ವಿನೋದ್ ಮೆಹ್ರಾ ಅವರ ತಾಯಿಯ ಇಚ್ಛೆಯಂತೆ ಮೊದಲು ಮೀನಾ ಬ್ರೋಕಾರನ್ನು ವಿವಾಹವಾದರು. ನಂತರ ವಿನೋದ್ ಮೆಹ್ರಾ ನಟಿ ಬಿಂದಿಯಾ ಗೋಸ್ವಾಮಿಗೆ ಮನಸೋತರು.
undefined
ವಿನೋದ್ ಮೆಹ್ರಾಗಿಂತ ಬಿಂದಿಯಾ ಗೋಸ್ವಾಮಿ 16 ವರ್ಷ ಚಿಕ್ಕವರು. ಕೆಲವು ತಿಂಗಳುಗಳ ಸಂಬಂಧದ ನಂತರ, ಇಬ್ಬರೂ ವಿವಾಹವಾದರು. ಆದರೆ ಈ ರಿಲೆಷನ್‌ಶಿಪ್ ಕೇವಲ 4 ವರ್ಷಗಳು ಮಾತ್ರ ಉಳಿಯಿತು ಮತ್ತು ಇಬ್ಬರು ಬೇರ್ಪಟ್ಟರು. ನಂತರ ಬಿಂದಿಯಾ ಚಲನಚಿತ್ರ ನಿರ್ದೇಶಕ ಜೆ.ಪಿ. ದತ್ತಾರನ್ನು ವಿವಾಹವಾದರು.
undefined
ಮತ್ತೊಂದೆಡೆ, ವಿನೋದ್ ಮೆಹ್ರಾ ಅವರು ಬಿಂದಿಯಾ ನಂತರ ಕಿರಣ್ ಅವರನ್ನು ವಿವಾಹವಾದರು. ಈ ಸಂಬಂಧದಿಂದ ಮಗಳು ಸೋನಿಯಾ ಮತ್ತು ಮಗ ರೋಹನ್ ಹೊಂದಿದ್ದರು ಮೆಹ್ರಾ.
undefined
ಆದರೆ 45 ನೇ ವಯಸ್ಸಿನಲ್ಲಿ ವಿನೋದ್ ಮೆಹ್ರಾರ ಮರಣದ ನಂತರ, ಪತ್ನಿ ಕಿರಣ್ ಮಕ್ಕಳೊಂದಿಗೆ ಕೀನ್ಯಾಕ್ಕೆ ತೆರಳಿದರು. ಮಗಳು ಸೋನಿಯಾಳನ್ನು ತನ್ನ ತಾಯಿಯ ಅಜ್ಜಿಯ ಮನೆಯಲ್ಲಿ ಬೆಳೆಸಲಾಯಿತು.
undefined
ಕೀನ್ಯಾ ಮತ್ತು ಲಂಡನ್‌ನಿಂದ ಅಧ್ಯಯನ ಮಾಡಿದ ಸೋನಿಯಾ 8 ನೇ ವಯಸ್ಸಿನಲ್ಲಿ ನಟನಾ ತರಬೇತಿ ಪಡೆಯಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ರಾಮ್ಯಾಟಿಕ್ ಆರ್ಟ್ಸ್ ಆಕ್ಟಿಂಗ್ ಪರೀಕ್ಷೆಯಲ್ಲಿ ಚಿನ್ನದ ಪದಕವನ್ನು ಪಡೆದರು.
undefined
17 ನೇ ವಯಸ್ಸಿನಲ್ಲಿ ಸೋನಿಯಾ ಮುಂಬೈಗೆ ಬಂದ ಅನುಪಮ್ ಖೇರ್ ಅವರ ಇನ್ಸ್ಟಿಟ್ಯೂಟ್ ಆಕ್ಟರ್ ಪ್ರಿಪರ್ಸ್ ನಿಂದ 3 ತಿಂಗಳ ಕೋರ್ಸ್ ಮಾಡಿದರು. ಜೊತೆಗೆ, ಸೋನಿಯಾ ಟ್ರೆಂಡ್ ಡ್ಯಾನ್ಸರ್ ಕೂಡ ಹೌದು.
