ರಶ್ಮಿಕಾ ಹಿಂದಿಕ್ಕಿದ ಪೂಜಾ ಹೆಗ್ಡೆ... ಕಿರಿಕ್ ಬೆಡಗಿಗೆ ಬೇಡಿಕೆ ಕಡಿಮೆ ಆಯ್ತಾ?

First Published | Sep 17, 2021, 8:26 PM IST

ಹೈದರಾಬಾದ್(ಸೆ. 17)   ಕನ್ನಡ ಚಿತ್ರರಂಗದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರೂ ರಶ್ಮಿಕಾ ಮಂದಣ್ಣ ಪಕ್ಕದ ಟಾಲಿವುಡ್ ನಲ್ಲಿ ದೊಡ್ಡ  ಹೆಸರು ಸಂಪಾದನೆ ಮಾಡಿಕೊಂಡವರು. ಸಂಭಾವನೆಯಲ್ಲೂ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಎಂಬ ಮಾತು ಇತ್ತು. ಆದರೆ ಈಗ ಪೂಜಾ ಹೆಗ್ಡೆ ರಶ್ಮಿಕಾರನ್ನು ಹಿಂದಿಕ್ಕಿದ್ದಾರೆ. ಏನ್ ಕತೆ ಅಂತೀರಾ? ಪೂರ್ಣ ಕೇಳಿ..

ಟಾಲಿವುಡ್ ನಲ್ಲಿ ರಶ್ಮಿಕಾ ಮತ್ತು ಪೂಜಾ ಬೇಡಿಕೆ ನಟಿಯರು.  ಯಾರನ್ನು ಹಾಕಿಕೊಂಡರೆ ಸಿನಿಮಾ ಓಡುತ್ತದೆ ಎನ್ನುವ ಗೊಂದಲ ನಿರ್ಮಾಪಕ-ನಿರ್ದೇಶಕರದ್ದು.

ಪವನ್ ಕಲ್ಯಾಣ್ ಅಭಿನಯದ ಮುಂದಿನ ಸಿನಿಮಾ ಭವಧಿಯಡು ಭಗತ್ ಸಿಂಗ್ ಗೆ ಹರೀಶ್ ಶಂಕರ್  ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಪೂಜಾ-ರಶ್ಮಿಕಾ ಯಾರನ್ನು ಆಯ್ಕೆ ಮಾಡೋಣ ಎಂಬ ಪ್ರಶ್ನೆ ಎದುರಾಗಿತ್ತು.

Tap to resize

ಅಳೆದು ತೂಗಿದ ಚಿತ್ರತಂಡ ಕೊನೆಗೆ ಪೂಜಾ ಅವರನ್ನು ಆಯ್ಕೆ ಮಾಡಿಕೊಂಡಿದೆ.  ಹಾಗಾಗಿ ಒಂದು ಅರ್ಥದಲ್ಲಿ ಇದು ರಶ್ಮಿಕಾ ಅವರಿಗೆ ಹಿನ್ನಡೆ ಎಂದೇ ಹೇಳಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಬಳಿ ರಶ್ಮಿಕಾ ಅವರ ಡೇಟ್ಸ್ ಸಹ ಇತ್ತು.  ಆದರೆ ಹರೀಶ್ ಶಂಕರ್  ರಶ್ಮಿಕಾ ಬದಲಿಗೆ ಪೂಜಾ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. 

ನಿಧಾನವಾಗಿ ರಶ್ಮಿಕಾಗೆ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.  ಒಟ್ಟಿನಲ್ಲಿ ರಶ್ಮಿಕಾಗೆ ಇದ್ದ ಅವಕಾಶ ಪೂಜಾ ಪಾಲಾಗಿದೆ ಎನ್ನಲಾಗಿದೆ.

ರಶ್ಮಿಕಾ ತೆಲುಗಿನಲ್ಲಿ 'ಪುಷ್ಪ' ಮತ್ತು 'ಆದವಾಳು ನಿಮಗೆ ಜೋಹಾರ್ಲು', 'ಮಿಷನ್ ಮಜ್ನು' ಮತ್ತು ಹಿಂದಿಯಲ್ಲಿ 'ಗುಡ್ ಬೈ ' ಸಿನಿಮಾದಲ್ಲಿ  ರಶ್ಮಿಕಾ ಬ್ಯುಸಿ ಇದ್ದಾರೆ.

Latest Videos

click me!