ಫುಟ್ಬಾಲ್ ಲೆಜೆಂಡ್‌ ಡೇವಿಡ್ ಬೆಕ್‌ಹ್ಯಾಮ್ ಜತೆ ಕುಳಿತು ನ್ಯೂಜಿಲೆಂಡ್ ವಿರುದ್ಧ ಪಂದ್ಯ ವೀಕ್ಷಿಸಿದ ಬಾಲಿವುಡ್‌ ದಂಪತಿ!

Published : Nov 16, 2023, 05:15 PM IST

ನ್ಯೂಜಿಲೆಂಡ್ ಮತ್ತು ಭಾರತ (India Vs New Zealand) ನಡುವಿನ ವಿಶ್ವಕಪ್‌ ಸೆಮಿಫೈನಲ್ಸ್‌ (ICC World Cup 2023) ಪಂದ್ಯವನ್ನು ವೀಕ್ಷಿಸಲು ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ (David Beckham )  ವಾಂಖೆಡೆ ಸ್ಟೇಡಿಯಂಯಲ್ಲಿ ಹಾಜರಾಗಿದ್ದರು. ಈ ಸಮಯದಲ್ಲಿ  ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ( Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಕುಳಿತಿರುವ ಫೋಟೋಗಳು ಸಖತ್‌ ವೈರಲ್‌ ಆಗಿವೆ.ವಿಶ್ವಕಪ್ ಸೆಮಿಫೈನಲ್‌ ಪಂದ್ಯದ ವೇಳೆಯಿಂದ ಕ್ರೀಡಾಂಗಣದ ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳ ಪುಟವು Instagram ನಲ್ಲಿ ಹಂಚಿಕೊಂಡಿದೆ. 

PREV
16
ಫುಟ್ಬಾಲ್ ಲೆಜೆಂಡ್‌ ಡೇವಿಡ್ ಬೆಕ್‌ಹ್ಯಾಮ್ ಜತೆ  ಕುಳಿತು  ನ್ಯೂಜಿಲೆಂಡ್ ವಿರುದ್ಧ ಪಂದ್ಯ ವೀಕ್ಷಿಸಿದ ಬಾಲಿವುಡ್‌ ದಂಪತಿ!

ಬುಧವಾರ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ  ಟೀಮ್ ಇಂಡಿಯಾದ ಹುರಿದುಂಬಿಸಲು ಚಿತ್ರರಂಗದ ಹಲವು  ಸೆಲೆಬ್ರೆಟಿಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು.

26

ಪಂದ್ಯದ ವೇಳೆ ಬಾಲಿವುಡ್ ತಾರೆಯರಲ್ಲದೆ, ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಮಾಜಿ ಇಂಗ್ಲೆಡ್‌ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಸಹ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಪಂದ್ಯಕ್ಕೆ ಹಾಜರಾಗಿದ್ದರು. 

36
Kiara

ಇದೀಗ, ಫುಟ್ಬಾಲ್ ಆಟಗಾರ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. 

46

ಕಿಯಾರಾ ಸಿದ್ಧಾರ್ಥ್‌ ಫ್ಯಾನ್‌  ಪುಟಗಳಿಂದ ಹಂಚಿಕೊಂಡ ಫೋಟೋಗಳಲ್ಲಿ ಡೇವಿಡ್ ಬೆಕ್‌ಹ್ಯಾಮ್ ಕಿಯಾರಾ ಮತ್ತು ಸಿದ್ಧಾರ್ಥ್ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. 

56

ಒಂದು ಫೋಟೋದಲ್ಲಿ  ಮೂವರೂ ಮಾತುಕತೆಯಲ್ಲಿ ತೊಡಗಿರುವುದನ್ನು ಸಹ  ನೋಡಬಹುದು, ಇನ್ನೊಂದರಲ್ಲಿ ಎಲ್ಲರೂ ನಿಂತು ಚಪ್ಪಾಳೆ ತಟ್ಟಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವುದನ್ನು ನೋಡಬಹುದು.

66

'ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ #ಡೇವಿಡ್ ಬೆಕ್ಹ್ಯಾಮ್, ಆಕಾಶ್ ಅಂಬಾನಿ ಅವರೊಂದಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಕ್ಯಾಂಡಿಡ್ ಕ್ಷಣ' ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಅಭಿಮಾನಿಗಳ ಪುಟದಿಂದ ಹಂಚಿಕೊಳ್ಳಲಾಗಿದೆ.

Read more Photos on
click me!

Recommended Stories