ಅನುಷ್ಕಾ ಶರ್ಮಾ ಮತ್ತು ಶಾಹಿದ್ ಕಪೂರ್ ಬದ್ಮಾಶ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅಭಿಮಾನಿಗಳು ಚಿತ್ರದಲ್ಲಿ ಅನುಷ್ಕಾ ಮತ್ತು ಶಾಹಿದ್ ಅವರ ಕೆಮಿಸ್ಟ್ರಿಯನ್ನು ಇಷ್ಟಪಟ್ಟರು.
ಒಂದು ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಅವರ ಕೆಲಸದ ಬಗ್ಗೆ ಶಾಹಿದ್ ಕಪೂರ್ ಮಾಡಿದ ಕಾಮೆಂಟ್ ಕೋಪಗೊಂಡ ನಟಿ ಶಾಹಿದ್‌ಗೆ ಶಟಪ್ ಎಂದು ಹೇಳಿದ್ದರು. ಈ ಸಂದರ್ಶನ ಈಗ ಮತ್ತೆ ವೈರಲ್ ಆಗುತ್ತಿದೆ.
ಟೈಮ್ಸ್ ನೌ ವರದಿ ಪ್ರಕಾರ, ಸಂದರ್ಶನದಲ್ಲಿ ಶಾಹಿದ್ ಕಪೂರ್ ಅವರನ್ನು ಹೊಸ ನಟರೊಂದಿಗೆ ಕೆಲಸ ಮಾಡುವ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲಾಯಿತು.
'ನೀವು ಹೊಸ ನಟರೊಂದಿಗೆ ಕೆಲಸ ಮಾಡುವಾಗ ಅದು ತುಂಬಾ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವರು ಜೋನ್‌ಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಶಾಹಿದ್ ಹೇಳಿದ್ದರು. ಈ ಸಂಭಾಷಣೆಗೆ ಅಡ್ಡಿಪಡಿಸಿದ ಅವರ ಪಕ್ಕದಲ್ಲಿ ಕುಳಿತಿದ್ದ ಅನುಷ್ಕಾ,'ಅವರು' ಯಾರು, ನಿರ್ದಿಷ್ಟವಾಗಿ ಹೇಳು' ಎಂದು ಹೇಳಿದರು.
ಅದಕ್ಕೆ ಶಾಹಿದ್, 'ನೀನು ಏನು 50 ಸಿನಿಮಾ ಮಾಡಿದ್ದೀಯಾ?' ಎಂದು ಕೇಳಿದ್ದರು. 'ನೀನು ಯಾಕೆ ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಬರುತ್ತಿಯಾ? ನಾನು ಚಾಂಗ್ ಜೊತೆ ಚೆನ್ನಾಗಿ ಮಾತನಾಡುತ್ತಿ,ದ್ದೆ ನಿನ್ನ ಜೊತೆ ಅಲ್ಲ,' ಎಂದು ಎಂದು ಶಾಹಿದ್ ಅನುಷ್ಕಾರಿಗೆ ಹೇಳಿದರು.
ನಂತರ ಇಬ್ಬರೂ ಮಾತಿಗೆ ಮಾತು ಬೆಳೆಸಿದರು. ಶಾಹಿದ್ ಹೀಗೆ ಹೇಳಿದ ಕೂಡಲೇ, ಸಂಭಾಷಣೆಯ ಉದ್ದಕ್ಕೂ ಶಾಂತವಾಗಿರಲು ಪ್ರಯತ್ನಿಸಿದ ಅನುಷ್ಕಾ, ತಮ್ಮ ತಾಳ್ಮೆ ಕಳೆದುಕೊಂಡು, ಶಾಹಿದ್ ಕಪೂರ್‌ಗೆ ಶಟಪ್ ಎಂದು ಹೇಳಿದರು.