ಪ್ರಮುಖ ಫ್ಯಾಷನ್ ಮ್ಯಾಗ್‌ಜೀನ್‌ ಕವರ್ ಗರ್ಲ್ ಆಗಿದ್ದೇಕೆ ಜಾಕ್ವೆಲಿನ್!

Suvarna News   | Asianet News
Published : Sep 07, 2021, 07:32 PM IST

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸುದ್ದಿಯಲ್ಲಿದ್ದಾರೆ. ಆದರೆ  ಯಾವುದೇ ಸಿನಿಮಾದ ಕಾರಣದಿಂದ ಅಲ್ಲ. ಪ್ರಮುಖ ಫ್ಯಾಷನ್ ಮ್ಯಾಗ್‌ಜೀನ್‌ವೊಂದು ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೃದಯವಂತಿಕೆ ಗುರುತಿಸಿದೆ ಮತ್ತು ಅವರ ಒಳ್ಳೆಯ ಕಾರ್ಯಗಳನ್ನು ಕವರ್ ಗರ್ಲ್ ಮಾಡುವ ಮೂಲಕ ಸೆಲೆಬ್ರೆಟ್‌ ಮಾಡಿದೆ.  

PREV
17
ಪ್ರಮುಖ ಫ್ಯಾಷನ್ ಮ್ಯಾಗ್‌ಜೀನ್‌ ಕವರ್ ಗರ್ಲ್ ಆಗಿದ್ದೇಕೆ ಜಾಕ್ವೆಲಿನ್!

ಜಾಕ್ವೆಲಿನ್ ಫರ್ನಾಂಡೀಸ್ ಕೋವಿಡ್ -19ರ ಕಠಿಣ ಸಮಯದಲ್ಲಿ ತನ್ನ ಯೋಲೋ ಫೌಂಡೇಶನ್‌ಗೆ ಸಹಾಯ ಹಸ್ತ ನೀಡಿದರು. ನಟಿ ಅಗತ್ಯವಿರುವ ಜನರಿಗೆ ಆಹಾರ, ಅಗತ್ಯ ವಸ್ತುಗಳು ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಿದ್ದಾರೆ. 

27

ಈಗ ನಟಿಯ ಈ ಒಳ್ಳೆಯ ಕೆಲಸಕ್ಕಾಗಿ, ಒಂದು ಫ್ಯಾಷನ್ ಮ್ಯಾಗ್‌ಜೀನ್‌ ಕೈಂಡನೆಸ್‌ ಇಶ್ಯೂವಿನ (kindness issue) ಮುಖಪುಟಕ್ಕಾಗಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸೆಲೆಕ್ಟ್‌ ಮಾಡಿದೆ. ಅವರ ಒಳ್ಳೆಯ ಕಾರ್ಯಗಳನ್ನು 'ದಯೆ ಸಂಚಿಕೆ' ಗೌರವಿಸುತ್ತದೆ ಮತ್ತು ಆಚರಿಸುತ್ತದೆ.

37

ತಮ್ಮ ಸಿನಿಮಾದ ಹೊರತಾಗಿ, ಈ ನಟಿ  ಅವರ ಸಮಾಜಮುಖಿ  ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಕವರ್‌ಪೇಜ್‌ನ ಫೋಟೋವೊಂದರಲ್ಲಿ ಜಾಕ್ವೆಲಿನ್‌  ಧರಿಸಿ ಲ್ಯಾವೆಂಡರ್ ಡ್ರೆಸ್‌ ಜೊತೆ ಪಚ್ಚೆ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಸೊಗಸಾದ ವಜ್ರದ ಚೋಕರ್ ಧರಿಸಿದ್ದಾರೆ. ಒಂದು ಕೈಯಲ್ಲಿ ಸುಂದರ ಹೂವಿನೊಂದಿಗೆ ಎಲ್ಲಾ ಕ್ಯೂಟ್‌ ಫೋಸ್‌ ನೀಡಿದ್ದಾರೆ. 

47

ಅವರು ಇನ್ನೊಂದು ಫೋಟೋದಲ್ಲಿ ಚಾಕೊಲೇಟ್ ಬ್ರೌನ್ ಪ್ರಿಂಟ್ ಸೂಟ್ ಅನ್ನು ಪಾಯಿಂಟ್-ಟೋ ಹೀಲ್ಸ್ ಜೊತೆ ಮ್ಯಾಚ್‌ ಮಾಂಡಿಕೊಂಡಿದ್ದಾರೆ. ಸ್ಲೀಕ್‌ ಹೇರ್‌ ಮತ್ತು  ಬೆಳ್ಳಿಯ ಬಳೆ ಮತ್ತು ನೇಕ್‌ಲೆಸ್‌ ಜೊತೆ ತಮ್ಮ ಲುಕ್‌ ಕಂಪ್ಲೀಟ್‌ ಮಾಡಿದ್ದಾರೆ. 

57

ಇನ್ನೊಂದು ಲುಕ್‌ನಲ್ಲಿ, ಅವರು ಪಿಂಕ್‌ ಫ್ಲೋರಲ್‌ ಪ್ರಿಂಟ್‌ನ ಪಫೆಡ್ ಆರ್ಗನ್ಜಾ ಬ್ಲೌಸ್‌ ಮತ್ತು ಸುಂದರ ಕಿವಿಯೋಲೆಗಳನ್ನು ನಟಿ ಧರಿಸಿರುವುದನ್ನು ಕಾಣಬಹುದು. ಜಾಕ್ವೆಲಿನ್‌ ತುಂಬಾ ಸುಂದರವಾಗಿ ಪೋಸ್‌ ನೀಡಿದ್ದಾರೆ

67

ಹಸಿರು-ನೀಲಿ-ಕಪ್ಪು ಜಂಪ್‌ಸೂಟ್‌ ಧರಿಸಿ ಜಾಕ್ವೆಲಿನ್ ಮ್ಯಾಗಜೀನ್‌ನ ಇನ್ನೊಂದು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಈ ಹಿಂದೆ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡರು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಿದರು. 

77

ಕೆಲಸದ ಮುಂಭಾಗದಲ್ಲಿ, ನಟಿ ತನ್ನ ಆಕೌಂಟ್‌ನಲ್ಲಿ ಅನೇಕ ದೊಡ್ಡ ಬ್ಯಾನರ್ ಚಿತ್ರಗಳನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಸರ್ಕಸ್, ರಾಮ್ ಸೇತು, ಕಿಕ್ 2, ಭೂತ್ ಪೋಲಿಸ್ ಮತ್ತು ಬಚ್ಚನ್ ಪಾಂಡೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories