ಪ್ರಿಯಾಂಕಾ ಚೋಪ್ರಾರ ತಂದೆ ಪಾತ್ರ ಮಾಡಲು ಇಷ್ಟವಿರಲಿಲ್ಲವಂತೆ ಅನಿಲ್‌ಕಪೂರ್‌ಗೆ!

First Published | Jan 23, 2021, 4:34 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟ ಅನಿಲ್ ಕಪೂರ್ ಇಂದಿಗೂ ಸಿನಿಮಾದಲ್ಲಿ ಲೀಡ್‌ ರೋಲ್‌ ಮಾಡುವ ಹಾಗಿದ್ದಾರೆ. ಆದರೆ ದಿಲ್ ಧಡಕ್‌ನೆ ದೋ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾರ ತಂದೆ ಪಾತ್ರವನ್ನು ನಿರ್ವಹಿಸಲು ಆಫರ್‌ ಮಾಡಿದಾಗ ಮೊದಲಿಗೆ ಹಿಂದೇಟು ಹಾಕಿದ್ದರಂತೆ ಅನಿಲ್‌. ಪಿಸಿಯ ತಂದೆಯಾಗಲು ನಟ ಅನುಮಾನ ವ್ಯಕ್ತಪಡಿಸಿದ್ದರು. ಇಲ್ಲಿದೆ ವಿವರ. 

ದಿಲ್ ಧಡಕ್‌ನೆ ದೋ ಸಿನಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಂದೆಯ ಪಾತ್ರದಲ್ಲಿ ಅನಿಲ್ ಕಪೂರ್ ಹಿಂಜರಿಯುತ್ತಿದ್ದರು ಎಂಬುದು ತಿಳಿದಿದೆಯೇ?
ಅನಿಲ್ ಕಪೂರ್ ದಿಲ್ ಧಡಕ್‌ನೆ ದೋ ಸಿನಮಾದಲ್ಲಿ ಪ್ರಿಯಾಂಕರ ಶ್ರೀಮಂತ ಪಂಜಾಬಿ ತಂದೆಯಾಗಿ ನಟಿಸಿದ್ದಾರೆ. ಪಂಜಾಬಿ ಕುಟುಂಬದ ಮುಖ್ಯಸ್ಥ ನಟನಿಗೆ ಶೆಫಾಲಿ ಷಾ ಹೆಂಡತಿಯಾಗಿಕಾಣಿಸಿಕೊಂಡಿದ್ದಾರೆ.
Tap to resize

ಈ ಚಿತ್ರದಲ್ಲಿ ಪ್ರಿಯಾಂಕಾ ಅವರ ತಂದೆಯಾಗಿ ನಟಿಸುವ ಮೊದಲು ಅವರು ಗೊಂದಲದಲ್ಲಿದ್ದರು.
ಏಕೆಂದರೆ ಈ ಮೊದಲು ಅವರು ಪರಸ್ಪರ ತೆರೆಮೇಲೆ ರೋಮ್ಯಾನ್ಸ್‌ ಮಾಡಲು ಆಫರ್‌ ಮಾಡಿದ್ದರು ಎಂದು ಟಿಫಿನ್ ಟಾಕ್ಸ್‌ ಜೊತೆಮಾತುಕತೆಯಲ್ಲಿ ಒಮ್ಮೆ ಅನಿಲ್ ಕಪೂರ್ ಹೇಳಿ ಕೊಂಡಿದ್ದರು.
'ನಾನು ಪ್ರಿಯಾಂಕಾ ಚೋಪ್ರಾರ ತಂದೆನಾ! ನಾವು ಪರಸ್ಪರ ರೋಮ್ಯಾಂಟಿಕ್ ಆಗಿರುವ ಸಿನಿಮಾ ಮಾಡಬೇಕಿತ್ತು ಎಂದು ಪಾತ್ರ ಒಪ್ಪಿಕೊಳ್ಳಲು ಹಿಂಜರಿಯುತ್ತಿದೆ. ನಂತರ ನೀವು ನಿಜವಾಗಿ ಅವಳ ತಂದೆಯಲ್ಲ, ನೀವು ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದೀರಿ ಎಂದು ಹರ್ಷ್‌ ಹೇಳಿದ,' ಎಂದು ಅನಿಲ್‌ ಕಪೂರ್‌ ಹೇಳಿದರು.
'ಕೆಲವೊಮ್ಮೆಯೋಚನೆಗಳನ್ನುಮುಂದೆ ಇಡಲು ಮತ್ತು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಜನರು ಬೇಕಾಗುತ್ತಾರೆ,' ಎಂದು ಅವರು ಹೇಳಿದರು.
'ಈಗ ವಿಷಯಗಳು ಬದಲಾಗಿವೆ.ನಾನು ಅವಳ ತಂದೆಯ ಪಾತ್ರ ಮಾಡುತ್ತಿದ್ದೆ.ನಿಜವಾಗಿ ಅವಳ ತಂದೆಯಲ್ಲ,' ಎಂದು ಮತ್ತಷ್ಟು ಹೇಳಿದ ಮಿಸ್ಟರ್‌ ಇಂಡಿಯಾ ನಟ.
'ಇದು ಸಾಕಷ್ಟು ಇಂಟರೆಸ್ಟಿಂಗ್‌ ಫಿಲ್ಮಂ ಮತ್ತು ಒಟ್ಟಾರೆಯಾಗಿ ಅದ್ಭುತ ಪಾತ್ರವಾಗಿತ್ತು,' ಎಂದು ಸಿನಿಮಾದ ಅನುಭವ ಹಂಚಿಕೊಂಡರು.

Latest Videos

click me!