ಅಕ್ಷಯ್ ನನ್ನ ಬಳಸಿ ಬಿಟ್ಟು ಹಾಕಿದ ಎಂದಿದ್ದ ಶಿಲ್ಪಾ ಶೆಟ್ಟಿ; ಬಾಲಿವುಡ್‌ನ ಈ ಲವ್ ಬರ್ಡ್ಸ್ ಬ್ರೇಕಪ್ ಆಗಿದ್ದು ಏಕೆ?

Published : May 07, 2024, 06:15 PM IST

ಬಾಲಿವುಡ್‌ನ ಇಬ್ಬರು ಖ್ಯಾತ ನಟ ನಟಿ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಲವ್ ಸ್ಟೋರಿ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಮೈಲೇಜ್ ಪಡೆಯುತ್ತಿತ್ತು.. ಆದರೆ, ಇವರು ಬ್ರೇಕಪ್ ಆಗಿದ್ದು ಏತಕ್ಕಾಗಿ?

PREV
111
ಅಕ್ಷಯ್ ನನ್ನ ಬಳಸಿ ಬಿಟ್ಟು ಹಾಕಿದ ಎಂದಿದ್ದ ಶಿಲ್ಪಾ ಶೆಟ್ಟಿ; ಬಾಲಿವುಡ್‌ನ ಈ ಲವ್ ಬರ್ಡ್ಸ್ ಬ್ರೇಕಪ್ ಆಗಿದ್ದು ಏಕೆ?

ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಈಗ ಮದುವೆಯಾಗಿ ಸುಖವಾಗಿದ್ದಾರೆ. ಕಳೆದ 24 ವರ್ಷಗಳಿಂದ, ಅವರು ಟ್ವಿಂಕಲ್ ಖನ್ನಾ ಜೊತೆ ಸುಖಸಂಸಾರ ನಡೆಸುತ್ತಿದ್ದಾರೆ ಮತ್ತು ಅವರಿಗೆ ಆರವ್, ನಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. 
 

211

ಆದರೆ ಅಕ್ಷಯ್ ಕುಮಾರ್ ಒಂದು ಕಾಲದಲ್ಲಿ ಬಾಲಿವುಡ್‌ನ ಪ್ಲೇ ಬಾಯ್. ಅವರ ಹೆಸರು ರೇಖಾ ಅವರಿಂದ ಹಿಡಿದು ರವೀನಾ ಟಂಡನ್ ‌ವರೆಗೆ ಹಲವಾರು ಮಹಿಳೆಯರ ಜೊತೆ ಕೇಳಿ ಬರುತ್ತಿತ್ತು. ಅವರ ಎಲ್ಲಾ ಲಿಂಕ್-ಅಪ್‌ಗಳು ಪಟ್ಟಣದ ಬಿಸಿ ಚರ್ಚೆಯಾಗಿದ್ದವು.

311

90ರ ದಶಕದಲ್ಲಿ ಅವರ ಎರಡು ಆಘಾತಕಾರಿ ಲಿಂಕ್-ಅಪ್‌ಗಳೆಂದರೆ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜೊತೆಗಿನವು. ಮೇನ್ ಕಿಲಾಡಿ ತು ಅನಾರಿ ಚಿತ್ರದ ತಯಾರಿಕೆಯ ಸಮಯದಲ್ಲಿ ಶಿಲ್ಪಾ ಮತ್ತು ಅಕ್ಷಯ್ ನಡುವಿನ ಪ್ರೀತಿ ಅರಳಿತು, ನಂತರ ಅದು ತುಂಬಾ ಕಹಿಯಾಗಿ ಕೊನೆಗೊಂಡಿತು. 

411

2000 ರಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಮಾಡಿದ ದ್ರೋಹ ಮತ್ತು ಬ್ರೇಕಪ್ ಬಗ್ಗೆ ಹೇಳಿದ ಬಳಿಕ ಅವರ ಸಂಬಂಧ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತು.

511

ಶಿಲ್ಪಾ ಪ್ರಕಾರ, ಅಕ್ಷಯ್ ತನ್ನೊಂದಿಗೆ ಪ್ರೀತಿ ಪ್ರಣಯದಾಟ ಆಡುವಾಗಲೇ ತನ್ನ ಆತ್ಮೀಯ ಸ್ನೇಹಿತೆ ಟ್ವಿಂಕಲ್ ಖನ್ನಾ ಜೊತೆಗೂ ಅದೇ ಸಲುಗೆಯಲ್ಲಿದ್ದುದೇ ಬ್ರೇಕಪ್‌ಗೆ ಕಾರಣ.

