ನಿಕ್ ಕಾರಣದಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕತ್ರಿನಾ-ವಿಕ್ಕಿ!

First Published | Sep 18, 2021, 1:23 PM IST

ಕತ್ರಿನಾ ಕೈಫ್, ವಿಕ್ಕಿ ಕೌಶಲ್  ಡೇಟಿಂಗ್‌ ಮಾಡುತ್ತಿರುವ ವರದಿಗಳು ಬಹಳ ಸಮುಯದಿಂದ ಹರಿದಾಡುತ್ತಿವೆ. ಇಬ್ಬರೂ ಇದರ ಬಗ್ಗೆ ಬಾಯಿ ಬಿಟ್ಟಿಲ್ಲವಾದರೂ ಈಗಾಗಲೇ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ, ಎಂದು ವರದಿಗಳು ಹೇಳುತ್ತಿವೆ. ಈ ವದಂತಿಗಳಿಗೆಲ್ಲಾ ಮೂಲ ಕಾರಣ ಇವರು ಜೊತೆಯಾಗಿಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಮತ್ತು ಇದಕ್ಕೆ ಪ್ಯಾನ್ಸ್‌ ನಿಕ್‌ ಜೊನಾಸ್‌ ಅವರಿಗೆ ಥ್ಯಾಂಕ್ಸ್‌ ಹೇಳಬೇಕು. ಇಲ್ಲಿದೆ ವಿವರ.  

ಬಾಲಿವುಡ್‌ನ ನಟಿ ಪ್ರಿಯಾಂಕಾ ಚೋಪ್ರಾ ಪತಿ ಹಾಗೂ ಅಮೆರಿಕದ ಪಾಪ್‌ ಸಿಂಗರ್‌ ನಿಕ್ ಜೊನಾಸ್ 29ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಅವರ ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆ ಲಾಸ್ ಏಂಜಲೀಸ್‌ನಲ್ಲಿ ಪತಿ ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿದರು.

ಕಳೆದ ಕೆಲವು ವಾರಗಳಿಂದ, ಪ್ರಿಯಾಂಕಾ ಚೋಪ್ರಾ ತಮ್ಮ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಹಾಗೂ ಬಹಳ ಸಮಯದಿಂದ ಪತಿಯಿಂದ ದೂರವಿದ್ದಾರೆ. ನಂತರ ಅವರು ಅಮೆರಿಕಕ್ಕೆ ಹೋಗಿ ನಿಕ್‌ಗೆ ಸರ್‌ಪ್ರೈಸ್‌ ನೀಡಲು ನಿರ್ಧರಿಸಿದರು. 

Tap to resize

ನಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾಗಾಗಿ ಸುಂದರವಾದ ಮೇಸೆಜ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. 'ನನ್ನ ಹುಟ್ಟುಹಬ್ಬಕ್ಕೆ ಅವಳು ನನ್ನನ್ನು ಸರ್‌ಪ್ರೈಸ್‌ ಮಾಡಿದಳು. ಅವಳು ಬೆಸ್ಟ್‌. ಎಲ್ಲರ ಪ್ರೀತಿಗೆ #29 ಧನ್ಯವಾದಗಳು,' ಎಂದು ನಿಕ್ ಪೋಟೋ ಜೊತೆ ಬರೆದಿದ್ದಾರೆ.  

ಕೆಲವು ವರ್ಷಗಳ ಹಿಂದೆ, ಭಾರತದ ಆಳಿಯ ನಿಕ್ ಜೊನಾಸ್‌ ಪ್ರಿಯಾಂಕಾ ಮತ್ತು ಆಕೆಯ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೋಳಿ ಆಚರಿಸಲು ಮುಂಬೈನಲ್ಲಿದ್ದರು. ಮುಂಬೈನಲ್ಲಿ ಇಶಾ ಅಂಬಾನಿ ಹೋಳಿ ಪಾರ್ಟಿಗೆ ಪಿಸಿ ದಂಪತಿಯನ್ನು ಆಹ್ವಾನಿಸಲಾಗಿತ್ತು. ಬಾಲಿವುಡ್‌ನ ಅನೇಕ ನಟರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. 

