Hrithik Roshan: ಬಾಲಿವುಡ್‌ 'ಗ್ರೀಕ್ ಗಾಡ್' ಕಣ್ಣೀರ ಕಥೆ.. ದೌರ್ಬಲ್ಯವನ್ನೇ ಬಲವನ್ನಾಗಿ ಮಾಡಿಕೊಂಡ ಹೃತಿಕ್ ರೋಷನ್‌

Published : Jul 04, 2026, 05:20 PM IST

ಮಾತನಾಡಲು ಆರಂಭಿಸಿದಾಗ ಪದಗಳು ಸಿಕ್ಕಿಹಾಕಿಕೊಳ್ಳುತ್ತವೆ. ಕಾಲಿನ ಉಗುರಿನಿಂದ ಹಿಡಿದು ತಲೆಯ ಕೂದಲಿನವರೆಗೆ ಇಡೀ ದೇಹವೇ ಒಂದು ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಹೃದಯ ಬಡಿತ ಜೋರಾಗುತ್ತದೆ ಮತ್ತು ಜನರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದಾರೆ ಎಂಬ ಅರಿವು ನಮ್ಮನ್ನು ನರಕಕ್ಕೆ ತಳ್ಳುತ್ತದೆ

PREV
18

ಇಂದು ಹೃತಿಕ್ ರೋಷನ್ (Hrithik Roshan) ಎಂದರೆ ಬಾಲಿವುಡ್‌ನ ಸ್ಟಾರ್ ನಟ, ಅದ್ಭುತ ನೃತ್ಯಗಾರ ಮತ್ತು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ. ಹೃತಿಕ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ನಟನೆಗೆ ಮರುಳಾಗದವರೇ ಇಲ್ಲ. ಆದರೆ, ಈ ಯಶಸ್ಸಿನ ಶಿಖರ ಏರುವ ಮುನ್ನ ಹೃತಿಕ್ ಅನುಭವಿಸಿದ ಅವಮಾನ, ನೋವು ಮತ್ತು ಹೋರಾಟದ ಕಥೆ ಯಾರಿಗಾದರೂ ಸ್ಫೂರ್ತಿ ನೀಡುವಂತಿದೆ. ಒಂದು ಕಾಲದಲ್ಲಿ "ನೀನು ನಟನಾಗಲು ಅಸಾಧ್ಯ" ಎಂದು ವೈದ್ಯರೇ ಅವರ ಮುಖಕ್ಕೆ ಹೊಡೆದಂತೆ ಹೇಳಿದ್ದರಂತೆ!

28

21ನೇ ವಯಸ್ಸಿನಲ್ಲಿ ಎದುರಾದ ಆಘಾತಕಾರಿ ಘಟನೆ:

ಹೃತಿಕ್ ರೋಷನ್ ಬಾಲ್ಯದಿಂದಲೂ ತೀವ್ರವಾದ ತೊದಲುವಿಕೆ (Stammering) ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಹೃತಿಕ್ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು. ಈ ಹಿಂದೆ ಫರಾ ಖಾನ್ ಅವರ 'ತೆರೆ ಮೇರೆ ಬೀಚ್ ಮೇ' ಚಾಟ್ ಶೋನಲ್ಲಿ ಮಾತನಾಡುತ್ತಾ ಹೃತಿಕ್ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

38

ಅವರು ಕೇವಲ 21 ವರ್ಷದ ಯುವಕನಾಗಿದ್ದಾಗ, ವೈದ್ಯರೊಬ್ಬರು ಅವರಿಗೆ ಬಹಳ ನಿಷ್ಠುರವಾಗಿ ಒಂದು ಸಲಹೆ ನೀಡಿದ್ದರು. "ನಿನಗೆ ನಟನಾಗಲು ಸಾಧ್ಯವಿಲ್ಲ, ಆ ಕನಸನ್ನು ಈಗಲೇ ಬಿಟ್ಟುಬಿಡು. ನಿನಗೆ ಇನ್ನೂ 21 ವರ್ಷ ವಯಸ್ಸು, ನಟನೆ ಬಿಟ್ಟು ಬೇರೆ ಯಾವುದಾದರೂ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಖವಾಗಿರು" ಎಂದು ಹೇಳಿದ್ದರಂತೆ.

48

ನರಕದಂತಿದ್ದ ಆ ದಿನಗಳು:

ತೊದಲುವಿಕೆಯು ಕೇವಲ ಮಾತಿನ ಸಮಸ್ಯೆಯಾಗಿರಲಿಲ್ಲ, ಅದು ಹೃತಿಕ್ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆಯೂ ಬಹಳಷ್ಟು ಪರಿಣಾಮ ಬೀರಿತ್ತು. "ನಾವು ಮಾತನಾಡಲು ಆರಂಭಿಸಿದಾಗ ಪದಗಳು ಸಿಕ್ಕಿಹಾಕಿಕೊಳ್ಳುತ್ತವೆ. ಅದು ಏಕೆ ಎಂದು ನಮಗೆ ತಿಳಿಯುವುದಿಲ್ಲ. ಕಾಲಿನ ಉಗುರಿನಿಂದ ಹಿಡಿದು ತಲೆಯ ಕೂದಲಿನವರೆಗೆ ಇಡೀ ದೇಹವೇ ಒಂದು ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಹೃದಯ ಬಡಿತ ಜೋರಾಗುತ್ತದೆ ಮತ್ತು ಜನರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದಾರೆ ಎಂಬ ಅರಿವು ನಮ್ಮನ್ನು ನರಕಕ್ಕೆ ತಳ್ಳುತ್ತದೆ" ಎಂದು ಹೃತಿಕ್ ತಮ್ಮ ವೇದನೆಯನ್ನು ಹಂಚಿಕೊಂಡಿದ್ದಾರೆ. ಅಂತಹ ವೇದನೆಯನ್ನು ಅನುಭಿಸಿದ ಹೃತಿಕ್ ರೋಶನ್ ಇಂದು ಅತ್ಯದ್ಭುತ ನಟ.

