ಕ್ಯಾಮೆರಾ ಕಾಣುತ್ತಲೇ ಮಾಜಿ ಪತ್ನಿ ಭುಜದ ಮೇಲೆ ಕೈ ಹಾಕಿದ ಅಮೀರ್: ಡಿವೋರ್ಸ್ ನಂತ್ರ ಕಿರಣ್ ಸ್ಥಿತಿ ಹೇಗಿದೆ ನೋಡಿ

First Published | Sep 28, 2021, 12:47 PM IST

ಬಾಲಿವುಡ್‌ ನಟ ಆಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್  (Kiran Rao)ತಮ್ಮ 15 ವರ್ಷಗಳ ದಾಪಂತ್ಯ ಮುಕ್ತಾಯಗೊಳಿದ್ದಾರೆ. ಈ ಕಪಲ್‌  ಜುಲೈನಲ್ಲಿ  ತಮ್ಮ ಡಿವೋರ್ಸ್‌ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ವಿಚ್ಛೇದನದ ನಂತರ, ಬಹುಶಃ ಇಬ್ಬರೂ ಹತ್ತಿರವಾಗಿದ್ದಾರೆ ಎಂದು ಕಾಣುತ್ತಿದೆ.  ಇದಕ್ಕೆ ಕಾರಣ  ಹೊರಹೊಮ್ಮಿರುವ ಕೆಲವು ಫೋಟೋಗಳಾಗಿವೆ. ಬೇರೆಯಾದ ನಂತರ ಹೆಚ್ಚು ಈ ಮಾಜಿ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಕಿರಣ್ ರಾವ್ ಅವರನ್ನು ಫೋಟೋಗಳಲ್ಲಿ ಗುರುತಿಸುವುದು ಕಷ್ಟವಾಗುತ್ತಿದೆ. ಪತಿಯಿಂದ ವಿಚ್ಛೇದನ ಪಡೆದ ನಂತರ ಕಿರಣ್‌ ಅವರ ಲುಕ್‌ ತುಂಬಾ ಬದಲಾಗಿದೆ.
 

ಇತ್ತೀಚೆಗೆ ಆಮೀರ್ ಖಾನ್‌ ಮತ್ತ ಕಿರಣ್ ರಾವ್‌  ಮಗ ಆಜಾದ್ ಜೊತೆ ಡಿನ್ನರ್‌ ಡೇಟ್‌ನಲ್ಲಿ ಕಾಣಿಸಿಕೊಂಡರು. ಆ ಸಮಯದ ಆ ಮೀರ್ ಖಾನ್,ಕಿರಣ್ ರಾವ್ ಮತ್ತು ಮಗ ಆಜಾದ್ ಅವರ ಫೋಟೋಗಳು ವೈರಲ್‌ ಆಗಿವೆ.

ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ವಿಚ್ಛೇದನದ ನಂತರ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಆಮೀರ್ ಖಾನ್ ಮತ್ತು ಕಿರಣ್ ರಾವ್ ಭಾನುವಾರ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡರು. ಮಾಜಿ ದಂಪತಿಯ ಜೊತೆಗೆ ಅವರ  9 ವರ್ಷದ ಮಗ ಆಜಾದ್ ಸಹ ಇದ್ದನು. 

ನಟ ಸಿದ್ಧಾರ್ಥ್‌ಗೆ ಲಂಡನ್‌ನಲ್ಲಿ ನಡೆಯಲ್ಲಿ ಸಣ್ಣ ಸರ್ಜರಿ!

Tap to resize

ಈ ಸಮಯದಲ್ಲಿ, ಅವರು ಕ್ಯಾಮರಾಮನ್‌ಗೆ ಪೋಸ್ ನೀಡಿದರು. ಅಮೀರ್ ಮತ್ತು ಕಿರಣ್ ಇಬ್ಬರೂ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಕೊರೋನಾ ಕಾಣ ಮಾಸ್ಕ್‌ ಸಹ ಧರಿಸಿದ್ದರು. ಅವರ ಜೊತೆ ಕೆಲವು ಸಂಬಂಧಿಗಳೂ ಇದ್ದರು.

ಛಾಯಾಗ್ರಾಹಕರನ್ನು ನೋಡಿದ ಆಮೀರ್ ಖಾನ್, ಮಾಜಿ ಪತ್ನಿ ಕಿರಣ್ ರಾವ್ ಅವರ ಭುಜದ ಮೇಲೆ ಕೈ ಹಾಕಿ ಪೋಸ್‌ ನೀಡಿದ್ದಾರೆ.  ಕಿರಣ್ ರಾವ್ ಅವರ ಬಹುತೇಕ ಕೂದಲು ಈಗ ಬಿಳಿಯಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅವಳು ಕೂಡ ಮೊದಲಿಗಿಂತ ತೆಳ್ಳಗೆ ಕಾಣುತ್ತಿದ್ದರು.

ಆಮೀರ್-ಕಿರಣ್ ತಮ್ಮ ವಿಚ್ಛೇದನವನ್ನು ಘೋಷಿಸಿದಾಗ, ಅವರು ಲಡಾಖ್‌ನಲ್ಲಿ ಲಾಲಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣದಲ್ಲಿದ್ದರು. ಆದಾಗ್ಯೂ, ವಿಚ್ಛೇದನದ ನಂತರವೂ, ಶೂಟಿಂಗ್ ಸೆಟ್ ನಲ್ಲಿ ಇಬ್ಬರೂ ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿದ್ದರು. 

ಇದು ಮಾತ್ರವಲ್ಲ, ಈ ಸಮಯದಲ್ಲಿ ಲಡಾಖ್‌ನ ಸ್ಥಳೀಯ ಕಲಾವಿದರೊಂದಿಗೆ ಸಾಂಪ್ರದಾಯಿಕ ಉಡುಗೆ ಧರಿಸಿ ನೃತ್ಯ ಮಾಡುತ್ತಿರುವುದು ಕೊಂಡು ಬಂದಿತು. ಅವರಿಬ್ಬರ ವೀಡಿಯೊ ಕೂಡ ಬಹಳ ವೈರಲ್ ಆಗಿತ್ತು. ಅದರ ನಂತರ ಈ ಮಾಜಿ ಕಪಲ್‌ ಮಗನ ಜೊತೆ ಟೇಬಲ್‌ ಟೆನ್ನಿಸ್‌ ಆಡುತ್ತಿರುವ ಪೋಟೋಗಳು ಸಹ ಸಾಕಷ್ಟು ಸದ್ದು ಮಾಡಿದ್ದವು. 

ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಪ್ರಮುಖ ನಟಿ ಮತ್ತು ಚಿತ್ರದ ನಿರ್ದೇಶಕ ಅದ್ವೈತ್ ಚಂದನ್. ಈ ಚಿತ್ರವು 1994 ರ ಟಾಮ್ ಹ್ಯಾಂಕ್ಸ್ ಚಲನಚಿತ್ರ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದೆ. 

ಲಾಲ್‌ಸಿಂಗ್ ಚಡ್ಡಾವನ್ನು ಆಮೀರ್ ಖಾನ್, ಕಿರಣ್ ರಾವ್ ಮತ್ತು ವಯಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ.  ಇತ್ತೀಚೆಗೆ, ಆಮೀರ್ ಖಾನ್ ಕರೀನಾ ಕಪೂರ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಮುಂಬೈನ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು.

Latest Videos

click me!