ಮರೆಯಲಾಗದ ತೆರೆಯ ಮೇಲಿನ ಟೀಚರ್ಸ್ ಇವರು..!

First Published | Sep 5, 2020, 4:18 PM IST

ತೆರೆಯ ಮೇಲೆ ಲೆಕ್ಚರರ್ಸ್, ಟೀಚರ್ಸ್ ರೋಲ್ ಮಾಡಿ ಸಿನಿಪ್ರಿಯರ ಮನಸಲ್ಲಿ ಅಚ್ಚಳಿಯದೆ ಉಳಿದ ಸೌತ್ ಸ್ಟಾರ್ಸ್‌ ಇವರು

ನಟಿ ಸಾಯಿ ಪಲ್ಲವಿ ಹಿಟ್ ಆಗಿದ್ದೇ ತನ್ನ ಮಲರ್ ಪಾತ್ರದಿಂದ.
ಟಾಲಿವುಡ್‌ ನಟ ವಿಜಯ್ ದೇವರಕೊಂಡ ನಟನೆಯ ಗೀತ ಗೋವಿಂದನಂದಲ್ಲಿ ನಟ ಪಾತ್ರ ಮರೆಯಲಾಗದು. ಸ್ಟೂಡೆಂಟ್ಸ್‌ಗೇ ಕ್ರಶ್ ಆಗೋ ಹ್ಯಾಂಡ್ಸಂ ಲೆಕ್ಚರರ್ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ರು.
Tap to resize

ಮಗಮುನಿ: ತಮಿಳು ನಟ ಆರ್ಯ ನಟನೆಯ ಮಗಮುನಿ ಸಿನಿಮಾ ಇಂದಿಗೂ ಹಲವರಿಗೆ ಫೇವರೇಟ್. ಸಿನಿಮಾದಲ್ಲಿ ಆರ್ಯನ ಡ್ಯುಯಲ್ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು.
ಪ್ರೇಮಂ: ಶ್ರುತಿ ಹಾಸನ್ ಮತ್ತು ನಾಗ ಚೈತನ್ಯ ಅವರ ಪ್ರೇಮಂ ಸಿನಿಮಾದಲ್ಲಿ ಶ್ರುತಿ ಟೀಚರ್ ಆಗಿ ಮಿಂಚಿದ್ರು. ಸಿತಾರಾ ಪಾತ್ರ ಮಾಡಿದ ನಟಿ ಸಿಂಪಲ್ ಲುಕ್‌ನಲ್ಲಿ ಸಿನಿಪ್ರಿಯರ ಮನಸು ಗೆದ್ದಿದ್ರು.
ಘರ್ಷಣ: ಘರ್ಷಣ ಸಿನಿಮಾದಲ್ಲಿ ಆಸಿನ್ ಮಾಡಿದ ಶಿಕ್ಷಕಿ ಪಾತ್ರ ಆಕೆಯ ಕೆರಿಯರ್ ಬದಲಾಯಿಸಿತು. ಆಕೆಯ ಫ್ಯಾನ್ಸ್ ಬಹುವಾಗಿ ಮೆಚ್ಚಿಸ ಸಿನಿಮಾ ಇದು.
ಎನ್ನೈ ಅರಿಂದಾಲ್: ಅಜಿತ್ ಅಂದೂ ಇಂದೂ ತಮಿಳಿನ ಟಾಪ್ ನಟ. ಎನ್ನೈ ಅರಿಂದಾಲ್‌ನಲ್ಲಿ ಕೈಯಲ್ಲಿ ಚಾಕ್ ಹಿಡಿದ ನಟ ಶಿಕ್ಷಕನಾಗಿ ಸಿನಿಪ್ರಿಯರ ಮನಸು ಗೆದ್ದಿದ್ದರು.
ಪ್ರೇಮಂ: ನಟಿ ಸಾಯಿ ಪಲ್ಲವಿ ಅವರ ಮಲರ್ ಪಾತ್ರ ಎಲ್ಲರಿಗೂ ಮೋಸ್ಟ್ ಫೇವರೇಟ್. ಇಂಗ್ಲಿಷ್ ಶಿಕ್ಷಕಿಯಾಗಿ ಬರುವ ನಟಿಯ ಪಾತ್ರದ ಮೂಲಕವೇ ಸಾಯಿ ಪಲ್ಲವಿ ಹಿಟ್ ಆಗಿದ್ದು.
ಮಾಣಿಕ್ಯಕಲ್ಲು:ಸಂವೃದಾ ಸುನಿಲ್ ಮತ್ತು ಪೃಥ್ವಿರಾಜ್ ಅಭಿನಯದ ಮಾಣಿಕ್ಯ ಕಲ್ಲು ಸಿನಿಮಾದಲ್ಲಿ ಯುವ ನಟನನ್ನು ಶಿಕ್ಷಕನಾಗಿ ಕಾಣುತ್ತೇವೆ. ಹಳ್ಳಿಯ ಶಾಲೆಯ ಶಿಕ್ಷಕನಾಗಿ ಮಕ್ಕಳನ್ನು ಪ್ರೀತಿಸುವ ರೀತಿ ಇಷ್ಟವಾಗುತ್ತದೆ.
ಗೀತ ಗೋವಿಂದಂ: ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಸಿನಿಮಾ ನೋಡಿದ್ರೆ ಇಂತಹ ಒಬ್ರು ಲೆಕ್ಚರರ್ ನಮಲ್ಲೂ ಬೇಕು ಅನಿಸುವಂತಿದೆ. ಕ್ಲಾಸ್‌ನ ಹುಡುಗಿಯರಿಗೆಲ್ಲ ಇಷ್ಟವಾಗುವ ಹ್ಯಾಂಡ್ಸಂ ಲೆಕ್ಚರರ್ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ರು.

Latest Videos

click me!