ಸಲ್ಮಾನ್ ಖಾನ್ ಮದ್ವೆ ಆಗೋವರೆಗೂ ಬರಿಗಾಲಲ್ಲಿ ನಡೆಯುವೆ; ವಿಮಾನದಲ್ಲಿ ಬಂದ ರಾಖಿ ಸಾವಂತ್ ಟ್ರೋಲ್!

First Published Jul 4, 2023, 9:15 AM IST

ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ರಾಖಿ ಸಾವಂತ್. ಬರಿಗಾಲಲ್ಲಿ ವಿಮಾನದಲ್ಲಿ ಬಂದ ನಟಿಗೆ ಅಣ್ಣನ ಮದುವೆನೇ ಚಿಂತೆ..

ಬಾಲಿವುಡ್ ಕಾಂಟ್ರವರ್ಸಿ ಆಂಡ್ ಸೆನ್ಸೇಷನ್ ಕ್ರಿಯೇಟರ್ ರಾಖಿ ಸಾವಂತ್ ಏರ್‌ಪೋರ್ಟ್‌ನಲ್ಲಿ ಮತ್ತೊಂದು ಹೈ ಡ್ರಾಮಾ ಶುರು ಮಾಡಿಕೊಂಡಿದ್ದಾರೆ. 

ನಿಯಾನ್ ಗ್ರೀನ್ ಕ್ರಾಪ್ ಟಾಪ್‌ಗೆ ಬ್ಯೂ ಡೆನಿಮ್ ಪ್ಯಾಂಟ್ ಧರಿಸಿರುವ ರಾಖಿ ಸಾವಂತ್ ಪಿಂಕ್ ಬಣ್ಣದ ಜಾಕೆಟ್‌ನಲ್ಲಿ ಮುಖ ಮುಚ್ಚಿಕೊಂಡು ಬರುತ್ತಿರುತ್ತಾರೆ.

Latest Videos


 ರಾಖಿ ಕ್ಯಾಮೆರಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ಯಾಪರಾಜಿಗಳು ಪ್ರಶ್ನೆ ಮಾಡಿದಾಗ ಇದು ನನ್ನ ಪ್ರಾರ್ಥನೆ ರೀತಿ ಎಂದು ಹೇಳುತ್ತಾರೆ.

ಸಲ್ಮಾನ್ ಖಾನ್ ಮದುವೆ ಮಾಡಿಕೊಳ್ಳುವವರೆಗೂ ನಾನು ಬರಿಗಾಲಿನಲ್ಲಿ ನಡೆಯುವೆ ಇದು ನನ್ನ ಶಪತಾ ಎಂದು ರಾಖಿ ಶಾಕಿಂಗ್ ಹೇಳಿಕೆ ನೀಡುತ್ತಾರೆ. 

ಅಲ್ಲದೆ ರಾಖಿ ಸಾವಂತ್ ಪಕ್ಕ ಏರ್ಪೊರ್ಟ್‌ ಸಿಬ್ಬಂದಿ ಬ್ಯಾಗ್ ಹಿಡಿದುಕೊಂಡು ನಡೆದುಕೊಂಡು ಬರುತ್ತಿರುತ್ತಾರೆ ಅದನ್ನು ನೋಡಿ ಶಾಕ್ ಆಗುತ್ತಾರೆ.

ನೀವು ಯಾಕೆ ನನ್ನ ಪಕ್ಕ ಬರುತ್ತಿರುವುದು ನೀವು ಹೋಗಿ ಎಂದು ಅವರ ಕೈಯಲ್ಲಿದ್ದ ಬ್ಯಾಗ್‌ ತೆಗೆದುಕೊಂಡು ಕಾರ ಹುಡುಕಲು ಮುಂದಾಗುತ್ತಾರೆ. 

ರಾಖಿ ಸಾವಂತ್ ಕಷ್ಟಗಾಲದಲ್ಲಿ ಸಲ್ಮಾನ್ ಖಾನ್ ಸಹಾಯ ಮಾಡಿರುವ ಕಾರಣ ಎಲ್ಲೇ ಹೋದರು ಸಲ್ಲು ನನ್ನ ಅಣ್ಣ ಅವರಿಗೊಂದು ಮದುವೆ ಮಾಡಬೇಕು ಎಂದು ರಾಖಿ ಜಪ ಮಾಡುತ್ತಾರೆ. 

click me!