ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹಾರ್2017ರಲ್ಲಿ ಬಾಡಿಗ ತಾಯಿ ಮೂಲಕಅವಳಿ ಮಕ್ಕಳು ರೂಹಿ ಹಾಗೂ ಯಶ್‌ನ ತಂದೆಯಾದ್ರು.
ಈ ಮುದ್ದು ಮಕ್ಕಳನ್ನು ನೋಡ್ಕೊಳೋದು ಯಾರು ಗೊತ್ತಾ..?
ಸಾಮಾನ್ಯವಾಗಿ ಎಲ್ಲ ಬಾಲವುಡ್ ಸಾರ್ಸ್ ಮಕ್ಕಳನ್ನು ನೋಡಿಕೊಳ್ಳುವ ಕೇರಳದ ದಾದಿಯರು.
ಕರಣ್ ಮಕ್ಕಳನ್ನು ನೋಡಿಕೊಳ್ಳೋ ನರ್ಸ್‌ಗಳೂ ಕೇರಳದವರೇ.
ಕೇರಳದ 4 ಜನ ನುರಿತ ನರ್ಸ್‌ಗಳು ಕರಣ್ ಮಕ್ಕಳ ಆರೈಕೆ ಮಾಡುತ್ತಾರೆ.
ತಂದೆಯಾಗಿ ತನ್ನದೇ ಅನುಭವಗಳನ್ನು ದಾಖಲಿಸಿದ ಒಂದು ಪುಸ್ತಕವನ್ನು ಕರಣ್ ಬರೆದಿದ್ದಾರೆ.
ಬಿಗ್ ಥಾಟ್ಸ್ ಆಫ್ ಲಿಟಲ್ ಲವ್ ಎಂಬ ಪುಸ್ತಕದಲ್ಲಿ ಕರಣ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಿಂಗಲ್ ಪೇರೆಂಟ್ಸ್ ಎದುರಿಸೋ ಸವಾಲುಗಳ ಬಗ್ಗೆಯೂ ಇದರಲ್ಲಿ ಹೇಳಿದ್ದಾರೆ.
ನಾಲ್ಕು ಜನ ಕೇರಳದ ದಾದಿಯರ ಮಧ್ಯೆ ಮಕ್ಕಳು ಮಲಯಾಳೀಸ್ ಆಗ್ತಾರೇನೋಂತ ಹೆದರಿದ್ರಂತೆ ಕರಣ್.
ಮಕ್ಕಳು ಮಾತಾಡೋ ಮೊದಲ ಪದವೂ ಮಲಯಾಳಂ ಆಗಿರುತ್ತೆ ಎಂದು ಹೆದರಿದ್ರಂತೆ.
ಅದಕ್ಕಾಗಿ ಮಕ್ಕಳ ಕಿವಿಯಲ್ಲಿ ಪಪ್ಪಾ ಎಂದು ಕೂಗಿ ಹೇಳುತ್ತಿದ್ದರಂತೆ