58

ಛಲ ಬಿಡದ ವಿಕ್ರಮ:

ತಮ್ಮ ಕನಸಿನ ಬಗ್ಗೆ ಯಾರಿಗಾದರೂ ಹೇಳಬೇಕೆಂದರೂ ಅವರಿಗೆ ಸಂಕೋಚವಾಗುತ್ತಿತ್ತು. 'ನಾನು ನಟನಾಗಬೇಕು' ಎಂಬ ವಾಕ್ಯವನ್ನೇ ನನಗೆ ಸ್ಪಷ್ಟವಾಗಿ ಹೇಳಲು ಬಾರದಿರುವಾಗ, ನಾನು ನಟನಾಗುವುದು ಹೇಗೆ ಸಾಧ್ಯ?" ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಆದರೆ ಹೃತಿಕ್ ಸೋಲೊಪ್ಪಿಕೊಳ್ಳಲಿಲ್ಲ. ವೈದ್ಯರ ಮಾತನ್ನು ಸವಾಲಾಗಿ ಸ್ವೀಕರಿಸಿದ ಅವರು, ಶಿಸ್ತು ಮತ್ತು ಕಠಿಣ ಪರಿಶ್ರಮದ ಹಾದಿ ಹಿಡಿದರು. ಕಾಲಕ್ರಮೇಣ ಅವರ ತೊದಲುವಿಕೆ ಕಡಿಮೆಯಾಗುತ್ತ ಬಂತು. ಒಂದು ಹಂತದಲ್ಲಿ ಅದು ನಿಂತೇ ಹೋಯ್ತು. ಇಂದು ನಟ ಹೃತಿಕ್ ರೋಶನ್ ಸ್ಟಾರ್ ನಟರಾಗಿ ಎಲ್ಲರಂತೆ ಡೈಲಾಗ್ ಹೇಳುತ್ತಾರೆ.

68

ಸ್ಪೀಚ್ ಥೆರಪಿ ಮತ್ತು ಕಠಿಣ ಅಭ್ಯಾಸ:

ಹೃತಿಕ್ ತಮ್ಮ ಮಾತಿನ ದೋಷವನ್ನು ಸರಿಪಡಿಸಿಕೊಳ್ಳಲು ಸ್ಪೀಚ್ ಥೆರಪಿಸ್ಟ್‌ಗಳ ಮೊರೆ ಹೋದರು. ಪ್ರತಿದಿನ ಗಂಟೆಗಟ್ಟಲೆ ಪತ್ರಿಕೆಗಳನ್ನು ಜೋರಾಗಿ ಓದುವುದು, ಧ್ವನಿಯ ಏರಿಳಿತಗಳನ್ನು (Voice Modulation) ಅಭ್ಯಾಸ ಮಾಡುವುದು ಮತ್ತು ಉಸಿರಾಟದ ವ್ಯಾಯಾಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. 

78

ಈ ನಿರಂತರ ಪ್ರಯತ್ನ ಮತ್ತು ಛಲದಿಂದಾಗಿ ಅವರು ಇಂದು ಸ್ಪಷ್ಟವಾಗಿ ಸಂಭಾಷಣೆಗಳನ್ನು ಹೇಳುವ ಮೂಲಕ ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಇಂದಿಗೂ ಕೂಡ ಆ ಹಳೆಯ ಆಘಾರಕಾರಿ ನೆನಪನ್ನು ಮರೆತಿಲ್ಲ ಹೃತಿಕ್ ರೋಶನ್.

88

ಸಿನಿಮಾ ಜೀವನದ ಅಪ್‌ಡೇಟ್:

ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಬಿಡುಗಡೆಯಾದ ಆಲಿಯಾ ಭಟ್ ನಟನೆಯ 'ಆಲ್ಫಾ' ಚಿತ್ರದಲ್ಲಿ ಹೃತಿಕ್ ರೋಷನ್ 'ಕಬೀರ್' ಎಂಬ ಪಾತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮ್ಮ ದೌರ್ಬಲ್ಯವನ್ನೇ ಬಲವನ್ನಾಗಿ ಮಾಡಿಕೊಂಡ ಹೃತಿಕ್ ಅವರ ಲೈಫ್ ಜರ್ನಿ ಹಾಗೂ ಸಿನಿಪಯಣ ನಿಜಕ್ಕೂ ಹಲವರಿಗೆ ಮಾದರಿ ಎನ್ನಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories