Happy Birthday Anushka Sharma; ಅಪರೂಪದ ಫೋಟೋ ಮೂಲಕ ಪತ್ನಿಗೆ ವಿರಾಟ್ ಕೊಹ್ಲಿ ಪ್ರೀತಿಯ ವಿಶ್

Published : May 01, 2023, 12:38 PM ISTUpdated : May 01, 2023, 12:39 PM IST

ಅನುಷ್ಕಾ ಶರ್ಮಾ ಹುಟ್ಟುಹಬ್ಬ; ಅಪರೂಪದ ಫೋಟೋಗಳನ್ನು ಶೇರ್ ಮಾಡಿ ಪತ್ನಿಗೆ ವಿರಾಟ್ ಕೊಹ್ಲಿ ಪ್ರೀತಿಯ ವಿಶ್ ಮಾಡಿದ್ದಾರೆ.  

PREV
18
Happy Birthday Anushka Sharma; ಅಪರೂಪದ ಫೋಟೋ ಮೂಲಕ ಪತ್ನಿಗೆ ವಿರಾಟ್ ಕೊಹ್ಲಿ ಪ್ರೀತಿಯ ವಿಶ್

ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇಂದು (ಮೇ 1) ಹುಟ್ಟುಹಬ್ಬದ ಸಂಭ್ರಮ. ಅನುಷ್ಕಾ ಅವರಿಗೆ ಗಣ್ಯರು ಹಾಗೂ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ  ಅನುಷ್ಕಾ ಫೋಟೋಗಳು ಮತ್ತು ವಿಡಿಯೋಗಳು ಹರಿದಾಡುತ್ತಿವೆ. 

28

ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ಪತಿ ವಿರಾಟ್ ಕೊಹ್ಲಿ ಪ್ರೀತಿಯ ವಿಶ್ ಮಾಡಿದ್ದಾರೆ. ಪತ್ನಿಯ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

38

ವಿರಾಟ್ ಕೊಹ್ಲಿ ಶೇರ್ ಮಾಡಿರುವ ಪತ್ನಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. 

48

'ನಿನ್ನೆಲ್ಲ ಹುಚ್ಚುತನವನ್ನು ಪ್ರೀತಿಸುತ್ತೇನೆ. ನೀನು ನನಗೆ ಎಲ್ಲಾ. ಹುಟ್ಟುಹಬ್ಬ ಶುಭಾಶಯಗಳು' ಎಂದು ವಿರಾಟ್ ಕೊಹ್ಲಿ ಫೋಟೋ ಶೇರ್ ಮಾಡಿದ್ದಾರೆ. 

58

ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅನುಷ್ಕಾ ಶರ್ಮಾ ಮೊದಲ ಸಿನಿಮಾದಲ್ಲೇ ದೊಡ್ಡ ಸಕ್ಸಸ್ ಕಂಡರು. ಮೊದಲ ಸಿನಿಮಾದಲ್ಲೇ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆ ನಟಿಸಿ ಸೈ ಎನಿಸಿಕೊಂಡರು. 
 

68

ರಬ್ ನೆ ಬನಾ ದಿ ಜೋಡಿ ಸಿನಿಮಾ ಬಳಿಕ ಅನುಷ್ಕಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಟನೆ ಜೊತೆಗೆ ನಿರ್ಮಾಣದಲ್ಲೂ ಅನುಷ್ಕಾ ಸಕ್ಸಸ್ ಕಂಡಿದ್ದಾರೆ. ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. 

78

2013ರಲ್ಲಿ ಟೀಂ ಇಂಡಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದರು. ಶಾಂಪು ಜಾಹೀರಾತು ಒಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿಂದ ಪರಿಚಿತರಾದ ಇಬ್ಬರೂ ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದರು. 2017ರಲ್ಲಿ ಅನುಷ್ಕಾ, ವಿರಾಟ್ ಕೊಹ್ಲಿ ಜೊತೆ ಮದುವೆಯಾದರು. 

88

ಮದುವೆ ಮತ್ತು ಮಗುವಿಗೆ ಜನ್ಮ ನೀಡಿದ ಬಳಿಕ ಅನುಷ್ಕಾ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಝೀರೋ ಸಿನಿಮಾ ಬಳಿಕ  ಅನುಷ್ಕಾ ಮತ್ತೆ ಸಿನಿಮಾ ಮಾಡಿಲ್ಲ. ಸದ್ಯ ಚಕ್ದ ಎಕ್ಸ್ ಪ್ರೆಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 
 

Read more Photos on
click me!

Recommended Stories