ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

First Published | May 22, 2024, 5:20 PM IST

ಬೆಂಗಳೂರು (ಮೇ 22): ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‌ ಹೌಸ್‌ನಲ್ಲಿ ಭಾನುವಾರ ತಡರಾತ್ರಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಇಂಡಸ್ಟ್ರಿಯ ಮತ್ತೊಬ್ಬ ಯುವ ನಟಿ ಆಶಿ ರಾಯ್ ಸಿಕ್ಕಿಬಿದ್ದಿದ್ದಾರೆ.  ಆದರೆ, ಪೊಲೀಸರು ರಕ್ತದ ಮಾದರಿ ಸಂಗ್ರಹಿಸಿಕೊಂಡಿರುವ ಬೆನ್ನಲ್ಲಿಯೇ ಭಯಗೊಂಡಿರುವ ನಟಿ ನಾನು ಚಿಕ್ಕವಳು ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಆಶಿ ರಾಯ್, ನಾನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದೆನು. ನಾನು ಅಣ್ಣ ಎಂದು ಕರೆಯುತ್ತಿದ್ದ ವ್ಯಕ್ತಿಯ ಬರ್ತಡೇ ಪಾರ್ಟಿ ಅದಾಗಿತ್ತು.

ಬೆಂಗಳೂರು ಪಾರ್ಟಿಯ ಒಳಗೆ ಏನೇನು ನಡೆದಿದೆ ಎಂಬುದೇ ಗೊತ್ತಿಲ್ಲ. ಆದರೆ, ಅಲ್ಲಿನ ಪೊಲೀಸರು ನಮ್ಮನ್ನು ಕೂಡಿಹಾಕಿ ನನ್ನ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನನಗೆ ಭಯವಾಗಿದೆ.

Tap to resize

ನಾನಿನ್ನೂ ಸಿನಿಮಾ ಕ್ಷೇತ್ರದಲ್ಲಿ ಚಿಕ್ಕ ಹುಡುಗಿ. ನಾನು ಕಷ್ಟ ಪಟ್ಟು ಈಗತಾನೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಬೆಳೆಯುತ್ತಿದ್ದೇನೆ. ಈ ಪ್ರಕರಣದಲ್ಲಿ ನೀವೆಲ್ಲರೂ ನನ್ನ ಸಹಾಯಕ್ಕೆ ಬರಬೇಕು ಎಂದು ನಟಿ ಆಶಿ ರಾಯ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

ಬೆಂಗಳೂರಿನ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ 'ಸನ್ ಸೆಟ್ ಟು ಸನ್ ರೈಸ್' ಎಂಬ ಥೀಮ್ ಅಡಿಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆದರೆ, ಈ ಪಾರ್ಟಿಯ ಮೇಲೆ ದಾಳಿ ಮಾಡಿಸ ಬೆಂಗಳೂರು ಸಿಸಿಬಿ ಪೊಲೀಸರಿಗೆ ಮಾದಕ ವಸ್ತುಗಳ ಜೊತೆಗೆ ತೆಲುಗಿನ ಮಾದಕ ನಟ ನಟಿಯರು, ಮಾಡೆಲ್, ಟೆಕ್ಕಿಗಳು ಸಿಕ್ಕಿಬಿದ್ದಿದ್ದರು.

ಆಂಧ್ರಪ್ರದೇಶ ಹಾಗೂ ಬೆಂಗಳೂರು ಸೇರಿದಂತೆ 100ಕ್ಕೂ ಹೆಚ್ಚು ಜನರಿದ್ದು, ಅದರಲ್ಲಿ 25ಕ್ಕೂ ಹೆಚ್ಚು ಯುವತಿಯರು ಸೇರಿದ್ದರು. ಆ ಯುವತಿಯರಲ್ಲಿ ತೆಲುಗು ನಟಿ ಆಶಿ ರಾಯ್ ಕೂಡ ಸಿಕ್ಕಿಬಿದ್ದಿದ್ದಾರೆ. ಆದರೆ, ಆಶಿ ರಾಯ್ ಮುಖ ಚಹರೆ ಹಾಗೂ ನಟಿ ಎಂಬುದನ್ನು ಪೊಲೀಸರು ಗುರುತಿಸದೇ ಅವರ ಹೆಸರನ್ನು ಮಾಧ್ಯಮಗಳ ಮುಂದೆ ಹೇಳಿರಲಿಲ್ಲ.

ಬೆಂಗಳೂರು ರೇವ್ ಪಾರ್ಟಿಯಲ್ಲಿ ಭಾಗಿಯಾದ ಎಲ್ಲರೂ ಗಾಂಜಾ, ಡ್ರಗ್ಸ್ ಸೇವನೆ ಮಾಡಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ 101 ಜನರ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಿ, ಪರೀಕ್ಷೆಗೆ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿ ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್, ಗಾಂಜಾ ಪಾರ್ಟಿಯಲ್ಲಿ ಭಾಗಿಯಾಗಿ ಮಾದಕ ವಸ್ತುಗಳ ಸೇವನೆ ಮಾಡಿದವರಿಗೆ ಈಗ ಆತಂಕ ಶುರುವಾಗಿದೆ. ತಮ್ಮನ್ನು ಪೊಲೀಸರು ಎಲ್ಲಿ ಬಂಧಿಸಿ ಜೈಲಿಗಟ್ಟುತ್ತಾರೆ ಎಂಬ ಆತಂಕದಿಂದ ರಕ್ತದ ಮಾದರಿ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಇನ್ನು ಬೆಂಗಳೂರು ರೇವ್ ಪಾರ್ಟಯಲ್ಲಿ ತೆಲುಗು ಹಿರಿಯ ಪೋಷಕ ನಟಿ ಹೇಮಾ ಕೂಡ ಭಾಗವಹಿಸಿದ್ದರು. ಆದರೆ, ನಟಿ ಹೇಮಾ ಮಾಧ್ಯಮಗಳ ದಿಕ್ಕು ತಪ್ಪಿಸಲು ತಾವು ಫಾರ್ಮ್‌ಹೌಸ್‌ನಲ್ಲಿ ಪೊಲೀಸರ ವಶದಲ್ಲಿದ್ದುಕೊಂಡೇ ಹೈದರಾಬಾದಿನ ಫಾರ್ಮ್‌ಹೌಸ್‌ನಲ್ಲಿದ್ದೇನೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು.

ತೆಲುಗಿನ ಕೆ-100 ಹಾಗೂ ಮಿಸ್ಟರಿ ಆಫ್ ಸಾರಿಕಾ (Mystery Of Sarika) ಸಿನಿಮಾದಲ್ಲಿ ನಟಿಸಿದ ನಟಿ ಆಶಿ ರಾಯ್ ಕೂಡ ಬೆಂಗಳೂರು ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಬ್ಲಡ್ ಸ್ಯಾಂಪಲ್ ಪರೀಕ್ಷೆ ಫಲಿತಾಂಶ ಏನಾಗುತ್ತದೆ ಎಂಬ ಆತಂಕದಿಂದ ಕಾಲ ಕಳೆಯುತ್ತಿದ್ದು ಅಭಿಮಾನಿಗಳ ಸಹಾಯ ಕೇಳಿದ್ದಾರೆ.

Latest Videos

click me!