ಗಾರ್ಮೆಂಟ್ಸ್‌ನಲ್ಲಿ ಕೆಲ್ಸ ಮಾಡ್ತಿದ್ದ ವ್ಯಕ್ತಿಯೀಗ ಸೂಪರ್‌ಸ್ಟಾರ್‌, 2 ನ್ಯಾಷನಲ್‌ ಅವಾರ್ಡ್‌ ವಿಜೇತ ನಟ!

First Published | Nov 16, 2023, 12:30 PM IST

ದಕ್ಷಿಣಭಾರತದ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳೋ ಈ ನಟನಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ ನಟನಾಗೋ ಮುನ್ನ ಈ ವ್ಯಕ್ತಿ ಗಾರ್ಮೆಂಟ್ಸ್‌ನಲ್ಲೂ ಕೆಲಸ ಮಾಡಿದ್ದರು. ಈಗ ಖ್ಯಾತ ನಟನಾಗಿದ್ದು, ಚಿತ್ರವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇವರ ಪತ್ನಿ ಸಹ ಹೆಸರಾಂತ ನಟಿ. 

ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಸೂಪರ್‌ಸ್ಟಾರ್‌ ನಟರಾಗಿರುವವರು ಯಾರೂ ಏಕಾಏಕಿ ಈ ಯಶಸ್ಸನ್ನು ಕಂಡವರಲ್ಲ. ಹಲವಾರು ಸಂಕಷ್ಟಗಳನ್ನು ಎದುರಿಸಿ, ಸಣ್ಣಪುಟ್ಟ ಕೆಲಸಗಳನ್ನು ಮಾಡಿ, ಚಿಕ್ಕಪುಟ್ಟ ಪಾತ್ರಗಳಿಗಾಗಿ ಅಲೆದಾಡಿ ನಟರಾಗಿರುವ ಹಲವಾರು ಮಂದಿಯಿದ್ದಾರೆ. ದಕ್ಷಿಣಭಾರತದ ಈ ನಟ ಕೂಡಾ ಅಂಥಾ ನಟರಲ್ಲಿ ಒಬ್ಬರು.

ದಕ್ಷಿಣಭಾರತದ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳೋ ಈ ನಟನಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ ನಟನಾಗೋ ಮುನ್ನ ಈ ವ್ಯಕ್ತಿ ಗಾರ್ಮೆಂಟ್ಸ್‌ನಲ್ಲೂ ಕೆಲಸ ಮಾಡಿದ್ದರು. ಈಗ ಖ್ಯಾತ ನಟನಾಗಿದ್ದು, ಚಿತ್ರವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇವರ ಪತ್ನಿ ಸಹ ಹೆಸರಾಂತ ನಟಿ. ಆ ನಟ ಮತ್ಯಾರೂ ಅಲ್ಲ. ತಮಿಳು ನಟ ಸೂರ್ಯ.
 

Tap to resize

ಜುಲೈ 23, 1975ರಂದು ಜನಿಸಿದ ಸರವಣನ್ ಶಿವಕುಮಾರ್ ಸದ್ಯ ಚಿತ್ರರಂಗದಲ್ಲಿ ಪ್ರಮುಖ ನಟರಲ್ಲಿ ಒಬ್ಬರು. ಈಗ ಆ ಹೆಸರಿನ ಬದಲಿಗೆ ಸೂರ್ಯ ಎಂದು ಈ ಖ್ಯಾತ ನಟನನ್ನು ಕರೆಯುತ್ತಾರೆ.  ತಮಿಳು ಸಿನಿಮಾಗಳಲ್ಲಿ ಅಭಿನಯಿಸುವ ಸೂರ್ಯ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. 

ಸೂರ್ಯ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿಗಳ 100 ಮಂದಿಯ ಪಟ್ಟಿಯಲ್ಲಿ ಆರು ಬಾರಿ ಕಾಣಿಸಿಕೊಂಡಿದ್ದಾರೆ.

