ಬಾಡಿ ಶೇಮಿಂಗ್‌ಗೆ ಒಳಗಾಗಿದ್ದ ಸೌತ್‌ ಸೂಪರ್‌ಸ್ಟಾರ್‌, ಸಹ ನಟಿಯರೇ ಹೀಗೆಲ್ಲಾ ಲೇವಡಿ ಮಾಡ್ತಿದ್ರಂತೆ!

Published : Jan 12, 2024, 12:53 PM IST

ಬಾಡಿ ಶೇಮಿಂಗ್ ಅನ್ನೋದು ಈಗ ಎಲ್ಲಾ ಕಡೆ ಸಾಮಾನ್ಯವಾಗಿದೆ. ಅದ್ರಲ್ಲೂ ಸಿನಿ ಇಂಡಸ್ಟ್ರಿಯಲ್ಲಂತೂ ಹೇಳೋದೆ ಬೇಡ. ದಪ್ಪಗಾದ್ರೂ, ಸಣ್ಣಗಾದ್ರೂ ಟ್ರೋಲ್ ಆಗಿ ಬಿಡ್ತಾರೆ. ಹಾಗೆಯೇ ಸೌತ್‌ನಲ್ಲಿ ಸೂಪರ್‌ಸ್ಟಾರ್ ಆಗಿದ್ರೂ ಈ ಖ್ಯಾತ ನಟ ಬಾಡಿ ಶೇಮಿಂಗ್ ಎದುರಿಸಿದ್ರಂತೆ.

PREV
18
ಬಾಡಿ ಶೇಮಿಂಗ್‌ಗೆ ಒಳಗಾಗಿದ್ದ ಸೌತ್‌ ಸೂಪರ್‌ಸ್ಟಾರ್‌, ಸಹ ನಟಿಯರೇ ಹೀಗೆಲ್ಲಾ ಲೇವಡಿ ಮಾಡ್ತಿದ್ರಂತೆ!

ಬಾಲಿವುಡ್ ನಟ-ನಟಿಯರು ಬಾಡಿ ಹಾಗೂ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಲ್ಲಾ ಸಿನಿಮಾಗಳಲ್ಲಿ ಪರ್ಫೆಕ್ಟ್ ಆಗಿ ಕಾಣಿಸಬೇಕೆಂದು ವರ್ಕೌಟ್ ಮಾಡುತ್ತಲೇ ಇರುತ್ತಾರೆ, ಆದ್ರೆ ಸೌತ್‌ ನಟರು ತಮ್ಮ ಬಾಹ್ಯ ಲುಕ್‌ಗಿಂತ ಸಿನಿಮಾ ಸ್ಟೋರಿಗೆ ಹೆಚ್ಚು ಇಂಪಾರ್ಟೆನ್ಸ್ ಕೊಡುತ್ತಾರೆ. ಹೀಗಾಗಿಯೇ ಸೌತ್‌ನಲ್ಲಿ ಸೂಪರ್‌ಸ್ಟಾರ್ ಆಗಿದ್ರೂ ಈ ಖ್ಯಾತ ನಟ ಬಾಡಿ ಶೇಮಿಂಗ್ ಎದುರಿಸಿದ್ರಂತೆ.

28

ಆ ನಟ ಮತ್ಯಾರೂ ಅಲ್ಲ, ಸೌತ್‌ನ ಸೂಪರ್‌ಸ್ಟಾರ್ ವಿಜಯ್‌ ಸೇತುಪತಿ. ದಕ್ಷಿಣಭಾರತದ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈ ನಟ ಇತ್ತೀಚಿಗಷ್ಟೇ ಶಾರೂಕ್‌ ಖಾನ್ ಅಭಿನಯದ 'ಜವಾನ್‌' ಚಿತ್ರದಲ್ಲಿ ವಿಲನ್ ರೋಲ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ವಿಜಯ್ ಸೇತುಪತಿ ಖಡಕ್ ಲುಕ್ ಹಾಗೂ ಡೈಲಾಗ್ ಅಬ್ಬರಿಂದ ಹಿಂದಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದರು. 

38

ಸಂದರ್ಶನವೊಂದರಲ್ಲಿ ಮಾತನಾಡಿದ ನಟ, 'ಬಾಲಿವುಡ್ ಮತ್ತು ತಮಿಳು ಚಲನಚಿತ್ರೋದ್ಯಮದಲ್ಲಿ ನಾನು ಹೇಗೆ ಬಾಡಿ ಶೇಮಿಂಗ್‌ಗೆ ಒಳಗಾದೆ. ನನ್ನ ಸಹ ನಟ-ನಟಿಯರು ಸಹ ನನ್ನನ್ನು ಟೀಕಿಸುತ್ತಿದ್ದರು' ಎಂಬುದಾಗಿ ಹೇಳಿದರು. 

