ಭಾರತದಲ್ಲಿ ರಿಲೀಸ್ ದಿನವೇ ಅತ್ಯಧಿಕ ಹಣ ಗಳಿಕೆ ಸಿನಿಮಾಗಳು ಯಾವುವು? ಬಾಲಿವುಡ್ ಮೀರಿಸಿದ ಕನ್ನಡ ಸಿನಿಮಾ!

First Published | Aug 7, 2024, 7:48 PM IST

ದೇಶದಲ್ಲಿ ಸಿನಿಮಾಗಳು ರಿಲೀಸ್ ಆದ ಒಂದೇ ದಿನದಲ್ಲಿ ಅತ್ಯಧಿಕ ಹಣ ಗಳಿಕೆ ಮಾಡಿದ ಸಿನಿಮಾಗಳು ಯಾವುವು ಗೊತ್ತಾ? ಇದರಲ್ಲಿ ಕನ್ನಡ ಸಿನಿಮಾಗಳಿವೆ, ಆದರೆ ಬಾಲಿವುಡ್‌ನ ಒಂದೂ ಸಿನಿಮಾಗಳಿಲ್ಲ. ದಕ್ಷಿಣ ಭಾರತ ಸಿನಿಮಾಗಳ ಮುಂದೆ ಬಾಲಿವುಡ್ ಮಂಡಿಯೂರಿದೆ. ಅತ್ಯಧಿಕ ಹಣ ಗಳಿಸಿದ ಟಾಪ್ -5 ಸಿನಿಮಾಗಳು ಇಲ್ಲಿವೆ ನೋಡಿ...
 

ತಮಿಳಿನ ತಲಪತಿ ವಿಜಯ್ ಅಭಿನಯದ ಲಿಯೋ ಸಿನಿಮಾವು ಒಂದೇ ದಿನದಲ್ಲಿ 148 ಕೋಟಿ ರೂ. ಹಣ ಗಳಿಕೆ ಮಾಡಿದೆ. ಈ ಮೂಲಕ ಒಂದು ದಿನದಲ್ಲಿ ಅತ್ಯಧಿಕ ಹಣ ಗಳಿಕೆ ಸಿನಿಮಾಗಳಲ್ಲಿ 5ನೇ ಸ್ಥಾನದಲ್ಲಿದೆ. 

ಕನ್ನಡದ ಚಿತ್ರರಂಗದ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಿಲೀಸ್ ಆದ ಒಂದೇ ದಿನದಲ್ಲಿ ಬರೋಬ್ಬರಿ 162 ಕೋಟಿ ರೂ. ಹಣವನ್ನು ಗಳಿಸಿದೆ. ಈ ಮೂಲಕ ಕೆಜಿಎಫ್ ಸಿನಿಮಾ ಒಂದೇ ದಿನದಲ್ಲಿ ಅತ್ಯಧಿಕ ಹಣ ಗಳಿಕೆಯಲ್ಲಿ 4ನೇ ಸ್ಥಾನದಲ್ಲಿದೆ.

Tap to resize

ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಿನಿಮಾ ಸಲಾರ್  (Salaar Movie) ಕೂಡ ರಿಲೀಸ್ ಆದ ಮೊದಲ ದಿನವೇ 165 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಒಂದು ದಿನದ ಗಳಿಕೆಯಲ್ಲಿ 3ನೇ ಸ್ಥಾನದಲ್ಲಿದೆ.

ತೆಲುಗು ನಟ ಪ್ರಭಾಸ್ (Actor Prabhas) ನಟಿಸಿರುವ ಮತ್ತೊಂದು ಸಿನಿಮಾ ಬಾಹುಬಲಿ (Bahubali) ಕೂಡ ಒಂದೇ ದಿನದಲ್ಲಿ 214 ಕೋಟಿ ರೂ. ಹಣವನ್ನು ಗಳಿಸಿದೆ. ಇನ್ನು ಒಂದು ದಿನದಲ್ಲಿ ಅತ್ಯಧಿಕ ಹಣ ಗಳಿಕೆ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿದೆ.

ದಕ್ಷಿಣ ಭಾರತದ ತೆಲುಗು ಸಿನಿಮಾ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ (RRR Movie) ರಿಲೀಸ್ ಆದ ಒಂದೇ ದಿನದಲ್ಲಿ ಬರೋಬ್ಬರು 223 ಕೋಟಿ ರೂ. ಹಣವನ್ನು ಗಳಿಸಿದೆ. ದೇಶದಲ್ಲಿ ಒಂದೇ ದಿನದಲ್ಲಿ ರಿಲೀಸ್ ಆದ ದಿನವೇ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಯನ್ನು ಆರ್‌ಆರ್‌ಆರ್ ಹೊಂದಿದೆ. ಇದರಲ್ಲಿ ತೆಲುಗಿನ ಇಬ್ಬರು ಸ್ಟಾರ್ ನಟರಾದ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಓಪೆನ್ ಸಿನೆಮಾ ಚಾಟ್‌ ಎಂಬ ಪೇಜ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಾಲಿವುಡ್‌ನ ದಂಗಲ್ ಸಿನಿಮಾ ಸೇರಿದಂತೆ ಒಂದು ದಿನದಲ್ಲಿ ಅತ್ಯಧಿಕ ಹಣ ಗಳಿಕೆಯ ಟಾಪ್‌-5 ಸಿನಿಮಾಗಳಲ್ಲಿ ಬಾಲಿವುಡ್‌ನ ಯಾವುದೇ ಸಿನಿಮಾಗಳಿಲ್ಲ ಎಂದು ತಿಳಿಸಿದ್ದಾರೆ. ಮಾಹಿತಿಗಾಗಿ ಲಿಂಕ್ : https://www.instagram.com/reel/C66jE1BPXWv/?igsh=cm9ubGkwcjRzMWgz

Latest Videos

click me!