ನಟಿಯಾಗೋ ಮೊದಲು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ ನೋರಾ ಫತೇಹಿ !

First Published | Sep 8, 2021, 11:05 AM IST

ಬಾಲಿವುಡ್ ನಟಿ ನೋರಾ ಫತೇಹಿ ಮೂಲತಃ ಮೊರಾಕೊದವರು. ನೋರಾ ಜೀವನದಲ್ಲಿ ಯಶಸ್ಸನ್ನು ಗಳಿಸುವ ಮೊದಲು ಸಾಕಷ್ಟು ಕಷ್ಷಗಳನ್ನು ಎದುರಿಸಿದ್ದಾರೆ. ನಟಿಯಾಗುವ ಮುನ್ನ ನೋರಾ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಇಲ್ಲಿದೆ ವಿವರ.

ಡ್ಯಾನ್ಸರ್‌ ಕಮ್‌ ಆ್ಯಕ್ಟರ್ ನೋರಾ ಫತೇಹಿ ತನ್ನ ಸೆಕ್ಸಿ ಡ್ಯಾನ್ಸ್‌ ಮೂವ್‌ಗಳಿಗೆ ಫೇಮಸ್‌. ನೋರಾ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಆಗಾಗ ಶೇರ್‌ ಮಾಡುವ ಅದ್ಭುತ ಫೋಟೋಶೂಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಸಕ್ಕತ್‌ ಆ್ಯಕ್ಟಿವ್ ಆಗಿರುವ ನೋರಾ ಫತೇಹಿ 31.5 ಸಾವಿರಕ್ಕೂ ಹೆಚ್ಚು ಫ್ಯಾನ್ಸ್‌ ಹೊಂದಿದ್ದಾರೆ. ದೈನಂದಿನ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ನೋರಾ ಫತೇಹಿ ತಮ್ಮ ಫಾಲೋವರ್‌ಗಳನ್ನು ಮನೋರಂಜಿಸುತ್ತಾರೆ. 

Tap to resize

ಕೊನೆಯ ಬಾರಿಗೆ ಬಾಲಿವುಡ್ ವಾರ್‌ ಡ್ರಾಮಾ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ನೋರಾ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ  ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ಸಂಜಯ್ ದತ್ ಮತ್ತು ಮುಂತಾದವರು ಇದ್ದಾರೆ. ಪ್ರಸ್ತುತ, ಅವರು ಬಾಲಿವುಡ್‌ನ ಬೆಸ್ಟ್‌ ಡ್ಯಾನ್ಸರ್‌ಗಳಲ್ಲಿ ಒಬ್ಬರು ಹಾಗೂ ಹಿಂದಿ ಎಂಟರ್ಟೈನ್‌ ಬ್ಯುಸಿನೆಸ್‌ನಲ್ಲಿ ಅತ್ಯಂತ ಫೇಮಸ್‌ ದಿವಾ.

ಬಿ ಟೌನ್‌ನಲ್ಲಿ ಈ ಸ್ಥಾನವನ್ನು ಸಾಧಿಸಲು ನೋರಾ ಜೀವನದಲ್ಲಿ ತುಂಬಾ ಶ್ರಮಿಸಿದ್ದಾರೆ. ಬಿಗ್ ಬಾಸ್ 9 ಮತ್ತು ಜಲಕ್ ದಿಖ್ಲಾ ಜಾ 9 ರ ಭಾಗವಾಗಿದ್ದರು. ಈಗ ಅವರು ಡ್ಯಾನ್ಸ್ ಪ್ಲಸ್ 4, ಇಂಡಿಯಾಸ್‌ ಬೆಸ್ಟ್‌ ಡ್ಯಾನ್ಸರ್ ಮತ್ತು ಡ್ಯಾನ್ಸ್ ದೀವಾನೆ (ಸೀಸನ್ 3) ನಂತಹ ಅನೇಕ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ.

