ಪೋರ್ನ್ ವಿಡಿಯೋ ದಂಧೆಗೆ ಕುಂದ್ರಾನ ಎಳೆದಿದ್ದೇ ನಟಿ ಶೆರ್ಲಿನ್..! ಮತ್ತೊಂದು ಟ್ವಿಸ್ಟ್

First Published | Sep 28, 2021, 10:10 AM IST
  • ರಾಜ್‌ ಕುಂದ್ರಾನನ್ನು ದಂಧೆಗೆ ಎಳೆದ ಮಾದಕ ನಟಿ
  • ಶೆರ್ಲಿನ್ ಚೋಪ್ರಾ ವಿರುದ್ಧ ಈಗ ಗಂಭೀರ ಆರೋಪ
  • ಪೋರ್ನ್ ವಿಡಿಯೋದಲ್ಲಿ ರಾಜ್ ಕುಂದ್ರಾ ತೊಡಗಿದ್ದೇ ಈಕೆಯಿಂದ

ಪೋರ್ನ್ ವಿಡಿಯೋ ದಂಧೆಯಿಂದ ರಾಜ್ ಕುಂದ್ರಾ ಹೇಗೋ ಹೊರಗೆ ಬಂದಿದ್ದಾರೆ. ರಾಜ್ ಕುಂದ್ರಾ(Raj kundra) ಜೊತೆಗೆ ಶೆರ್ಲಿನ್ ಚೋಪ್ರಾ ಹಾಗೂ ಗೆಹನಾ ವಸಿಷ್ಠ(Gehana Vasisth) ಹೆಸರೂ ಕೇಳಿ ಬಂದಿದೆ. ಈಗ ಗೆಹನಾ ಕೊಟ್ಟಿರೋ ಹೇಳಿಕೆಯೊಂದು ವೈರಲ್ ಆಗಿದೆ.

ಇತ್ತೀಚಿನ ಚಾಟ್ ನಲ್ಲಿ ಗೆಹನ ವಸಿಷ್ಠ ಮತ್ತೊಮ್ಮೆ ರಾಜ್ ಕುಂದ್ರಾ ಅವರ ರಕ್ಷಣೆಗೆ ಬಂದಿದ್ದಾರೆ. ಅಡಲ್ಟ್ ಪೋರ್ನ್ ದಂಧೆ ಪ್ರಕರಣದ ಮಧ್ಯದಲ್ಲಿದ್ದ ಗೆಹಾನಾ, ಶೆರ್ಲಿನ್ ಚೋಪ್ರಾ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿ ಸುಮ್ಮನೆ ಕೆಸರೆರಚುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದೆಲ್ಲವೂ ಬರೀ ಸುದ್ದಿ ಮಾಡೋಕಷ್ಟೇ ಎಂದು ಹೇಳಿದ್ದಾರೆ.

Tap to resize

ಶೆರ್ಲಿನ್ ಈ ಹಿಂದೆ ರಾಜ್ ಕುಂದ್ರಾ ಅರೆಸ್ಟ್ ಆದಾಗ ಅವರ ವಿರುದ್ಧ ಭಾರೀ ಅರೋಪಗಳನ್ನು ಮಾಡಿದ್ದರು. ರಾಜ್ ತನ್ನ ಮನೆಗೆ ಬಲವಂತವಾಗಿ ಬಂದು ಚುಂಬಿಸಿದ್ದಾಗಿ ಹೇಳಿದ್ದರು. ಇದೆಲ್ಲವೂ ಘಟನೆಯನ್ನು ಇನ್ನಷ್ಟು ಸುದ್ದಿಯಾಗುವಂತೆ ಮಾಡಿತ್ತು.

ಅವಳಿಗೆ ಬೇರೆ ಏನೂ ಕೆಲಸ ಇಲ್ಲ. ತನ್ನನ್ನು ಸುದ್ದಿಯಲ್ಲಿಡಲು ಮಾತ್ರ ಇದನ್ನು ಮಾಡುತ್ತಿದ್ದಾಳೆ. ಸುದ್ದಿಯಲ್ಲಿರುವುದಕ್ಕಾಗಿಯೇ ಸುಮ್ಮಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಶೆರ್ಲಿನ್ ವೈಯಕ್ತಿಕವಾಗಿ ಶಿಲ್ಪಾ ಶೆಟ್ಟಿಯವರ ವಿರುದ್ಧ ಆರೋಪಿಸುತ್ತಿದ್ದಾರೆ. ತನ್ನ ಕಂಟೆಂಟ್‌ಗಾಗಿ ಅಭಿವೃದ್ಧಿಪಡಿಸಲಾದ ಆರ್ಮ್ಸ್‌ಪ್ರೈಮ್ ಆಪ್ ಮೂಲಕ ಹಣ ಸಂಪಾದಿಸಲು ಸಾಧ್ಯವಾಗಿದ್ದಕ್ಕಾಗಿ ಶೆರ್ಲಿನ್ ವಾಸ್ತವವಾಗಿ ಕುಂದ್ರಾಗೆ ಕೃತಜ್ಞರಾಗಿರಬೇಕು ಎಂದು ಗೆಹಾನಾ ಹೇಳಿದ್ದಾರೆ.

ಅವಳು ರಾಜ್ ಕುಂದ್ರನಿಗೆ ಕೃತಜ್ಞಳಾಗಿರಬೇಕು. ವಾಸ್ತವವಾಗಿ ಶೆರ್ಲಿನ್ ರಾಜ್ ಕುಂದ್ರಾಳನ್ನು ಪೋರ್ನ್ ಕಂಟೆಂಟ್‌ಗೆ ಎಳೆದುತಂದಿದ್ದಾಳೆ. 2012 ರಿಂದ ಅವರು ರಾಜ್ ಅವರನ್ನು ಭೇಟಿಯಾಗಿದ್ದು ಕೇವಲ ಎರಡೂವರೆ ವರ್ಷಗಳ ಹಿಂದೆ ಎಂದಿದ್ದಾರೆ.

ಕುಂದ್ರಾಗೆ ಪೋರ್ನ್ ಐಡಿಯಾ ಕೊಟ್ಟಿದ್ದೇ ಈ 'ಬಿಚ್ಚಮ್ಮ' ನಟಿ ಬಿಚ್ಚಿಟ್ಟ ನಗ್ನ ಸತ್ಯ!

ಆಕೆಗೆ ತಿಳಿದಿರುವುದು ಸ್ಟ್ರಿಪ್ ಮಾಡುವುದು. ರಾಜ್ ಕುಂದ್ರಾ ವಿರುದ್ಧ ಮಾತನಾಡಿದರೆ ಮಾತ್ರ ಅವಳು ಗಮನ ಸೆಳೆಯುತ್ತಾಳೆ ಎಂದು ಅವಳು ತಿಳಿದಿದ್ದಾಳೆ. ಅದನ್ನೇ ಅವಳು ಮಾಡುತ್ತಿದ್ದಾಳೆ. ರಾಜ್ ಕುಂದ್ರಾ ಜೈಲಿನಿಂದ ಹೊರಬಂದ ನಂತರ ಮತ್ತು ತನ್ನನ್ನು ಜನರು ಮರೆತುಬಿಟ್ಟರು ಎಂದು ಭಾವಿಸಿ ಶಿಲ್ಪಾ ಶೆಟ್ಟಿಯ ವಿರುದ್ಧ ಮಾತನಾಡುತ್ತಿದ್ದಾರೆ ಎಂದಿದ್ದಾರೆ

Latest Videos

click me!