48

'ನಾನು ಕಾಣುವ ರೀತಿಗೆ ನಾನು ಸಾಕಷ್ಟು ಬಾಡಿ ಶೇಮಿಂಗ್ ಅನ್ನು ಎದುರಿಸಿದ್ದೇನೆ. ನನಗೆ ಪ್ರೇಕ್ಷಕರನ್ನು ಮೆಚ್ಚಿಸಲು ಬಾಡಿ ಮೆಂಟೈನ್‌ ಮಾಡಲು ಸಾಧ್ಯವಾಗುವುದಿಲ್ಲ. ಜನರು ನಾನಿದ್ದಂತೆಯೇ ನನ್ನನ್ನು ಸ್ವೀಕರಿಸಬೇಕು ಅನ್ನೋದು ನನ್ನ ಆಸೆ' ಎಂದು ವಿಜಯ್ ತಿಳಿಸಿದರು. 

58

'ಅಭಿಮಾನಿಗಳಿಂದ ಪ್ರೀತಿಯನ್ನು ಸ್ವೀಕರಿಸುವುದು ಎನರ್ಜಿ ಡ್ರಿಂಕ್‌ನಂತೆ. ಅಭಿಮಾನಿಗಳ ಮೆಚ್ಚುಗೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಭಿಮಾನಿಗಳ ಸಂಘಗಳಿಂದ ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ. ಅದು ನನಗೆ ಯಾವಾಗಲೂ ಶಕ್ತಿಯನ್ನು ನೀಡುತ್ತದೆ' ಎಂದು ನಟ ಹೇಳಿದರು.

68

'ನಾನು ಮೊದಲು ಮುಂಬೈಕರ್ ಮತ್ತು ಗಾಂಧಿ ಮಾತುಕತೆಗಾಗಿ ಮುಂಬೈಗೆ ಬರಲು ಪ್ರಾರಂಭಿಸಿದಾಗ, ಕೆಲವೇ ಜನರು ನನ್ನನ್ನು ತಿಳಿದಿದ್ದರು, ಈಗ, ಬಹಳಷ್ಟು ಜನರು ನನ್ನನ್ನು ತಿಳಿದಿದ್ದಾರೆ. ನನ್ನೊಂದಿಗೆ ಚಲನಚಿತ್ರಗಳು ಮತ್ತು ನನ್ನ ಪಾತ್ರಗಳ ಬಗ್ಗೆ ಮಾತನಾಡಲು ಬರುತ್ತಾರೆ. ಇದು ನನ್ನ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ' ಎಂದು ನಟ ಹೇಳಿದರು.

78

'ಡ್ರೆಸ್ಸಿಂಗ್ ವಿಚಾರಕ್ಕೆ ಬಂದಾಗಲೂ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗಲೂ ಆರಾಮದಾಯಕವಾಗಿರುವ ಬಟ್ಟೆ ಧರಿಸಲು ಬಯಸುತ್ತೇನೆ. ಆದರೆ ತುಂಬಾ ಸರಳವಾಗಿದ್ದರೂ ಜನರು ಪ್ರಶ್ನೆ ಮಾಡುತ್ತಾರೆ' ಎಂದು ವಿಜಯ್ ತಿಳಿಸಿದರು.
 

88

ವಿಜಯ್ ಸೇತುಪತಿ ಮತ್ತು ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್‌ಮಸ್ ಚಿತ್ರದಲ್ಲಿ ಕತ್ರಿನಾ ಕೈಫ್ ಜೊತೆ ನಟಿಸಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಈ ಚಿತ್ರವನ್ನು ಮೊದಲು ಡಿಸೆಂಬರ್‌ಗೆ ರಿಲೀಸ್‌ಗೆ ನಿಗದಿಪಡಿಸಲಾಗಿತ್ತು ಆದರೆ ಸಲಾರ್ ಮತ್ತು ಡಂಕಿಯೊಂದಿಗೆ ಘರ್ಷಣೆಯನ್ನು ತಪ್ಪಿಸಲು ಮುಂದೂಡಲಾಯಿತು. ಈಗ ಚಿತ್ರವು ಜನವರಿ 12ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.

Read more Photos on
click me!

Recommended Stories