ತೆಂಗಿನ ಮರಗಳ ಮಧ್ಯೆ ಲೆಹೆಂಗಾದಲ್ಲಿ ಮಿಂಚಿದ ಪೂಜಾ ಹೆಗ್ಡೆ: ಇದು ನಮ್ಮ ತುಳುನಾಡು ಎಂದ ಫ್ಯಾನ್ಸ್‌!

Published : Jan 12, 2024, 03:00 AM IST

ಬೋಲ್ಡ್ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ಕರಾವಳಿ ಮೂಲದ ಪೂಜಾ ಹೆಗ್ಡೆ ಇದೀಗ ಬಿಳಿ ದೋರಿ ಎಂಬ್ರಾಯ್ಡ್‌ ಲೆಹಂಗಾದಲ್ಲಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

PREV
17
ತೆಂಗಿನ ಮರಗಳ ಮಧ್ಯೆ ಲೆಹೆಂಗಾದಲ್ಲಿ ಮಿಂಚಿದ ಪೂಜಾ ಹೆಗ್ಡೆ: ಇದು ನಮ್ಮ ತುಳುನಾಡು ಎಂದ ಫ್ಯಾನ್ಸ್‌!

ಕರಾವಳಿ ಮೂಲದ ಪೂಜಾ ಹೆಗ್ಡೆ ಬೆಳೆದದ್ದು ಮುಂಬೈನಲ್ಲಿ. ಚಿತ್ರರಂದಲ್ಲಿ ಸಾಧಿಸಿದ್ದು ಕೂಡ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ. ಇವರು ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆ ಮದುವೆಗೆ ಪೂಜಾ ಹೆಗ್ಡೆ ಬಿಳಿ ದೋರಿ ಎಂಬ್ರಾಯ್ಡ್‌ ಲೆಹಂಗಾ ತೊಟ್ಟಿದ್ದರು. 

27

ತೆಂಗಿನ ಮರಗಳ ಮಧ್ಯೆ ನಿಂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಇದಕ್ಕೆ ಕೋಕನೆಟ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇವರು ಐವರಿ ಲೆಹಂಗಾ ಸೆಟ್‌ ಧರಿಸಿದ್ದರು.

37

ಈ ಐವರಿ ಲೆಹಂಗಾದ ಬೇಸ್‌ ಚಂದೇರಿ ಬೇಸ್‌ ಸ್ಕರ್ಟ್‌ನಲ್ಲಿ ಆಕರ್ಷಕ ಡೋರಿ ಎಂಬ್ರಾಡಯರಿ ಇದೆ. ಈ ಲೆಹಂಗಾ ಜತೆಗೆ ಎಂಬ್ರಾಡಯರಿ ಕಾಟನ್‌ ಸಿಲ್ಕ್‌ ಸಟಿನ್‌ ಬ್ಲೌಸ್‌ ಧರಿಸಿದ್ದಾರೆ. ಈ ಉಡುಗೆಯ ಜತೆ ಅಂದ ಹೆಚ್ಚಿಕೊಳ್ಳಲು ಚಿನ್ನ ಮತ್ತು ಪಚ್ಚೆ ಆಭರಣಗಳನ್ನು ಪೂಜಾ ಹೆಗ್ಡೆ ಧರಿಸಿದ್ದಾರೆ.  

47

ಪೂಜಾ ಹೆಗ್ಡೆ ಹೆಚ್ಚು ಮೇಕಪ್‌ ಮಾಡಿದಂತೆ ಕಾಣಿಸಲಿಲ್ಲ. ಐ ಶಾಡೋ, ಡಾರ್ಕನ್ಡ್‌ ಐಬ್ರೌಸ್‌, ಬ್ಲ್ಯಾಕ್‌ ಐಲೈನರ್‌, ರೆಪ್ಪೆ ಗೂದಲಿಗೆ ಮಸ್ಕರಾ, ಕಂದು ಬಣ್ಣದ ಲಿಪ್‌ ಶೇಡ್‌ ಇತ್ಯಾದಿಗಳನ್ನು ಬಳಸಿದ್ದಾರೆ. ಪೂಜಾ ಫೋಟೋ ನೋಡಿದ ನೆಟ್ಟಿಗರು ಇದು ನಮ್ಮ ತುಳುನಾಡು, ಬ್ಯೂಟಿಫುಲ್ ಎಂದು ಕಾಮೆಂಟ್‌ ಮಾಡಿದ್ದಾರೆ.

57

ಇತ್ತೀಚಿಗೆ ನಟಿಸಿದ ಪೂಜಾ ಹೆಗ್ಡೆ ಸಿನಿಮಾಗಳು ನಿರೀಕ್ಷಿತ ಗಳಿಕೆ ಮಾಡಿಲ್ಲ. ಚಿತ್ರಗಳು ಸತತ ಸೋಲು ಕಾಣುತ್ತಿವೆ. ರಾಧೆ ಶ್ಯಾಮ್, ಮೃಗ ಮತ್ತು ಆಚಾರ್ಯ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು.

67

ಸಾಲು ಸಾಲು ಸಿನಿಮಾಗಳಿಂದ ಪೂಜಾ ಹೆಗ್ಡೆ ಕೊಂಚ ಗ್ಯಾಪ್ ಪಡೆದು ತಮ್ಮ ವೈಯಕ್ತಿಕ ಜೀವನಕ್ಕೆ ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ. ಅದರ ಭಾಗವಾಗಿ, ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ವಿಹಾರಕ್ಕೆ ಹೋಗಿದ್ದರು.

77

ಪೂಜಾ ಹೆಗ್ಡೆ ಅವರಿಗೆ ಕರಾವಳಿ ಆಹಾರ ಅಂದ್ರೆ ಭಾರೀ ಇಷ್ಟ. ನಟಿ ಏಡಿ, ಮೀನು. ಪ್ರಾನ್ಸ್​ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದರ ಫೋಟೋಗಳನ್ನು ಸಹ ಶೇರ್ ಮಾಡುತ್ತಾರೆ.

Read more Photos on
click me!

Recommended Stories