ರಶ್ಮಿಕಾ ಭುಜದ ಮೇಲೆ ತಲೆ ಇಟ್ಟಿರುವ ವ್ಯಕ್ತಿ ಯಾರು? 'ನಾನು ಕೆಲವು ದಿನ ಸಿಗಲ್ಲ' ಎಂದಿದ್ದೇಕೆ ಕಿರಿಕ್ ಸುಂದರಿ?

First Published | Apr 30, 2023, 4:08 PM IST

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಸದ್ಯ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡು ಕಡೆ ರಶ್ಮಿಕಾ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.   

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ರಶ್ಮಿಕಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡು ಕೆಲವು ದಿನಗಳು ಯಾರಿಗೂ ಸಿಗಲ್ಲ ಎಂದು ಹೇಳಿದ್ದಾರೆ. 

Tap to resize

ಅಷ್ಟಕ್ಕೂ ರಶ್ಮಿಕಾ ಭುಜದ ಮೇಲೆ ತಲೆ ಇಟ್ಟಿರುವ ವ್ಯಕ್ತಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಅದು ಮಾತ್ಯಾರು ಅಲ್ಲ ಮಲಯಾಳಂ ಖ್ಯಾತ ನಟ ದೇವ್ ಮೋಹನ್. ರಶ್ಮಿಕಾ ಜೊತೆ ಸದ್ಯ ರೈನ್‌ಬೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಇತ್ತೀಚಿಗಷ್ಟೆ ರಶ್ಮಿಕಾ ಮಂದಣ್ಣ ಮತ್ತು ದೇವ್ ಮೋಹನ್ ರೈನ್‌ಬೋ ಸಿನಿಮಾಗೆ ಸಹಿ ಮಾಡಿದ್ದು ಆಗಲೇ ಚಿತ್ರೀಕರಣ ಸಹ ಪ್ರಾರಂಭಿಸಿದ್ದಾರೆ. ಇಬ್ಬರೂ ಚಿತ್ರೀಕರಣಕ್ಕಾಗಿ ಕೇರಳದ ಮುನ್ನಾರ್‌ಗೆ ತೆರಳಿದ್ದಾರೆ. ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಶೂಟಿಂಗ್ ಮಾಡಬೇಕಿದೆ ಹಾಗಾಗಿ ಕೆಲವು ದಿನ ಸಿಗಲ್ಲ ಎಂದು ಹೇಳಿದ್ದಾರೆ. 

ಅನೇಕ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ದೇವ್ ಮೋಹನ್ ಜೊತೆ ಇರುವ ಫೋಟೋ, ರೈನ್‌ಬೋ ಟೀಂ ಜೊತೆ ಇರುವ ಫೋಟೋ ಹಾಗೂ ಕುಟುಂಬದ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

ರೈನ್‌ಬೋ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಶಾಂತರುಬನ್‌ ನಿರ್ದೇಶನ ಮಾಡುತ್ತಿದ್ದಾರೆ. 
ರಶ್ಮಿಕಾ ಕೊನೆಯದಾಗಿ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

Latest Videos

click me!