SPB ಅಂತಿಮ ದರ್ಶನ ಮಾಡಿ ಬರ್ತಾ ಅಭಿಮಾನಿಯ ಚಪ್ಪಲಿ ಎತ್ಕೊಟ್ರು ನಟ ವಿಜಯ್

First Published | Sep 27, 2020, 7:48 PM IST

ಸರಳತೆಯಿಂದಲೇ ಸುದ್ದಿಯಾಗುವ ಸೌತ್ ನಟ ಇಳಯ ದಳಪತಿ ವಿಜಯ್ ಈಗ ಮತ್ತೊಮ್ಮೆ ತಮ್ಮ ಸರಳತೆಯಿಂದಲೇ ಸುದ್ದಿಯಾಗಿದ್ದಾರೆ.

ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂತಿಮ ದರ್ಶನ ಪಡೆದಿದ್ದಾರೆ ತಮಿಳು ನಟ ವಿಜಯ್. ಅಂತಿಮ ದರ್ಶನ ಮುಗಿಸಿ ಹಿಂದೆ ಬರುವಾಗ ನಡೆದ ಘಟನೆಯೊಂದು ಈಗ ನೆಟ್ಟಿಗರನ್ನು ಮೂಕರನ್ನಾಗಿಸಿದೆ.
ಸರಳತೆಯಿಂದಲೇ ಸುದ್ದಿಯಾಗುವ ಸೌತ್ ನಟ ಇಳಯ ದಳಪತಿ ವಿಜಯ್ ಈಗ ಮತ್ತೊಮ್ಮೆ ತಮ್ಮ ಸಜ್ಜನಿಕೆಯಿಂದಲೇ ಸುದ್ದಿಯಾಗಿದ್ದಾರೆ.
Tap to resize

ಎಸ್‌ಪಿಬಿ ಅವರ ಅಂತ್ಯಸಂಸ್ಕಾರ ನಡೆದ ತಿರುವಲ್ಲೂರಿಗೆ ಅಂತಿಮ ನಮನ ಸಲ್ಲಿಸಲು ಫ್ಯಾನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ತಮಿಳು ನಟ ವಿಜಯ್ ಅವರೂ ಸ್ಥಳಕ್ಕೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ.
ಎಸ್‌ಪಿಬಿ ಅಂತಿಮ ದರ್ಶನ ಮುಗಿಸಿ ತಮ್ಮ ಕಾರಿನತ್ತ ಬರುವಾಗ ಗದ್ದಲದಲ್ಲಿ ತಮ್ಮ ಕಾಲು ತಾಗಿ ಅಭಿಮಾನಿಯೊಬ್ಬರ ಚಪ್ಪಲಿ ಮಿಸ್ ಆಯಿತು. ತಕ್ಷಣ ಬಗ್ಗಿ ಅಭಿಮಾನಿಯ ಚಪ್ಪಲಿ ಕೈಯಲ್ಲೇ ಎತ್ತಿಕೊಂಡ ನಟ ಹೆಕ್ಕಿ ಫ್ಯಾನ್‌ಗೆ ಕೊಟ್ಟಿದ್ದಾರೆ.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಾಪ್ ನಟನ ಸರಳತೆಗೆ ಹ್ಯಾಟ್ಸಾಫ್ ಹೇಳಿದ್ದಾರೆ ನೆಟ್ಟಿಗರು. ನಟ ವಿಜಯ್ ಸರಳತೆಯನ್ನು ಮೆಚ್ಚಿನ ಫ್ಯಾನ್ಸ್‌ ಕಮೆಂಟ್‌ಗಳ ಸುರಿಮಳೆಯೇ ಬಂದಿದೆ.

Latest Videos

click me!