2019 ರಲ್ಲಿ, ಇಶಾ ಅಂಬಾನಿಯ ಹೋಳಿ ಪಾರ್ಟಿಯಲ್ಲಿ, ಪಾಪ್ ಸಿಂಗರ್ ನಿಕ್ ಜೊನಾಸ್ ಆಕಸ್ಮಿಕವಾಗಿ ರೂಮರ್ಡ್‌ ಲವ್‌ ಬರ್ಡ್ಸ್‌ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿಡಿಯೋವನ್ನು ಸೆರೆ ಹಿಡಿದಿದ್ದರು. ನಂತರ ಅದು ವೈರಲ್ ಆಗಿತ್ತು. ಇದರಲ್ಲಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
 

ಪಾರ್ಟಿಯಿಂದ ಸಖತ್‌ ಖುಷಿಯಾದ ನಿಕ್ ಜೋನಸ್ ಅವರು ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಪಾರ್ಟಿಯಿಂದ ಕೆಲವು ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ಅವರ ಮೊದಲ ಹೋಳಿ ಆಚರಣೆ.
 
 

ನಿಕ್ ಪ್ರಿಯಾಂಕಾ ಜೊತೆಗಿನ ಒಂದು ಫೋಟೋವನ್ನು ಹಂಚಿಕೊಂಡರು. ಎರಡನೇ  ಫೋಟೋ ಪ್ರಿಯಾಂಕಾ ಮತ್ತು ಕತ್ರಿನಾ ಕೈಫ್ ಜೊತೆಗಿನ ಸೆಲ್ಫಿ ಹಾಗೂ ಮೂರನೆಯದು ನಿಕ್ ಜೋನಾಸ್ ಕಲರ್‌ಫುಲ್‌ ಹೋಳಿ ಸೆಲೆಬ್ರೇಷನ್‌ ಅನ್ನು ಸೆರೆಹಿಡಿದ ವಿಡಿಯೋ ಆಗಿತ್ತು.
 

ವೀಡಿಯೊದಲ್ಲಿ, ಅಭಿಮಾನಿಗಳ ಕಣ್ಣಿಗೆ ಸಕತ್‌ ಇಂಟರೆಸ್ಟಿಂಗ್‌ ವಿಷಯವೊಂದು ಬಿದ್ದಿತ್ತು. ಅದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಒಟ್ಟಿಗೆ ಹೋಳಿ ಆಡುತ್ತಿರುವ ದೃಶ್ಯ. ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಯಿತು. ಆ ಸಮಯದಲ್ಲೇ ಕತ್ರಿನಾ ಮತ್ತು ವಿಕ್ಕಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುವುದು ಜಗತ್ತಿಗೆ ಬಹಿರಂಗೊಳ್ಳುವಂತಾಯಿತು.

ಕತ್ರಿನಾ ಮತ್ತು ವಿಕಿ ಅವರ ಡೇಟಿಂಗ್ ವದಂತಿಗಳು ಬಹಳ ಸಮಯದಿಂದಲೂ ಹರಿದಾಡುತ್ತಲೇ ಇವೆ. ಅನೇಕ ವರದಿಗಳು ಇಬ್ಬರೂ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ ಹಾಗೂ ಈ ವರ್ಷದ ಕೊನೆಯಲ್ಲಿ ಮದುವೆ ಸಹ ಆಗಲಿದ್ದಾರೆ ಎಂದು ಹೇಳುತ್ತವೆ. ಆದರೆ ಈ ಬಗ್ಗೆ ಈ ಜೋಡಿಯಿಂದ ಯಾವುದೇ ಅಧಿಕೃತ ಆನೌನ್ಸ್‌ಮೆಂಟ್‌ ಹೊರಬಂದಿಲ್ಲ.  

ಕತ್ರಿನಾ ಕೈಫ್ ಸದ್ಯ ಆಸ್ಟ್ರಿಯಾದಲ್ಲಿ ಸಲ್ಮಾನ್ ಖಾನ್ ಜೊತೆ ಟೈಗರ್ 3 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅವರು ಬಹಳ ಸಮಯದಿಂದ ಬಿಡುಗಡೆಯಾಗಲು ಬಾಕಿ ಉಳಿದಿರುವ ರೋಹಿತ್ ಶೆಟ್ಟಿ ಸಿನಿಮಾ ಆ್ಯಕ್ಷಯ್‌ ಕುಮಾರ್‌ ಜೊತೆ ನಟಿಸಿರುವ ಸೂರ್ಯವಂಶಿಗಾಗಿ ಕಾಯುತ್ತಿದ್ದಾರೆ,  'ಫೋನ್ ಭೂತ್' ಮತ್ತು ವಿಜಯ್ ದೇವರಕೊಂಡ ಜೊತೆ ಇನ್ನೂ ಹೆಸರಿಡದ ಒಂದು ಫಿಲ್ಮ್‌ ಕತ್ರೀನಾ ಕೈಯಲ್ಲಿವೆ.

Latest Videos

click me!