ಹೆಂಡತಿ ಟ್ವಿಂಕಲ್‌ ಬರ್ಥ್‌ ಡೇ ಮರೆತ್ತಿದ್ದ ಅಕ್ಷಯ್‌, ನೆನಪಾದಾಗ ಬೆಲೆ ತೆತ್ತಿದ್ದೇನು?

Suvarna News   | Asianet News
Published : Jul 09, 2020, 06:46 PM ISTUpdated : Jul 09, 2020, 07:33 PM IST

ಬಾಲಿವುಡ್‌ನ ಕಪಲ್‌ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದೊಡ್ಡ ಫ್ಯಾನ್‌ ಕ್ಲಬ್‌ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಈ ಜೋಡಿ ಆಗಾಗ ಗಮನ ಸೆಳೆಯುತ್ತಿರುತ್ತದೆ. ಇವರಿಬ್ಬರ ಜೋಡಿ ಹಲವರಿಗೆ ಸೂರ್ತಿಯಾಗಿರುವುದು ನಿಜ. ಟಿಂಕ್ವಲ್‌ ಹಾಗೂ ಅಕ್ಷಯ್‌ ಜೀವನದ ಘಟನೆಯೊಂದು ವೈರಲ್ ಆಗುತ್ತಿದೆ. ಒಮ್ಮೆ ಹೆಂಡತಿ  ಬರ್ಥ್‌ ಡೇ ಮರೆತ್ತಿದ್ದರಂತೆ ಅಕ್ಷಯ್‌. ನಂತರ ನೆನಪಾದಾಗ ಕೊಟ್ಟ ಗಿಫ್ಟ್‌ ಏನು ಗೊತ್ತಾ?

PREV
112
ಹೆಂಡತಿ ಟ್ವಿಂಕಲ್‌ ಬರ್ಥ್‌ ಡೇ ಮರೆತ್ತಿದ್ದ ಅಕ್ಷಯ್‌, ನೆನಪಾದಾಗ ಬೆಲೆ ತೆತ್ತಿದ್ದೇನು?

ಅಕ್ಷಯ್ ಮತ್ತು ಟ್ವಿಂಕಲ್ ಇಂಡಸ್ಟ್ರಿಯ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಂದು. ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ.

212

ಈ ದಿನಗಳಲ್ಲಿ ದಂಪತಿಯ ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಟ್ವಿಂಕಲ್ ಅಕ್ಷಯ್‌ ಜೀವನದ ಘಟನೆಯೊಂದನ್ನು ಮೆಲಕು ಹಾಕಿದ್ದಾರೆ.

312

ತನ್ನ ಜನ್ಮದಿನದಂದು ಅಕ್ಷಯ್ ಯಾವ ಉಡುಗೊರೆಯನ್ನು ನೀಡಿದ್ದಾನೆ ಎಂದು ಟ್ವಿಂಕಲ್ ಹೇಳಿದರು. ವಾಸ್ತವವಾಗಿ, ಅಕ್ಷಯ್ ಒಮ್ಮೆ ಹೆಂಡತಿಯ ಬರ್ಥ್‌ಡೇಗೆ ಪೇಪರ್‌ ವೇಯ್ಟ್‌ ಗಿಫ್ಟ್‌ ನೀಡಿದ್ದಾಗಿ ಹೇಳಿದ್ದಾರೆ! 

412

ಈ ಕಥೆಯನ್ನು ಕರಣ್ ಜೋಹರ್ ಚಾಟ್ ಶೋನಲ್ಲಿ ಟ್ವಿಂಕಲ್ ಹಂಚಿಕೊಂಡಿದ್ದಾರೆ.

512

'ನಾವು ಮೊದಲು ಡೇಟಿಂಗ್ ಮಾಡುವಾಗ ನನ್ನ ಜನ್ಮದಿನದಂದು, ಅಕ್ಷಯ್ ನನಗೆ ಕ್ರಿಸ್ಟಲ್‌ ಪೇಪರ್‌ ವೇಯ್ಟ್‌ ಗಿಫ್ಟ್‌ ನೀಡಿದ್ದ. ನಾನು ಪೇಪರ್‌ ವೇಯಟ್‌ನಿಂದ ಇಂಪ್ರೆಸ್‌ ಆಗುತ್ತೇನೆ ಎಂದು ಅವನು ಹೇಗೆ ಯೋಚಿಸಿದ ಎಂಬುದು ನಂಗೆ ಗೊತ್ತಿಲ್ಲ,' ಎಂದರು ಟ್ವಿಂಕಲ್‌. ಇದನ್ನು ಕೇಳಿದ ಕರಣ್ ಕೂಡ ಆಶ್ಚರ್ಯಪಟ್ಟರು.

612

ಏಕೆ ಹಾಗೆ ಮಾಡಿದರು ಎಂಬುದನ್ನು ಸ್ವತಹ ಅಕ್ಷಯ್ ವಿವರಿಸಿದರು. ಟ್ವಿಂಕಲ್ ಜನ್ಮದಿನವನ್ನು ಮರೆತಿದ್ದರಂತೆ, ಆತಂಕದಲ್ಲಿ ಏನನ್ನೂ ಯೋಚಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಉಡುಗೊರೆಯಾಗಿ ಪೇಪರ್‌ ವೇಯ್ಟ್‌ ನೀಡಿದರಂತೆ ಪ್ಯಾಡ್‌ಮ್ಯಾನ್‌.

712

'ಪ್ರಾಮಾಣಿಕವಾಗಿ ನಾನು ಅವಳ ಜನ್ಮದಿನವನ್ನು ಮರೆತಿದ್ದೆ. ನಾನು ನೆನಪಿಸಿಕೊಂಡಾಗ.... ಗಿಫ್ಟ್‌ ಖರೀದಿಸಲು ನನಗೆ ಸಮಯವಿಲ್ಲ. ನನ್ನ ಮನೆಯಲ್ಲಿದ್ದ ಪೇಪರ್‌ ವೇಯ್ಟ್‌, ಬೇಗ wrap ಮಾಡಿ ಉಡುಗೊರೆಯಾಗಿ ನೀಡಿದೆ' ಎಂದರು ಬಾಲಿವುಡ್‌ನ ಸ್ಟಾರ್‌ ನಟ ಅಕ್ಷಯ್‌ಕುಮಾರ್‌.

812

'ಅವನು ನನಗೆ ಪೇಪರ್‌ ವೇಯ್ಟ್ ಉಡುಗೊರೆಯಾಗಿ ನೀಡಿದನು, ನಂತರ ನಾನು ಅವನಿಗೆ ಹೇಳಿದೆ, ಒಂದು ದಿನ ಇದರ ತೂಕಕ್ಕಿಂತ ದೊಡ್ಡದಾದ ವಜ್ರವನ್ನು ನೀನು ನನಗೆ ಖರೀದಿಸುತ್ತೀಯಾ,' ಎಂದು  ಟ್ವಿಂಕಲ್ ಹೇಳಿದ್ದರು.

912

 ಅಕ್ಷಯ್‌ರ ಚಿತ್ರ ಲಕ್ಷ್ಮಿ ಬಾಂಬ್ ಆಗಸ್ಟ್ 15 ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಮನರಂಜನಾ ಪೋರ್ಟಲ್ ವರದಿಯ ಪ್ರಕಾರ, ಚಿತ್ರದ ವಿಶೇಷ ಪ್ರೀಮಿಯರ್ ಹಕ್ಕುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್ ಖರೀದಿಸಿದೆ. 

1012

ಸೌತ್‌ನ ಸಿನಿಮಾ ಮುನಿ 2: ಕಾಂಚನ ಚಿತ್ರದ ಹಿಂದಿ ರಿಮೇಕ್ ಆಗಿದೆ ಲಕ್ಷ್ಮಿ ಬಾಂಬ್. ಅಕ್ಷಯ್-ಕಿಯಾರಾ ಜೊತೆಗೆ ತುಷಾರ್ ಕಪೂರ್, ತರುಣ್ ಅರೋರಾ, ಶರದ್ ಕೇಲ್ಕರ್, ಅಶ್ವಿನಿ ಕಲ್ಸೇಕರ್ ಮುಖ್ಯ ಪಾತ್ರದಲ್ಲಿದ್ದಾರೆ. 

1112

ಇದಲ್ಲದೆ ಸೂರ್ಯವಂಶಿ, ಬೈಲ್ ಬಾಟಮ್, ಅಟ್ರಂಗಿ ರೇ, ಬಚ್ಚನ್ ಪಾಂಡೆ ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿ ಕೊಳ್ಳಲಿದ್ದಾರೆ ಅಕ್ಷಯ್‌ ಕುಮಾರ್‌.

1212

ಅಕ್ಷಯ್ ಕುಮಾರ್ ಮಗಳು ನಿತಾರಾ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಅವರೊಂದಿಗೆ.

click me!

Recommended Stories