ದಿಶಾ ಸಾಲಿಯನ್ ಜೊತೆ ಫೋಟೋ ವೈರಲ್‌ - ಬಚ್ಚನ್‌ ಸೊಸೆಗೂ ಬಂತಾ ಕಂಟಕ?

First Published | Sep 27, 2020, 2:51 PM IST

ಈ ದಿನಗಳಲ್ಲಿ ಬಚ್ಚನ್‌ ಫ್ಯಾಮಿಲಿ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದೆ. ಸಂಸತ್ತಿನಲ್ಲಿ ಜಯ ಬಚ್ಚನ್ ಮಾಡಿದ  ಭಾಷಣ ಸಾಕಷ್ಷು ಟೀಕೆಗೆ ಒಳಗಾಯಿತು. ಈಗ  ದಿಶಾ ಸಲಿಯನ್ ಜೊತೆ  ಐಶ್ವರ್ಯಾ ರೈ ಅವರ ಹಳೆಯ ಚಿತ್ರ ವೈರಲ್ ಆಗಿದೆ. ಈ ಫೋಟೋ ಬಚ್ಚನ್‌ ಸೊಸೆಗೆ ತೊಂದರೆಯಾಗಲಿದೆಯೇ?

ಕಳೆದ ವಾರದಿಂದ, ಬಚ್ಚನ್ ಕುಟುಂಬವು ಜನರಿಂದ ಅನಗತ್ಯ ಬ್ಯಾಕ್‌ಲ್ಯಾಶ್‌ ಮತ್ತು ಕೋಪವನ್ನು ಎದುರಿಸುತ್ತಿದೆ.
ಸಂಸತ್ತಿನಲ್ಲಿ ಜಯ ಬಚ್ಚನ್ ಅವರ ಥಾಲಿ ಹೇಳಿಕೆಯಿಂದಾಗಿ. ಅಮಿತಾಬ್ ಬಚ್ಚನ್‌ನಿಂದ ಅಭಿಷೇಕ್ ಬಚ್ಚನ್ ಶ್ವೇತಾ ಬಚ್ಚನ್ ಹಾಗೂ ಐಶ್ವರ್ಯಾವರೆಗೆ ಎಲ್ಲರ ವಿರುದ್ಧ ಕಿಡಿಕಾರುತ್ತಿದ್ದಾರೆ ಜನ.
Tap to resize

ನೆಟ್ಟಿಗರು ಹಳೆ ಪೋಟೋಗಳನ್ನು ಶೇರ್‌ ಮಾಡಿ ಕುಟುಂಬದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದರು, ಆದರೆ ಕೆಲವರು ಮಾತ್ರ ಬಾಲಿವುಡ್ ಅನ್ನು ಬೆಂಬಲಿಸುವ ಜಯಾರ ಪ್ರಭಾವಶಾಲಿ ಭಾಷಣಕ್ಕೆ ಬೆಂಬಲ ನೀಡಿದ್ದಾರೆ.
ದಿಶಾ ಸಾಲಿಯನ್ ಜೊತೆ ಐಶ್ವರ್ಯಾ ರೈ ಅವರ ಫೋಟೋ ವೈರಲ್ ಆಗಿದೆ.
ವರದಿಗಳ ಪ್ರಕಾರ, ಇದು ಹಳೆಯ ಫೋಟೋ, ಐಶ್ವರ್ಯಾ ತನ್ನ ಚಿತ್ರ ಸರ್ಬ್ಜಿತ್ ಪ್ರಚಾರಕ್ಕಾಗಿ ಹೋಗಿದ್ದಾಗ ಮುಂಬೈನಲ್ಲಿ ತೆಗೆದ ಫೋಟೋವಾಗಿದೆ.
ಆಗ ದಿಶಾ ಐಶ್ವರ್ಯಾರ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ದಿಶಾಳ ಬಗ್ಗೆ ಗೊತ್ತಿದ್ದರೂ ಸಹ ಅವರ ಅಕಾಲಿಕ ನಿಧನದ ನಂತರ ನಟಿ ಏನನ್ನೂ ಹೇಳಲಿಲ್ಲ ಎಂದು ಹಲವರು ಆರೋಪಿಸಿದ್ದಾರೆ.
ಐಶ್ವರ್ಯಾ ಸುದ್ದಿ ಮತ್ತು ವಿವಾದಗಳಿಂದ ದೂರವಿರಲು ಬಯಸಿ, ಇಡೀ ಘಟನೆಯ ಬಗ್ಗೆ ಉದ್ದೇಶಪೂರ್ವಕವಾಗಿ ಮೌನವಾಗಿದ್ದಳು ಎಂದು ಕೆಲವರು ಆರೋಪಿಸಿದ್ದಾರೆ.

Latest Videos

click me!