ನಾನಿ ನಟಿಸಿದ್ದ 'MCA' ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ವಿಜಯ್ ವರ್ಮ ಈಗ ಬಾಲಿವುಡ್‌ನಲ್ಲಿ ಸಾಲು ಸಾಲು ಪ್ರಾಜೆಕ್ಟ್‌ಗಳನ್ನು ಮಾಡ್ತಾ ಇದ್ದಾರೆ. 'ಮಿರ್ಜಾಪುರ್' ವೆಬ್ ಸರಣಿ, 'ಗಲ್ಲಿ ಬಾಯ್', 'ಡಾರ್ಲಿಂಗ್' ಹಿಂದಿ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಬಾಲಿವುಡ್ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಆದರೆ ಸಿನಿಮಾ, ವೆಬ್ ಸರಣಿಗಳಿಗಿಂತ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೊತೆಗಿನ ರಿಲೇಷನ್‌ಶಿಪ್‌ನಿಂದಲೇ ವಿಜಯ್ ವರ್ಮ ಹೆಚ್ಚು ಸುದ್ದಿಯಲ್ಲಿದ್ದಾರೆ.