47ರಲ್ಲಿ ಕೂಡಿ ಬಂದ ಕಂಕಣಭಾಗ್ಯ: ಮಣಿಪುರ ಹುಡುಗಿಯ ವರಿಸಿದ ನಟ ರಣ್‌ದೀಪ್ ಹೂಡಾ

First Published | Nov 30, 2023, 1:19 PM IST

ಬಾಲಿವುಡ್ ನಟ ರಣ್‌ದೀಪ್ ಹೂಡಾ ತಮ್ಮ ಬಹುಕಾಲದ ಗೆಳತಿ ಆಗಿರುವ ಮಾಡೆಲ್ ಕಾಮ್ ನಟಿ ಲಿನ್ ಲೈಸ್ರಾಮ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ನಟ ರಣ್‌ದೀಪ್ ಹೂಡಾ ಹಾಗೂ ಲಿನ್ ಲೈಸ್ರಾಮ್ ಅವರ ಮದುವೆ ಮಣಿಪುರ ಸಂಪ್ರದಾಯದಂತೆ ನಡೆದಿದ್ದು, ನವ ವಧುವರರ ಮುದ್ಧಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ನಟ ರಣ್‌ದೀಪ್ ಹೂಡಾ ಹರ್ಯಾಣದ ರೋಹ್ಟಕ್‌ನವರಾಗಿದ್ದು, 2001ರಲ್ಲಿ ಹಿಂದಿಯ ಮಾನ್ಸೂನ್ ವೆಡ್ಡಿಂಗ್ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. 

Tap to resize

ಇದಾದ ಬಳಿಕ ರಂಗ್ ರಾಸಿಯಾ, ಹೈವೇ, ಸರಬ್‌ಜಿತ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲದೇ ಕಿಕ್, ಸುಲ್ತಾನ್, ಭಾಗಿ 2 ಮುಂತಾದ ಯಶಸ್ವಿ ಸಿನಿಮಾಗಳಲ್ಲೂ ಹೂಡಾ ನಟಿಸಿದ್ದಾರೆ.

ನಿನ್ನೆ ಮಣಿಪುರದಲ್ಲಿ ಮೈಥಿಯಿ ಸಂಪ್ರದಾಯದಂತೆ ಕುಟುಂಬದವರು ನೆಂಟರಿಷ್ಟರು ಆತ್ಮೀಯರ ಸಮ್ಮುಖದಲ್ಲಿ ಈ ವಿವಾಹ ಸಮಾರಂಭ ನಡೆದಿದ್ದು ವಧು ವರ ಇಬ್ಬರು ಕ್ರೀಮ್ ಹಾಗೂ ಚಿನ್ನದ ಬಣ್ಣದ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. 

ಮಣಿಪುರ ಸಂಪ್ರದಾಯದಂತೆ ಈ ವಿವಾಹ ನಡೆದಿದ್ದು, ಇಲ್ಲಿ ಮದುವೆಯಲ್ಲಿ ವಧು ಧರಿಸುವ ಧಿರಿಸನ್ನು ಪೊಟ್ಲೊಯಿ ಅಥವಾ ಪೊಲ್ಲೊಯಿ ಎಂದು ಕರೆಯುತ್ತಾರೆ. ಮಣಿಪುರದ ಬೆಡಗಿಯನ್ನು ಮದುವೆಯಾಗುವ ಮೂಲಕ ಹರ್ಯಾಣದ 47 ವರ್ಷದ ಹೂಡಾ ಈಗ ಮಣಿಪುರದ ಅಳಿಯನಾಗಿದ್ದಾರೆ.

Latest Videos

click me!