611

ಅಕ್ಷಯ್ ಮೋಸ ಮಾಡಿದ
ಸಂದರ್ಶನದ ಸಮಯದಲ್ಲಿ, ಶಿಲ್ಪಾ ಶೆಟ್ಟಿ, 'ಅವನು ನಮ್ಮ ಸಂಬಂಧದುದ್ದಕ್ಕೂ  ಟ್ವಿಂಕಲ್ ಜೊತೆಗೂ ಪ್ರೀತಿಯಾಟ ಆಡಿದ್ದ' ಎಂದಿದ್ದರು. ಜೊತೆಗೆ, ಈ ವಿಷಯವಾಗಿ ಟ್ವಿಂಕಲ್ ವಿರುದ್ಧ ಆಕೆಗೆ ಯಾವುದೇ ದ್ವೇಷವಿಲ್ಲ ಎಂದೂ ಹೇಳಿದ್ದರು.
 

711

'ಇಲ್ಲ, ನಾನು ಅವಳೊಂದಿಗೆ ಅಸಮಾಧಾನ ಹೊಂದಿಲ್ಲ. ನಾನು ಪ್ರೀತಿಸುವ ವ್ಯಕ್ತಿ ನನಗೆ ಮೋಸ ಮಾಡುತ್ತಿದ್ದರೆ ಅವಳ ತಪ್ಪೇನು? ಬೇರೆ ಯಾವುದೇ ಮಹಿಳೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ, ಅದು ಸಂಪೂರ್ಣವಾಗಿ ಅವನ ತಪ್ಪು' ಎಂದು ಶಿಲ್ಪಾ ಹೇಳಿದ್ದರು. 

811

ಆ ಸಮಯಗಳ ಬಗ್ಗೆ ಮಾತನಾಡಿದ ಶಿಲ್ಪಾ, 'ವೈಯಕ್ತಿಕವಾಗಿ ಇದು ಒರಟಾದ ಅವಧಿಯಾಗಿದೆ. ಆದರೆ ಅಗ್ನಿಪರೀಕ್ಷೆಯು ಮುಗಿದಿದೆ ಎಂದು ನನಗೆ ಖುಷಿಯಾಗಿದೆ. ಪ್ರತಿ ಕಪ್ಪು ಮೋಡದ ನಂತರ, ಯಾವಾಗಲೂ ಬೆಳ್ಳಿಯ ರೇಖೆ ಇರುತ್ತದೆ' ಎಂದಿದ್ದರು. 

911

'ಇದುವರೆಗೂ ವೃತ್ತಿಪರವಾಗಿ ನಾನು ಗೆಲುವು ಕಂಡರೂ ನನ್ನ ವೈಯಕ್ತಿಕ ಜೀವನವು ನನ್ನನ್ನು ಕೆಳಕ್ಕೆ ಎಳೆಯುತ್ತಿತ್ತು. ಇನ್ನು ಅದು ಮುಗಿಯಿತು' ಎಂದು ನಿಟ್ಟುಸಿರಿಟ್ಟಿದ್ದರು ಶಿಲ್ಪಾ. 

1011

ನನ್ನನ್ನು ಬಳಸಿಕೊಂಡ
'ಅಕ್ಷಯ್ ನನ್ನನ್ನು ಬಳಸಿಕೊಂಡ ಮತ್ತು ಇನ್ನೊಬ್ಬಳು ಸಿಗುತ್ತಿದ್ದಂತೆ ಕೈಬಿಟ್ಟ. ನಾನು ಅಸಮಾಧಾನಗೊಂಡ ಏಕೈಕ ವ್ಯಕ್ತಿ ಅವನೇ. ಆದರೆ ಅವನು ಎಲ್ಲವನ್ನೂ ಮರಳಿ ಪಡೆಯುತ್ತಾನೆ ಎಂದು ನನಗೆ ಖಾತ್ರಿಯಿದೆ. ನನ್ನ ಮಟ್ಟಿಗೆ ಅವನು ಮರೆತುಹೋದ ಅಧ್ಯಾಯ. ನಾನು ಅವನೊಂದಿಗೆ ಮತ್ತೆ ಕೆಲಸ ಮಾಡುವುದಿಲ್ಲ' ಎಂದು ಶಿಲ್ಪಾ ಹೇಳಿದಾಗ ಬಾಲಿವುಡ್ ಬೆರಗಾಗಿತ್ತು. 

1111

ಈ ಎಲ್ಲ ಸಮಯದಲ್ಲೂ ಅಕ್ಷಯ್ ಈ ಆರೋಪಗಳನ್ನು ನಿರಾಕರಿಸಿ, ಶಿಲ್ಪಾ ಸಣ್ಣ ವಿಷಯವನ್ನು ದೊಡ್ಡ ಹಗರಣ ಮಾಡಬಾರದು ಎಂದಿದ್ದರು. 

ಅಂದಹಾಗೆ, ಅಕ್ಷಯ್ ಮತ್ತು ಶಿಲ್ಪಾ ಅವರ ಬ್ರೇಕಪ್ ಆ ದಿನಗಳಲ್ಲಿ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಸುತ್ತು ಹಾಕಿತ್ತು. ಈಗ ಇಬ್ಬರೂ ಬೇರೆಯವರ ಜೊತೆ ವಿವಾಹವಾಗಿ ಸಂತೋಷದಿಂದಿದ್ದಾರೆ.  
 

Read more Photos on
click me!

Recommended Stories