ದೇವರ ಹಾಡಿನಲ್ಲಿ ಜೂ. ಎನ್‌ಟಿಆರ್ ಧರಿಸಿದ ಸಿಂಪಲ್ ಶರ್ಟ್ ಬೆಲೆ ತುಂಬಾನೇ ಕಡಿಮೆ, ಬೇಕಿದ್ರೆ ನೀವು ಖರೀದಿಸಿ

First Published | Aug 7, 2024, 5:08 PM IST

ದೇವರ ಚಿತ್ರದ ಹಾಡು ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಧರಿಸಿದ್ದ ಶರ್ಟ್ ಬೆಲೆ ಕೇಳಿದ್ರೆ ಆಶ್ವರ್ಯ ಆಗೋದು ಪಕ್ಕಾ!

Devara

ಜೂನಿಯರ್ ಎನ್‌ಟಿಆರ್ ದೇವರ ಸಿನಿಮಾ ಮೂಲಕ ಮತ್ತೊಮ್ಮೆ ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ದೇವರ ಸಿನಿಮ ಮೂಡಿ ಬಂದಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. RRR ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಕಥೆಯುಳ್ಳ ಸಿನಿಮಾಗಳ ಆಫರ್‌ಗಳು ಜೂನಿಯರ್ ಎನ್‌ಟಿಆರ್ ಗೆ ಬರುತ್ತಿವೆಯಂತೆ.

ದೇವರ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕರು ರೊಮ್ಯಾಂಟಿಕ್ ಹಾಡು ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಜಾಹ್ನವಿ ಕಪೂರ್ ಹಾಟ್ ಲುಕ್‌ ಫೋಟೋಗಳು ವೈರಲ್ ಆಗುತ್ತಿವೆ.

Tap to resize

ದೇವರ ಚಿತ್ರದ ಹಾಡು ಯುಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೇ ವ್ಯೂವ್ ಪಡೆದುಕೊಳ್ಳುತ್ತಿದೆ. ಈ ಹಾಡು ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಕಥೆ ಏನಾಗಿರಬಹುದು ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಜಾಹ್ನವಿ ಕಪೂರ್‌ಗೆ ಇದು ಮೊದಲ ತೆಲಗು ಸಿನಿಮಾವಾಗಿದೆ.

ದೇವರ ಚಿತ್ರದ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಧರಿಸಿರುವ ಆ ಸಿಂಪಲ್ ಶರ್ಟ್ ನಿಮ್ಮದಾಗಿಸಿಕೊಳ್ಳಬಹುದು. ತಾರಕ್ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಈ ಶರ್ಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಈ ಶರ್ಟ್ ಬೆಲೆ ಎಷ್ಟು ಗೊತ್ತಾ?

ಆನ್‌ಲೈನ್ ಮೂಲಕ ಈ ಶರ್ಟ್ ನಿಮ್ಮದಾಗಿಸಿಕೊಳ್ಳಬಹುದು. ಜೂನಿಯರ್ ಎನ್‌ಟಿಆರ್ ಧರಿಸಿದ ಮಾದರಿ ಶರ್ಟ್ ಬೆಲೆ ಕೇವಲ 499 ರೂಪಾಯಿ ಆಗಿದೆ. ಇದೀಗ ಈ ಶರ್ಟ್ ಟ್ರೆಂಡ್ ಆಗುತ್ತಿದ್ದು, ಇ-ಕಾಮರ್ಸ್‌ನಲ್ಲಿ ಬೇಡಿಕೆ ಸೃಷ್ಟಿಯಾಗಿದೆ.


ಟ್ರೋಲ್ ಏನೇ ಆದರೂ ಅಭಿಮಾನಿಗಳು ಮಾತ್ರ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಶರ್ಟ್ ಮಾತ್ರವಲ್ಲದೇ ಹೀರೋ ಧರಿಸಿದ ಚೈನ್ ಸಹ ಟ್ರೆಂಡ್ ಆಗುತ್ತಿದೆ. ನೀವೂ ಸಹ ತಾರಕ್ ಅಭಿಮಾನಿಯಾಗಿದ್ರೆ ಆನ್‌ಲೈನ್‌ನಲ್ಲಿ 499 ರೂಪಾಯಿಗೆ ಈ ಶರ್ಟ್ ನಿಮ್ಮದಾಗಿಸಿಕೊಳ್ಳಬಹುದು. 
 

ಟ್ರೋಲ್ ಏನೇ ಆದರೂ ಅಭಿಮಾನಿಗಳು ಮಾತ್ರ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಶರ್ಟ್ ಮಾತ್ರವಲ್ಲದೇ ಹೀರೋ ಧರಿಸಿದ ಚೈನ್ ಸಹ ಟ್ರೆಂಡ್ ಆಗುತ್ತಿದೆ. ನೀವೂ ಸಹ ತಾರಕ್ ಅಭಿಮಾನಿಯಾಗಿದ್ರೆ ಆನ್‌ಲೈನ್‌ನಲ್ಲಿ 499 ರೂಪಾಯಿಗೆ ಈ ಶರ್ಟ್ ನಿಮ್ಮದಾಗಿಸಿಕೊಳ್ಳಬಹುದು.

Latest Videos

click me!