ಸೂರ್ಯ ತಮಿಳು ಚಿತ್ರರಂಗದ ಖ್ಯಾತ ನಟ ಶಿವಕುಮಾರ್ ಅವರ ಪುತ್ರ. ಸೂರ್ಯ 1997ರಲ್ಲಿ ಮಣಿರತ್ನಂ ಅವರ ಚಲನಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಟನಾಗುವ ಮೊದಲು, ಸೂರ್ಯ ಕೆಲವು ತಿಂಗಳುಗಳ ಕಾಲ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದರು.

ಆದರೆ ಅವರು ತಾನು ಖ್ಯಾತ ನಟನ ಮಗನೆಂಬುದನ್ನು ಯಾರಿಗೂ ತಿಳಿಸಲ್ಲಿಲ್ಲ. ಆದರೆ ಕೊನೆಗೊಂದು ದಿನ ಗಾರ್ಮೆಂಟ್‌ನ ಮಾಲೀಕರಿಗೆ ಈ ವಿಷಯ ತಿಳಿಯಿತು. ಸೂರ್ಯ ಅನಿವಾರ್ಯವಾಗಿ ಕೆಲಸ ಬಿಡಬೇಕಾಯಿತು.

ಸೂರ್ಯ ತನ್ನ 22 ನೇ ವಯಸ್ಸಿನಲ್ಲಿ ನೆರುಕ್ಕು ನೇರ್ (1997) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ನಂತರ 2001ರಲ್ಲಿ 'ನಂದಾದಲ್ಲಿ' ಸಿನಿಮಾದಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದರು. 2003ರಲ್ಲಿ 'ಕಾಖಾ ಕಾಖಾ' ಸಿನಿಮಾ ಅವರ ಮೊದಲ ಪ್ರಮುಖ ವಾಣಿಜ್ಯ ಯಶಸ್ಸಿನ ಸಿನಿಮಾವೆಂದು ಗುರುತಿಸಿಕೊಂಡಿರು. ಮಣಿರತ್ನಂ ಅವರು ಸರವಣನ್ ಎಂಬ ಹೆಸರನ್ನು ಇಷ್ಟಪಡದ ಕಾರಣ ಈ ಹೆಸರನ್ನು ಸೂರ್ಯ ಎಂದು ಬದಲಿಸಲಾಯಿತು

90ರ ದಶಕದಲ್ಲಿ, ಸೂರ್ಯ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ದಕ್ಷಿಣ ಚಿತ್ರರಂಗದ ದೊಡ್ಡ ಸ್ಟಾರ್ ಎಂದು ಕರೆಸಿಕೊಂಡರು. ಸೂರ್ಯ ಅವರ ವೃತ್ತಿಜೀವನದಲ್ಲಿ ಹಲವಾರು ಅದ್ಭುತ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

'ಸಿಂಗಂ' ಸರಣಿಯ ಹೊರತಾಗಿ, 'ಗಜಿನಿ' ಮತ್ತು 'ಆಯುತ ಎಳುತ್ತು' ಮುಂತಾದ ಚಿತ್ರಗಳು ಸೂರ್ಯ ಅವರ ವೃತ್ತಿಜೀವನದಲ್ಲಿ ಮೈಲಿಗಲ್ಲುಗಳೆಂದು ಸಾಬೀತಾಯಿತು. 

ಸೂರ್ಯ ನಟಿ ಜ್ಯೋತಿಕಾ ಅವರನ್ನು ವಿವಾಹವಾದರು.ದಂಪತಿಗಳು ಏಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದಂಪತಿಗಳು ಸೆಪ್ಟೆಂಬರ್ 11, 2006 ರಂದು ವಿವಾಹವಾದರು. ಒಬ್ಬ ಮಗಳು ಮತ್ತು ಮಗನನ್ನು ಹೊಂದಿದ್ದಾರೆ.

Latest Videos

click me!