ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ನಟಿ ಆಸಿನ್ ಚಿತ್ರರಂಗದಿಂದ ಮರೆಯಾಗಿದ್ದೇಕೆ?

First Published May 22, 2024, 5:35 PM IST

ಬಾಲಿವುಡ್, ಕಾಲಿವುಡ್‌ಗಳಲ್ಲಿ ಜನಪ್ರಿಯತೆಯ ಗ್ರಾಫ್ ಏರಿಸಿಕೊಳ್ಳುತ್ತಲೇ ಹೋಗಿದ್ದ ಸುಂದರ ನಟಿ ಆಸಿನ್ ತೊಟ್ಟುಂಕಲ್ ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಕಣ್ಮರೆಯಾದರು. ಇಷ್ಟಕ್ಕೂ ಈ ಗಜಿನಿ ಚೆಲುವೆ ಹೋಗಿದ್ದೆಲ್ಲಿಗೆ?

ಗಜಿನಿಯ ಚೆಲುವೆ ನಟಿ ಆಸಿನ್ ತಮಿಳು ಚಿತ್ರರಂಗಕ್ಕೆ 15ನೇ ವಯಸ್ಸಲ್ಲೇ ಪಾದಾರ್ಪಣೆ ಮಾಡಿ, ಬಹು ಬೇಗ ಸ್ಟಾರ್ ಆಗಿ ಬಾಲಿವುಡ್‌ಗೆ ಹಾರಿ ಅಲ್ಲಿಯೂ ಬೇಗನೆ ಬೇಡಿಕೆಯ ನಟಿಯಾದವರು. 

18ನೇ ವಯಸ್ಸಿನಲ್ಲಿ ಎರಡನೇ ಚಲನಚಿತ್ರ ಅಮ್ಮಾ ನನ್ನ ಓ ತಮಿಳ ಅಮ್ಮಾಯಿ ಮೂಲಕ ಯಶಸ್ಸಿನ ರುಚಿ ನೋಡಲು ಶುರು ಮಾಡಿದವರು ಆಸಿನ್. 

asin

ಅವರ ಮುಂದಿನ ಚಿತ್ರ ಗಜಿನಿ ಗೆಲುವಿನ ರುಚಿ ತೋರಿ ದಕ್ಷಿಣದಲ್ಲಿ ಹೆಸರು ತಂದುಕೊಟ್ಟಿತು. ನಂತರ ಶಿವಕಾಶಿ, ವರಲಾರು, ಪೊಕ್ಕಿರಿ, ವೇಲ್ ಮತ್ತು ದಶಾವತಾರಂ ಚಿತ್ರಗಳಲ್ಲಿ ಉತ್ತಮ ಪಾತ್ರ ನಿರ್ವಹಿಸಿದರು. 

ಬಾಲಿವುಡ್‌ನಲ್ಲಿ ಘಜಿನಿಯಂತೂ ಬ್ಲಾಕ್‌ಬಸ್ಟರ್. ಬಾಲಿವುಡ್‌ನಲ್ಲೂ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.

ಸಲ್ಮಾನ್ ಖಾನ್ ಜೊತೆಗಿನ ಅವರ ಮುಂದಿನ ಚಿತ್ರ, ರೆಡಿ ಕೂಡಾ ಗೆದ್ದಿತು. ಹೌಸ್‌ಫುಲ್ 2 ಮತ್ತು ಖಿಲಾಡಿ 786 ರಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡರು, ಅದು ವಾಣಿಜ್ಯಿಕ ಯಶಸ್ಸನ್ನು ಕಂಡಿತು. 

ಇಷ್ಟೆಲ್ಲ ಯಶಸ್ಸಿನ ಮೇಲೆ ಯಶಸ್ಸಿನ ರುಚಿ ನೋಡುತ್ತಿದ್ದರೂ ನಟಿ ಮದುವೆಯ ನಿರ್ಧಾರ ತೆಗೆದುಕೊಂಡು ಅದಕ್ಕಾಗಿ ನಟನಾ ವೃತ್ತಿಯಿಂದಲೇ ದೂರವಾದರು. 

ಇಷ್ಟಕ್ಕೂ ನಟಿ ಇಂಥ ಯಶಸ್ಸಿನ ನಡುವೆ ವಿವಾಹವಾಗಲು ತನಗೆ ಬಂದಿದ್ದ ಪ್ರಪೋಸಲ್ 1300 ಕೋಟಿ ರೂ. ಒಡೆಯ ರಾಹುಲ್ ಶರ್ಮಾನದು ಕಾರಣ ಎಂಬ ಮಾತುಗಳಿವೆ. ಹಣಕ್ಕಾಗಿ ಯಶಸ್ಸು ಮತ್ತು ಹೆಸರನ್ನು ಬಿಟ್ಟು ಕೊಟ್ಟರು ಎನ್ನಲಾಗುತ್ತದೆ. 

ಉದ್ಯಮಿ ರಾಹುಲ್ ಶರ್ಮಾ ಮೈಕ್ರೋಮ್ಯಾಕ್ಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ ಮತ್ತು ರೂ 1300 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. 
 

ಗ್ಲಾಮರ್ ಪ್ರಪಂಚದಿಂದ ದೂರವಿದ್ದರೂ, ಅಸಿನ್ ಸಂತೋಷದ, ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಸುಂದರವಾದ 6 ವರ್ಷದ ಮಗಳು ಆರಿನ್‌ಗೆ ತಾಯಿಯಾಗಿದ್ದಾರೆ. 

ಈ ನಡುವೆ ಆಸಿನ್ ಪತಿಯಿಂದ ದೂರವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿವೆ. ಇದಕ್ಕೆ ಕಾರಣ ಅವರು ಇನ್ಸ್ಟಾಗ್ರಾಂನಿಂದ ಪತಿಯ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿರುವುದು. ಆದರೆ ನಟಿ ಈ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ. 

Latest Videos

click me!