ನಟ ಒಮ್ಮೆ ಐಶ್ವರ್ಯಾರ ಜೊತೆ ತನ್ನ ಯಶಸ್ವಿ ದಾಂಪತ್ಯ ಜೀವನದ ಫಿಲ್ಮ್‌ಫೇರ್‌ನೊಂದಿಗಿನ ಬಗ್ಗೆ ಮಾತನಾಡುತ್ತಾ, ದಾಂಪತ್ಯದಲ್ಲಿ ಕಮ್ಯೂನಿಕೇಷನ್ ಅತ್ಯಗತ್ಯ ಮತ್ತು ಸಂಬಂಧದಲ್ಲಿ ಗೌರವ ಮತ್ತು ತಿಳುವಳಿಕೆ ಇರಬೇಕು ಎಂದು ಹೇಳಿದರು, 'ಸಾಕಷ್ಟು ಹೊಂದಾಣಿಕೆ ಇದೆ, ಸಾಕಷ್ಟು ಕೊಡಬೇಕು ಮತ್ತು ತೆಗೆದುಕೊಳ್ಳಬಹುದು. ಒಪ್ಪಂದಗಳು ಮತ್ತು ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಕಮ್ಯೂನಿಕೇಷನ್ ಮುಂದುವರಿಸುವುದು ಮುಖ್ಯ. ಅದು ನಾನು ಯಾವಾಗಲೂ ನಂಬಿರುವ ವಿಷಯ'.
ಬಾಲಿವುಡ್‌ನ ಅತ್ಯಂತ ಪವರ್‌ಫುಲ್ ಹಾಗೂ ಲವಿಂಗ್ ಕಪಲ್.
ಅಭಿಷೇಕ್ ಮತ್ತು ಐಶ್ವರ್ಯಾ ಫಸ್ಟ್ ಮೀಟ್ ಆಗಿದ್ದು, ಪ್ಯಾರ್ ಹೋ ಗಯಾ ಸಿನಮಾ ಸೆಟ್‌ನಲ್ಲಿ. ಅಭಿಷೇಕ್ ತನ್ನ ಉತ್ತಮ ಸ್ನೇಹಿತ ಬಾಬಿ ಡಿಯೋಲ್‌ರನ್ನು ಭೇಟಿಯಾಗಲು ಹೋಗಿದ್ದರು ಮತ್ತು ಐಶ್ವರ್ಯರನ್ನು ನೋಡಿದರು.
ಆದಾಗ್ಯೂ, ಇವರದ್ದು ಫಸ್ಟ್ ಸೈಟ್ ಪ್ರೇಮವಲ್ಲ; ಇಬ್ಬರೂ ನಂತರ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ಗುರು ಚಿತ್ರದ ಶೂಟಿಂಗ್ ಸಮಯದಲ್ಲಿ ಇದೆಲ್ಲಾ ಶುರುವಾಗಿದ್ದು.
ಕಜ್‌ರಾ ರೇ ಶೂಟಿಂಗ್ ಮಾಡುವಾಗ ಅಭಿಷೇಕ್ ಮತ್ತು ಐಶ್ವರ್ಯಾ ಇಬ್ಬರೂ ಪ್ರೀತಿಯಲ್ಲಿ ಸಿಲುಕಿದ್ದಾರೆ ಎಂದು ಹಲವರು ಭಾವಿಸಿದ್ದರು.
ಕರಣ್ ಜೋಹರ್ ಅವರ ಕಭಿ ಅಲ್ವಿದಾ ನಾ ಕೆಹ್ನಾ ಚಿತ್ರದ ಚಿತ್ರೀಕರಣದ ಸಮಯದ ಸಂದರ್ಶನವೊಂದರಲ್ಲಿ ಅಭಿಷೇಕ್ ನಮ್ಮ ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದರು. ಅವರು ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದಾರೆಂದು ಅರಿತಾಗ ಅಳಲು ಪ್ರಾರಂಭಿಸಿದರಂತೆ 'ಕಭಿ ಅಲ್ವಿದಾ ನಾ ಕೆಹ್ನಾ ಶೂಟಿಂಗ್‌ನಲ್ಲಿ ಕರಣ್ 'ಕಟ್' ಎಂದು ಹೇಳಿದ ನಂತರ ನಾನು ಸೈಡಿಗೆ ಹೋಗಿ ಅಳಲು ಪ್ರಾರಂಭಿಸಿದೆ. ಮೊದಲ ಬಾರಿಗೆ ನಾನು ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಅರಿತುಕೊಂಡೆ' ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಅಭಿಷೇಕ್ ಐಶ್ವರ್ಯಾಗೆ ಪ್ರಪೋಸ್ ಮಾಡಲು ನಿರ್ಧರಿಸಿದರು. ಟೊರೊಂಟೊದಲ್ಲಿ ಚಿತ್ರದ ಪ್ರೇಮಿಯರ್ ಶೋ ನಂತರ, ಅವರು ಗುರು ಸಿನಿಮಾದಲ್ಲಿ ಬಳಸಿದ ಉಂಗುರದೊಂದಿಗೆ ಪ್ರಫೋಸ್ ಮಾಡಿದಾಗ, ಐಶ್ವರ್ಯ ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು. ಅಭಿಷೇಕ್ ತಕ್ಷಣ ತನ್ನ ತಂದೆ ಅಮಿತಾಬ್ ಬಚ್ಚನ್ ಅವರಿಗೆ ಫೋನ್ ಮಾಡಿದ್ದರಂತೆ.
ಅವಳು ತುಂಬಾ ಫೆಂಟಾಟಾಸ್ಟಿಕ್ ಮತ್ತು ಇಬ್ಬರು ಒಟ್ಟಿಗೆ ತುಂಬಾ ಅದ್ಭುತವಾಗಿ ಕಾಣುತ್ತೀರಿ ಎಂಬ ಐಡಿಯಾಗಳನ್ನು ನೀಡುವ ಮೂಲಕ ಕರಣ್ ಜೋಹರ್ ಮ್ಯಾಚ್ ಮೇಕರ್ ಪಾತ್ರವನ್ನು ನಿರ್ವಹಿಸಿದ್ದಾರೆ, ಎಂದು ಅಭಿಷೇಕ್, ತಮ್ಮ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು.
ಫೆಬ್ರವರಿ 2006 ರಲ್ಲಿ, ಅಮಿತಾಬ್ ಅವರ ಸಹೋದರ ಅಜಿತಾಬ್ ಬಚ್ಚನ್ ಬೆಂಗಳೂರು ಮೂಲದ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿಯನ್ನು ಐಶ್ವರ್ಯಾ ಮತ್ತು ಅಭಿಷೇಕ್ ಅವರ ಜಾತಕಗಳೊಂದಿಗೆ ಭೇಟಿಯಾದ ನಂತರ, ಏಪ್ರಿಲ್ 20, 2007 ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.