಿಸಿದ್ದಾರೆ. ಇದು ಫೆಬ್ರವರಿ 16 ರಿಂದ  Zee5 ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿದೆ. 

910

ಇದಲ್ಲದೆ  ನೆಟ್‌ಫ್ಲಿಕ್ಸ್‌ನ ಮುಂಬರುವ ಚೋರ್ ನಿಕಲ್ ಕೆ ಭಾಗಾ ಹೈ ಜೊತೆಗೆ ಸನ್ನಿ ಕೌಶಲ್ ಮತ್ತು ಅಕ್ಷಯ್ ಕುಮಾರ್-ನಟಿಸುವ OMG 2 - ಓ ಮೈ ಗಾಡ್ ಪ್ರಾಜೆಕ್ಟ್‌ಗಳನ್ನು ಸಹ ಯಾಮಿ ಹೊಂದಿದ್ದಾರೆ.

1010

ಅದೇ ಸಮಯದಲ್ಲಿ, ಕಂಗನಾರ ಖಾತೆಯಲ್ಲಿ  ಅನೇಕ ಯೋಜನೆಗಳಿವೆ. ಇವುಗಳಲ್ಲಿ ಪಿ ವಾಸು ಅವರ ಚಂದ್ರಮುಖಿ 2,  ಎಮರ್ಜೆನ್ಸಿ, ತೇಜಸ್, ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಮತ್ತು ದಿ ಅವತಾರ್: ಸೀತಾ ಸೇರಿವೆ.

Read more Photos on
click me!

Recommended Stories