ಸಲ್ಮಾನ್‌ನಿಂದ ಶಾರುಖ್ ಮಗನವರೆಗೆ ಚಂಕಿ ಪಾಂಡೆ ಬರ್ತ್‌ಡೇ ಪಾರ್ಟಿಯಲ್ಲಿ ಸ್ಟಾರ್‌ಗಳು
First Published | Sep 25, 2022, 4:07 PM ISTಬಾಲಿವುಡ್ ನಟ ಚಂಕಿ ಪಾಂಡೆ (Chunky Panday) ಸೆಪ್ಟೆಂಬರ್ 26 ರಂದು 60 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದಕ್ಕೂ ಮುನ್ನ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1962 ರಲ್ಲಿ ಮುಂಬೈನಲ್ಲಿ ಜನಿಸಿದ ಚಂಕಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರವೂ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಅವರು ಬಹುತೇಕ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ, ಚಂಕಿ ಬಾಲಿವುಡ್ ಜೊತೆಗೆ ದಕ್ಷಿಣ ಮತ್ತು ಇತರ ಭಾಷೆಗಳ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಪಾರ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಸೋನಾಲಿ ಬೇಂದ್ರೆ, ಅನನ್ಯ ಪಾಂಡೆ, ನವ್ಯಾ ನವೇಲಿ ನಂದಾ ಯಶ್ ಬಿರ್ಲಾ ಕಾಣಿಸಿಕೊಂಡರು. ಚಂಕಿ ಪಾಂಡೆ ಪಾರ್ಟಿಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳು ಸಖತ್ ವೈರಲ್ ಆಗಿವೆ.