undefined
2007 ರಲ್ಲಿ, ಸೋನಿಯಾ, ನಿರ್ದೇಶಕ ಅನಂತ್ ಮಹಾದೇವನ್ ಅವರ ಸಿನಿಮಾ 'ವಿಕ್ಟೋರಿಯಾ ನಂ. 203 ' ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.ಈ ಸಿನಿಮಾದಲ್ಲಿ ಅನುಪಮ್ ಖೇರ್, ಓಂ ಪುರಿ, ಜಿಮ್ಮಿ ಶೆರ್ಗಿಲ್ ಮತ್ತು ಜಾನಿ ಲಿವರ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದರು.
undefined
ಇದುವರೆಗೂ 4 ಚಿತ್ರಗಳಲ್ಲಿ ನಟಿಸಿರುವ ಸೋನಿಯಾ ಅವರು ಕೊನೆಯ ಬಾರಿಗೆ 'ರಾಗಿಣಿ ಎಂಎಂಎಸ್ 2' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರಗಳ ಜೊತೆಗೆ ಸೋನಿಯಾ ಟಿವಿಯಲ್ಲೂ ಕೆಲಸ ಮಾಡುವ ಮೆಹ್ರಾ ಪುತ್ರಿ ಎಂಟಿವಿಯ ಅನೇಕ ಕಾರ್ಯಕ್ರಮಗಳು ವಿಜೆಯಾಗಿ ಕೆಲಸ ಮಾಡಿದ್ದಾರೆ.
undefined
ಅದೇ ಸಮಯದಲ್ಲಿ, ವಿನೋದ್ ಮೆಹ್ರಾರ ಪುತ್ರ ರೋಹನ್ ಸೈಫ್ ಅಲಿ ಖಾನ್‌ರ 'ಬಜಾರ್' ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಜೊತೆಗೆ ಚಿತ್ರಾಂಗದ ಸಿಂಗ್ ಮತ್ತು ರಾಧಿಕಾ ಆಪ್ಟೆ ಕೂಡ ಇದರಲ್ಲಿ ನಟಿಸಿದ್ದಾರೆ.
undefined
ವಿನೋದ್ ಮೆಹ್ರಾ ನಟಿ ರೇಖಾರನ್ನು ಕೂಡ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ.
undefined
ಯಾಸಿರ್ ಉಸ್ಮಾನ್ ಅವರ ರೇಖಾ: ಆನ್ ಅನ್ಟೋಲ್ಡ್ ಸ್ಟೋರಿ ಪುಸ್ತಕದ ಪ್ರಕಾರ, ರೇಖಾ ಕೋಲ್ಕತ್ತಾದಲ್ಲಿ ವಿನೋದ್ ಮೆಹ್ರಾ ಅವರ ಮನೆಗೆ ಬಂದಾಗ, ವಿನೋದ್ ಅವರ ತಾಯಿ ಕಮಲಾ ಮೆಹ್ರಾ ಕೋಪದಿಂದ ಚಪ್ಪಲಿಗಳಲ್ಲಿ ಹೊಡೆಯಲ್ಲಿ ಹೋದರು. ರೇಖಾ ಅವರ ಪಾದಗಳನ್ನು ಮುಟ್ಟಲು ಹೋದಾಗ ರೇಖಾಳನ್ನು ದೂರ ತಳ್ಳಿದರು.
undefined
ರೇಖಾ ಮನೆಯ ಬಾಗಿಲಲ್ಲಿ ನಿಂತಿದ್ದಾ ಮೆಹ್ರಾ ತಾಯಿ ಅವರನ್ನು ಬೈಯುತ್ತಿದ್ದರು. ನಂತರ ವಿನೋದ್ ಮಧ್ಯಪ್ರವೇಶಿಸಿ ತಾಯಿಗೆ ವಿವರಿಸಿದರು. ಮತ್ತು ರೇಖಾಗೆ ಮನೆಗೆ ವಾಪಸ್ಸಾಗಿ ಸದ್ಯಕ್ಕೆ ಅಲ್ಲಿಯೇ ಇರಬೇಕೆಂದು ಹೇಳಿದರು. ಇದರಿಂದ ಅವರ ಮದುವೆ ಮುರಿಯಿತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
undefined