ಬಾಲಿವುಡ್‌ ಹೊರತು ಪಡಿಸಿ ನಟಿ ಟೆಂಪರ್, ಶೇರ್, ಲೋಫರ್, ಬಾಹುಬಲಿ: ದಿ ಬಿಗಿನಿಂಗ್ ಮೊದಲಾದ ಹಲವು ತೆಲುಗು ಚಿತ್ರಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಅಂತಹ ಕಡಿಮೆ ಅವಧಿಯಲ್ಲಿ, ಕೆರಿಯರ್‌ನಲ್ಲಿ ನೆಲೆಕಂಡು ಕೊಳ್ಳುವಲ್ಲಿ ನೋರಾ ಯಶಸ್ವಿಯಾಗಿದ್ದಾರೆ.

ನೋರಾ ಮೊರಾಕ್ಕೋ ಮೂಲದವರು. ಸೆಲೆಬ್ರೆಟಿಯಾಗುವ ಮೊದಲು ಅವರು ಮಾಲ್‌ನಲ್ಲಿ ರಿಟೈಲ್‌ ಸೇಲ್ಸ್ ಅಸೋಸ್ಸಿಯೆಟ್‌ ಆಗಿ ಕೆಲಸ ಮಾಡುತ್ತಿದ್ದರು. Bollywoodlife.com ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ನೋರಾ ಈ ವಿಷಯ ಹೇಳಿದರು.

ನನ್ನ ಮೊದಲ ಕೆಲಸವೆಂದರೆ ನನ್ನ ಹೈಸ್ಕೂಲ್‌ ಪಕ್ಕದಲ್ಲಿದ್ದ ಮಾಲ್‌ನಲ್ಲಿ ರಿಟೈಲ್‌ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಹಾಗಾಗಿ ನಾನು ನನ್ನ ತರಗತಿಗಳನ್ನು ಮುಗಿಸಿ ಅಲ್ಲಿಗೆ ಹೋಗುತ್ತಿದ್ದೆ. ಆಗ ನನ್ನ ವಯಸ್ಸು 16. ನಾನು ಅನೇಕ ಕಾರಣಗಳಿಗಾಗಿ ಕೆಲಸ ಮಾಡಬೇಕಾಗಿತ್ತು. ನನ್ನ ಕುಟುಂಬದಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆಗಳಿದ್ದವು. ಅದ್ದರಿಂದ ದುಡಿಯಲು ಪ್ರಾರಂಭಿಸಿದೆ,' ಎಂದು ನೋರಾ ಹೇಳಿದ್ದರು.

ನಟಿ ಸಂದರ್ಶನದಲ್ಲಿ ತನ್ನ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ  ಸಹ ಮಾತನಾಡಿದ್ದರು. ನಟ ಅಂಗದ್ ಬೇಡಿ ಜೊತೆಗಿನ ಬ್ರೇಕಪ್‌ ನಂತರ ಆಕೆ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಒಮ್ಮೆ ಅವಳು ಬಹಿರಂಗಪಡಿಸಿದಳು.ನೋರಾ ಫತೇಹಿ ತನ್ನ ಬ್ರೇಕಪ್‌ ಮತ್ತು ಅದನ್ನು ಹೇಗೆ ನಿಭಾಯಿಸಿದರು ಎಂಬುದರ ಕುರಿತು ಮಾತನಾಡಿದ್ದರು.

ಎಲ್ಲಾ ಹುಡುಗಿಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸುತ್ತಾರೆ. ನನಗೆ, ಇದು ಸ್ವಲ್ಪ ಕಷ್ಟಕರವಾಗಿತ್ತು ಏಕೆಂದರೆ ಇದು ನಂಬಲಾಗದ ಅನುಭವ. ನಾನು 2 ತಿಂಗಳು ಅನುಭವಿಸಿದ್ದೆ. ಖಿನ್ನತೆಯಿಂದ ಬಳಲುತ್ತಿರುವಾಗ ಜನರು ತಮ್ಮನ್ನು ತಾವು ವೀಕ್‌ ಎಂದು ಭಾವಿಸಬಾರದು. 
 

Latest Videos

click me!